News Karnataka Kannada
Thursday, April 18 2024
Cricket
ಬಿಹಾರ

ಪಾಟ್ನಾ: ವರನ ಕೈಯಲ್ಲಿದ್ದ ಹಾರ ಕಿತ್ತು ವಧುವಿನ ಕೊರಳಿಗೆ ಹಾಕಿದ ಮಾಜಿ ಪ್ರೇಮಿ!

Marriage
Photo Credit :

ಪಾಟ್ನಾ: ಭಾರತೀಯ ವಿವಾಹ ಸಮಾರಂಭಗಳು ಯಾವುದೇ ಸಿನಿಮಾಗೂ ಕಮ್ಮಿಯಿಲ್ಲ. ಸಿನಿಮಾದಂತೆಯೇ ಹಲವು ಟ್ವಿಸ್ಟ್, ರೋಚಕ ಘಟನಾವಳಿಗಳಿಗೆ ದೇಸಿ ಮದುವೆಗಳು ಸಾಕ್ಷಿಯಾಗಿವೆ. ಇದೀಗ ವಿಲಕ್ಷಣ ಘಟನೆಯಲ್ಲಿ, ಮದುವೆ ಮಂಟಪಕ್ಕೆ ಆಗಮಿಸಿದ ಮಾಜಿ ಪ್ರೇಮಿಯೊಬ್ಬ ತನ್ನ ವಧುವಿನ ಹಣೆಗೆ ಸಿಂಧೂರವಿಟ್ಟಿದ್ದಾನೆ.

ಬಿಹಾರದ ರಾಜಧಾನಿ ಪಾಟ್ನಾ ಈ ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದೆ. ಮಂಗಳವಾರ ತಡರಾತ್ರಿ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆ ಮದುವೆಯನ್ನು ನಿಲ್ಲಿಸಲು ಯತ್ನಿಸಿದ ಘಟನೆ ನಡೆದಿದೆ. ವಧು-ವರ ಪರಸ್ಪರ ಮಾಲೆಗಳನ್ನು ವಿನಿಮಯ ಮಾಡಿಕೊಳ್ಳುವ ಸಮಯಕ್ಕೆ ಸರಿಯಾಗಿ ಪ್ರೇಮಿ ವಿವಾಹ ಮಂಟಪಕ್ಕೆ ಆಗಮಿಸಿದ್ದು, ಮದುವೆಯು ನಾಟಕೀಯವಾಗಿ ಮಾರ್ಪಟ್ಟಿದೆ.

ನೇರವಾಗಿ ಮಂಟಪಕ್ಕೆ ತೆರಳಿದ ಪ್ರೇಮಿ, ವರನ ಕೈಯಿಂದ ಹಾರವನ್ನು ಕಿತ್ತು ವಧುವಿನ ಕೊರಳಿಗೆ ಹಾಕಿದ್ದಾನೆ. ಅಷ್ಟೇ ಅಲ್ಲ ಬಲವಂತವಾಗಿ ಆಕೆಯ ಹಣೆಯ ಮೇಲೆ ಸಿಂಧೂರವಿಟ್ಟಿದ್ದಾನೆ. ವಧು ತನ್ನನ್ನು ಬಿಟ್ಟು ಬಿಡುವಂತೆ ಆತನ ಬಳಿ ವಿನಂತಿಸಿಕೊಂಡಿದ್ದಾಳೆ. ಇನ್ನು ಘಟನೆಯಿಂದ ಮದುವೆಯ ಸ್ಥಳದಲ್ಲಿ ಹಾಜರಿದ್ದ ಅತಿಥಿಗಳು ಆಘಾತಕ್ಕೊಳಗಾಗಿದ್ದಾರೆ.

ಘಟನೆಯಿಂದ ಕೋಪಗೊಂಡ ಕೆಲವು ಅತಿಥಿಗಳು ಮತ್ತು ಸಂಬಂಧಿಕರು, ವೇದಿಕೆಯ ಮೇಲೆ ಹೋಗಿ ಆ ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ವಧು ತನ್ನ ಪ್ರಿಯಕರನನ್ನು ಬಿಡುವಂತೆ ವಿನಂತಿಸುತ್ತಲೇ ಇದ್ದಳು. ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡ್ರು.

ಇನ್ನು ಈ ಸಿನಿಮೀಯ ಶೈಲಿಯ ಘಟನೆಯಿಂದ ಬೇಸರಗೊಂಡ ವರನ ಕಡೆಯವರು ಮದುವೆಯನ್ನು ರದ್ದುಗೊಳಿಸಿದ್ದಾರೆ. ವರನನ್ನು ಅಕ್ಷಯ್ ಕುಮಾರ್ ಎಂದು ಗುರುತಿಸಲಾಗಿದೆ. ತನ್ನ ಸಂಬಂಧವನ್ನು ಮರೆಮಾಚಿದ್ದಕ್ಕಾಗಿ ವಧುವಿನ ಕಡೆಯವರು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಮದುವೆಯನ್ನು ರದ್ದುಗೊಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು