News Karnataka Kannada
Sunday, April 14 2024
Cricket
ದೇಶ

ತನ್ನ ಕಂಪನಿಯಿಂದಲೇ ಕಿಕ್‌ಔಟ್ ಆಗ್ತಾರಾ ಬೈಜು ರವೀಂದ್ರನ್‌?

Ravi
Photo Credit : News Kannada

ನವದೆಹಲಿ:  ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೈಜೂಸ್ ಕಂಪನಿಯ ಹೂಡಿಕೆದಾರರ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಬೈಜೂಸ್ ಸಂಸ್ಥೆಯನ್ನು 9 ವರ್ಷಗಳ ಕಾಲ ಕಟ್ಟಿ ಬೆಳೆಸಿದ ಸಂಸ್ಥಾಪಕ ಬೈಜು ರವೀಂದ್ರನ್ ಹಾಗೂ ಅವರ ಕುಟುಂಬ ಸದಸ್ಯರನ್ನು ಕಂಪನಿಯಿಂದ ಹೊರ ಹಾಕುವ ನಿರ್ಣಯಕ್ಕೆ ಬರಲಾಗಿದೆ. ಆದರೆ ಬೈಜೂಸ್ ಕಂಪನಿ ಇದನ್ನು ತಿರಸ್ಕರಿಸಿದೆ.

ಬೈಜೂಸ್ ಕಂಪನಿ ಹೂಡಿಕೆದಾರರ ಮಹತ್ವದ ಸಭೆಯನ್ನು ಇಂದು ನಡೆಸಲಾಯಿತು. ಇದರಲ್ಲಿ ಬೈಜೂಸ್ ಹೂಡಿಕೆದಾರರು CEO ರವೀಂದ್ರನ್ ಅವರನ್ನು ತೆಗೆದು ಹಾಕುವ ನಿರ್ಣಯವನ್ನು ಅಂಗೀಕರಿಸಲಾಯಿತು. ಕಂಪನಿಯ ಪ್ರಮುಖ ಷೇರುದಾರರಾದ ಪ್ರಾಸಸ್ NV ಮತ್ತು ಪೀಕ್ XV ಪಾಲುದಾರರು ರವೀಂದ್ರನ್ ಅವರನ್ನು ಕಂಪನಿಯಿಂದ ಕಿತ್ತು ಹಾಕಲು ಪಟ್ಟು ಹಿಡಿದಿದ್ದರು.

2015ರಲ್ಲಿ ಸ್ಟಾರ್ಟ್‌ ಅಪ್‌ ಕಂಪನಿಯನ್ನ ಆರಂಭಿಸಿದ್ದ ರವೀಂದ್ರನ್ ಅವರು ದೇಶದ ಅತಿ ದೊಡ್ಡ ಬೈಜೂಸ್ ಶಿಕ್ಷಣ ಸಂಸ್ಥೆಯನ್ನಾಗಿಸಿದ್ದರು. 9 ವರ್ಷದ ಬಳಿಕ ಉದ್ಯೋಗಿಗಳಿಗೂ ಸಂಬಳ ಕೊಡಲು ಆಗದ ಪರಿಸ್ಥಿತಿಗೆ ತಲುಪಿದ ರವೀಂದ್ರನ್ ಅವರನ್ನು ಕಂಪನಿಯಿಂದ ಕಿತ್ತು ಹಾಕುವ ಸಾಧ್ಯತೆ ಇದೆ. ಫೆಮಾ ನಿಯಮ‌ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಬೈಜು ರವೀಂದ್ರನ್ ಅವರು ದೇಶ ಬಿಟ್ಟು ಹೋಗದಂತೆ ತಡೆಯಲು ದೇಶದ ಎಲ್ಲಾ ವಿಮಾನ ನಿಲ್ದಾಣ, ಬಂದರುಗಳಿಗೆ ಇ.ಡಿಯಿಂದ ಲುಕ್ ಔಟ್ ನೊಟೀಸ್ ಜಾರಿಯಾಗಿದೆ.

ಇಂದಿನ ಇಜಿಎಂ ಸಾಮಾನ್ಯ ಸಭೆಯಲ್ಲಿ ಹೂಡಿಕೆದಾರರು ಸೇರಿದಂತೆ ಸುಮಾರು 40 ಮಂದಿ ರವೀಂದ್ರನ್ ಅವರನ್ನು ಕಂಪನಿಯಿಂದ ಹೊರಹಾಕಲು ಮತ ಹಾಕಿದ್ದಾರೆ. ಆದರೆ ಇಜಿಎಂ ಸಭೆಯ ಯಾವುದೇ ನಿರ್ಣಯಗಳನ್ನು ಅಂಗೀಕರಿಸಲು, ಕಾರ್ಯಗತ ಮಾಡಲು ಸಾಧ್ಯವಿಲ್ಲ. ಕಾರಣ ಕರ್ನಾಟಕ ಹೈಕೋರ್ಟ್‌ನಿಂದ ಬೈಜು ರವೀಂದ್ರನ್ ತಡೆಯಾಜ್ಞೆ ಪಡೆದಿರುವ ಕಾರಣ ನಿರ್ಣಯಗಳು ಕಾರ್ಯಗತ ಸಾಧ್ಯವಿಲ್ಲ. ಮಾರ್ಚ್ 13ರ ವರೆಗೆ ಬೈಜು ರವೀಂದ್ರನ್‌ಗೆ ತಡೆಯಾಜ್ಞೆ ನೆರವು ಸಿಗಲಿದೆ.

ಹೈಕೋರ್ಟ್ ತಡೆಯಾಜ್ಞೆಯನ್ನು ಹೂಡಿಕೆದಾರರು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಮಾರ್ಚ್ 13ರಂದು ವಿಚಾರಣೆಗೆ ಬರಲಿದೆ. ಕೋರ್ಟ್ ಆದೇಶ ಹೂಡಿಕೆದಾರರ ಪರವಾಗಿ ಬಂದರೆ ರವೀಂದ್ರನ್ ಕಂಪನಿಯಿಂದ ಕಿಕೌಟ್ ಆಗಲಿದ್ದಾರೆ. ಆದರೆ ರವೀಂದ್ರನ್ ಪರವಾಗಿ ಬಂದರೆ ಇಜಿಎಂ ನಿರ್ಣಯಗಳು ಹಾಗೇ ಉಳಿಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು