Categories: ಅಸ್ಸಾಂ

ಮುಂಬರುವ ಜನಗಣತಿಯನ್ನು ಡಿಜಿಟೀಕರಣ ಮಾಡಲಾಗುತ್ತದೆ: ಅಮಿತ್ ಶಾ ಘೋಷಣೆ

ಅಸ್ಸಾಂ, ಮೇ 10: ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಬರುವ ಜನಗಣತಿಯನ್ನು ಡಿಜಿಟೀಕರಣ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಅಸ್ಸಾಂ ರಾಜ್ಯದ ಅಮೀನ್‌ಗಾವೋ ಬಳಿ ನೂತನ ಸೆನ್ಸಸ್ ಕಚೇರಿಯ ಉದ್ಘಾಟನೆ ಮಾಡಿದ ಅವರು, ಮುಂದಿನ ಜನಗಣತಿ ಇ-ಸೆನ್ಸಸ್ ಅಗಿರಲಿದೆ ಎಂದಿದ್ದಾರೆ.

“ಸರಕಾರದ ನೀತಿನಿರ್ಧಾರದಲ್ಲಿ ಜನಗಣತಿ ಪಾತ್ರ ಬಹಳ ಮುಖ್ಯ ಇದೆ. ಹೀಗಾಗಿ, ಸೆನ್ಸಸ್ ಅನ್ನು ಆಧುನಿಕ ತಂತ್ರಜ್ಞಾನ ಮೂಲಕ ಬಹು ಆಯಾಮ, ವೈಜ್ಞಾನಿಕ ಮತ್ತು ನಿಖರವಾಗಿ ಜನಗಣತಿಯನ್ನು ಮಾಡಲಾಗುವುದು. ಈ ಸೆನ್ಸಸ್ ಮಾಹಿತಿಯನ್ನು ವಿಶ್ಲೇಷಿಸುವ ಸಮರ್ಪಕ ವ್ಯವಸ್ಥೆ ಕೂಡ ಮಾಡಲಾಗುವುದು” ಎಂದು ಅಮಿತ್ ಶಾ ಹೇಳಿದ್ದಾರೆ. ಇ-ಸೆನ್ಸಸ್ ಬಹಳ ನಿಖರವಾಗಿರಲಿದ್ದು, ಇದರ ಆಧಾರದ ಮೇಲೆ ಮುಂದಿನ 25 ವರ್ಷಗಳಲ್ಲಿ ದೇಶದ ಅಭಿವೃದ್ಧಿಯ ನಕ್ಷೆ ಮಾಡಲಾಗುವುದು.

“ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಸೆನ್ಸಸ್ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈಗ ಇ-ಸೆನ್ಸಸ್ ಕಾರ್ಯ ಕೈಗೊಳ್ಳುತ್ತೇವೆ. ಇದು ಬಹಳ ಕರಾರುವಾಕ್ ಆಗಿರುವ ಜನಗಣತಿಯಾಗಿರುತ್ತದೆ” ಎಂದು ಕೇಂದ್ರ ಗೃಹ ಸಚಿವ ಹಾಗು ಸಹಕಾರ ಖಾತೆ ಸಚಿವರೂ ಆದ ಅಮಿತ್ ಶಾ ತಿಳಿಸಿದ್ದಾರೆ.

“ಎಲ್ಲೆಲ್ಲಿ ಕಡಿಮೆ ಅಭಿವೃದ್ಧಿಯಾಗಿದೆ, ಎಸ್ಸಿ ಎಸ್ಟಿ ಸಮುದಾಯಗಳ ಪರಿಸ್ಥಿತಿ ಹೇಗಿದೆ, ವಿವಿಧ ಪ್ರದೇಶಗಳಲ್ಲಿ ಜನಜೀವನ ಪರಿಸ್ಥಿತಿ ಹೇಗಿದೆ ಎಂಬುದನ್ನಷ್ಟೇ ಸೆನ್ಸಸ್ ತೋರಿಸಬಹುದು. ಆದರೆ, ನಾವು ಇ-ಸೆನ್ಸಸ್‌ನಲ್ಲಿ ಜನನ ಮತ್ತು ಮರಣ ನೊಂದಣಿಯನ್ನು  ಸೇರಿಸುವ ಅವಕಾಶ ನೀಡುವ ಹೊಸ ಸಾಫ್ಟ್‌ವೇರ್ ತಯಾರಿಸಲಿದ್ಧೇವೆ. ಇದನ್ನು ವಿವಿಧ ರೀತಿಯಲ್ಲಿ ನಾವು ಬಳಸಲಿದ್ದೇವೆ. ಮಗು ಜನಸಿದ ಕೂಡಲೇ ಅದರ ಜನ್ಮದಿನಾಂಕ ಸಮೇತ ಮಾಹಿತಿಯು ಜನಗಣತಿ ರಿಜಿಸ್ಟರ್‌ಗೆ ಹೋಗುತ್ತದೆ. ಈ ಮಗುವಿನ ವಯಸ್ಸು 18 ವರ್ಷ ಆಗುತ್ತಲೇ ಮತದಾರನಾಗಿ ನೊಂದಾಯಿತವಾಗುತ್ತದೆ” ಎಂದು ಅಮಿತ್ ಶಾ ವಿವರಿಸಿದ್ದಾರೆ.

ನಾಗರಿಕ ನೊಂದಣಿ ವ್ಯವಸ್ಥೆಯಲ್ಲಿ 2024ರೊಳಗೆ ಪ್ರತಿಯೊಂದು ಜನನ ಮತ್ತು ಮರಣ ದಾಖಲಾಗಬೇಕೆಂಬ ಗುರಿ ಇಟ್ಟುಕೊಳ್ಳಲಾಗಿದೆ. ಈ ಮಾಹಿತಿ ಸೆನ್ಸಸ್‌ನಲ್ಲಿ ಸ್ವಯಂ ಆಗಿ ಸೇರ್ಪಡೆಯಾಗುತ್ತದೆ ಎಂದೂ ಗೃಹ ಸಚಿವರು ಮಾಹಿತಿ ನೀಡಿದ್ಧಾರೆ.

ಇನ್ನು, ನಿನ್ನೆ ಉದ್ಘಾಟನೆಯಾದ ನೂತನ ಸೆನ್ಸಸ್ ಭವನದಿಂದ ಎಲ್ಲಾ ಈಶಾನ್ಯ ರಾಜ್ಯಗಳಲ್ಲಿ ಜನಗಣತಿ ಕಾರ್ಯ ಸುಲಭವಾಗುತ್ತದೆ. ಪ್ರಮುಖ ದತ್ತಾಂಶಗಳನ್ನ ನಿಖರವಾಗಿ ವಿಶ್ಲೇಷಿಸಲು ಇದು ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮೊದಲಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Gayathri SG

Recent Posts

ಆಮ್ ಆದ್ಮಿ ಪಕ್ಷಕ್ಕೆ 7 ಕೋಟಿ ರೂ ವಿದೇಶಿ ಫಂಡಿಂಗ್: ತನಿಖೆ ಕೋರಿ ಗೃಹ ಸಚಿವಾಲಯಕ್ಕೆ ಇಡಿ ಪತ್ರ

ಆಮ್ ಆದ್ಮಿ ಪಕ್ಷಕ್ಕೆ  ವಿದೇಶಿ ಮೂಲಗಳಿಂದ 7 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಿಕ್ಕಿರುವ ಬಗ್ಗೆ ಎಫ್‌ಸಿಆರ್‌ಎ ತನಿಖೆಯನ್ನು ಕೋರಿ…

1 hour ago

ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಸಾವು

ಕೆರೆಯ ಬಳಿ ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗ…

1 hour ago

ಕಾಂಗ್ರೆಸ್ ಸರ್ಕಾರದ ಒಂದು ವರ್ಷ, ಕೊಲೆಗಡುಕರಿಗೆ ಹರ್ಷ: ಲೇವಡಿ ಮಾಡಿದ ಆರ್.‌ ಅಶೋಕ್‌

ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ರಾಜ್ಯ ಸರ್ಕಾರದ…

2 hours ago

ಚಿಕ್ಕಮಗಳೂರು: ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಣೆ

ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…

2 hours ago

ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ನಿಲ್ಲಿಸಿ ಪರಿಹಾರ ನೀಡಿ: ರಮೇಶ ಹೂಗಾರ ಮನವಿ

ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…

2 hours ago

ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್​ ಸಿಬಿಐಗೆ ಕೊಡಲ್ಲ: ಗೃಹ ಸಚಿವ

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…

3 hours ago