Categories: ಅಸ್ಸಾಂ

ಅಸ್ಸಾಂ- ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 5,000 ಮುಸ್ಲಿಮರ ತೆರವು

ಅಸ್ಸಾಂ :  ಅಸ್ಸಾಂ ನ ದಾರಂಗ್ ಜಿಲ್ಲೆಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಯೂರಿದ್ದ 5000 ಮುಸ್ಲೀಮರನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಸ್ಥಳೀಯ ಆಡಳಿತ ಸರ್ಕಾರವು ಅಕ್ರಮವಾಗಿ ವಾಸಿಸುತ್ತಿದ್ದ 800 ಮಂದಿ ವಲಸೆ ಮುಸ್ಲಿಂ ಕುಟುಂಬಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದೆ.

ನೂರಾರು ಪೊಲೀಸರು ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾದರು. ಇದೇ ವೇಳೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಎರಡು ಮಸೀದಿಗಳು ಹಾಗೂ ಮದ್ರಾಸಗಳನ್ನು ಕೂಡ ನೆಲಸಮ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ಟ್ವೀಟ್ ಮಾಡಿದ್ದು, ಕಾನೂನುಬಾಹಿರ ಅತಿಕ್ರಮಗಳ ವಿರುದ್ಧ ನಮ್ಮ ಅಭಿಯಾನ ಮುಂದುವರೆಸುತ್ತಿದ್ದೇವೆ. ದಾರಂಗ್‌ ನ ಜಿಲ್ಲಾ ಆಡಳಿತದ ಕಾರ್ಯದಿಂದ ಸಂತಸವಾಗಿದೆ. ಅಸ್ಸಾಂ ಪೊಲೀಸರಿಗೆ ಅಭಿನಂದನೆ.

ಸುಮಾರು 4500 ಬಿಘಾ ಜಮೀನುಗಳನ್ನು (1 ಬಿಘಾ ಅಂದರೆ ಸುಮಾರು 24 ಗುಂಟೆ ಪ್ರದೇಶ) ತೆರವುಗೊಳಿಸಿ, ಅಕ್ರಮವಾಗಿ ನೆಲಸಿದ್ದ 800 ಮಂದಿಯನ್ನು ಹೊರಹಾಕಿದ್ದಾರೆ. 4 ಕಾನೂನುಬಾಹಿರ ಧಾರ್ಮಿಕ ಕ್ಷೇತ್ರಗಳು ಹಾಗೂ ಖಾಸಗಿ ಸಂಸ್ಥೆಯನ್ನು ನೆಲಸಮಗೊಳಿಸಲಾಗಿದೆ ಎಂದಿದ್ದಾರೆ.

Sneha Gowda

Recent Posts

ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ

ಚಿಕನ್​​ ಶವರ್ಮಾ ತಿಂದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥದ್ದೇ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, 19 ವರ್ಷದ ಯುವಕನೊಬ್ಬ ಚಿಕನ್ ಶವರ್ಮಾ…

20 mins ago

ಮೇ 11ರಿಂದ 13ರವರೆಗೆ ವಾಮಂಜೂರಿನಲ್ಲಿ ಕೃಷಿ ಮೇಳ, ದಶಮ ಸಂಭ್ರಮ

ಇದೇ ಮೇ 11ರಿಂದ 13ರವರೆಗೆ ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗ ಜರುಗಲಿದೆ ಎಂದು ಗುರುಪುರ ವ್ಯವಸಾಯ ಸೇವಾ ಸಹಕಾರಿ…

22 mins ago

ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂನಿಂದ ವಾಟ್ಸಾಪ್ ನಂಬರ್ ಬಿಡುಗಡೆ

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂ ಎಂಟು ಜಿಲ್ಲೆಗಳಿಗೆ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಿದ್ದು, ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಯ ಜನರು…

36 mins ago

ಎಸ್‌ಎಸ್‌ಎಲ್‌ಸಿ 2,3ನೇ ಪರೀಕ್ಷೆ ಬರೆಯುವವರಿಗೆ ಸ್ಪೆಷಲ್‌ ಕ್ಲಾಸ್‌ ಯೋಜನೆ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

39 mins ago

ಚುನಾವಣೆ ಮುಕ್ತಾಯದ ಬೆನ್ನಲ್ಲೇ ಆಕ್ಟಿವ್ ಆದ ಶಾಸಕ ಪ್ರಭು ಚವಾಣ್

ಲೋಕಸಭಾ ಚುನಾವಣೆ ಮುಕ್ತಾಯ ಬೆನ್ನಲ್ಲೇ ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಚವಾಣ್ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ. ಅನಾರೋಗ್ಯ ಕಾರಣ…

53 mins ago

ಶಾಸಕ ಇಕ್ಬಾಲ್‌ ಹುಸೇನ್‌ ವಿಡಿಯೋ ವೈರಲ್‌ ಕೇಸ್‌ : ಇಬ್ಬರ ಬಂಧನ

ಶಾಸಕ ಇಕ್ಬಾಲ್‌ ಹಸೇನ್‌ ಅವರು ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವಿಡಿಯೋ ವೈರಲ್‌ ಮಾಡಿದ್ದ ಆರೋಪದಡಿ…

55 mins ago