News Karnataka Kannada
Monday, April 15 2024
Cricket
ಅಸ್ಸಾಂ

ಅಸ್ಸಾಂನಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ

China Rain
Photo Credit :

ಅಸ್ಸಾಂ:  ಅಸ್ಸಾಂನಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಗುಡುಗು ಸಹಿತ ವರ್ಷಧಾರೆಯಿಂದಾಗಿ ಈವರೆಗೆ 11 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರೀ ಪ್ರಮಾಣದ ಗುಡುಗು, ಮಿಂಚು ಜನರಿಗೆ ಸಂಕಷ್ಟ ತಂದೊಡ್ಡಿದೆ.ಚಂಡಮಾರುತಕ್ಕೆ ಸಿಕ್ಕು ದಿಬ್ರುಗಢದ ಖೇರ್ನಿ ಎಂಬಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಗುಡುಗು ಸಹಿತ ಚಂಡಮಾರುತ ಅಪ್ಪಳಿಸಿದ್ರಿಂದ ಈ ಗ್ರಾಮದಲ್ಲಿ ಮರಗಳು ನೆಲಕ್ಕುರುಳಿವೆ. ಈ ಘಟನೆಯಲ್ಲಿ ನಾಲ್ವರು ಬಲಿಯಾಗಿದ್ದಾರೆ. ಬರ್ಪೇಟಾ ಜಿಲ್ಲೆಯಲ್ಲಿ ಚಂಡಮಾರುತ ಮೂವರನ್ನು ಬಲಿ ಪಡೆದಿದೆ. ಗೋಲ್ಪಾರಾ ಜಿಲ್ಲೆಯಲ್ಲಿ ಸಿಡಿಲು ಬಡಿದು 15 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

ಭಾರೀ ಚಂಡಮಾರುತದಿಂದಾಗಿ ತಿನ್ಸುಕಿಯಾದಲ್ಲಿ ಮೂವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಚಂಡಮಾರುತ, ಗುಡುಗು, ಸಿಡಿಲು ಮತ್ತು ಮಳೆಯ ಹೊಡೆತಕ್ಕೆ ಹಲವು ಮನೆಗಳು ನೆಲಕ್ಕುರುಳಿವೆ.

ಅಪಾರ ಆಸ್ತಿ ಪಾಸ್ತಿ ಹಾನಿಯಾಗಿದೆ. ಮನೆ ಕಳೆದುಕೊಂಡಿರುವ ಸಾವಿರಾರು ಜನರು ಶಾಲೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಆಶ್ರಯ ಪಡೆದಿದ್ದಾರೆ. ನೂರಾರು ಮರಗಳು ಧರಾಶಾಯಿಯಾಗಿದ್ದು, ಎಲೆಕ್ಟ್ರಿಕ್‌ ಕಂಬಗಳು ಕೂಡ ಕೆಳಕ್ಕುರುಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು