ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಮಹಿಳೆಯರಿಂದ ಪ್ರತಿಭಟನೆ

ಅಮರಾವತಿ: ಟಿಡಿಪಿ ಮುಖಂಡ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ನಂದ್ಯಾಲ್‌ನಿಂದ ವಿಜಯವಾಡಕ್ಕೆ ಕರೆತರಲಾಗುತ್ತಿದ್ದ ಪೊಲೀಸ್ ವಾಹನವನ್ನು ತಡೆಯಲು ಯತ್ನಿಸಿದ ಟಿಡಿಪಿ ಕಾರ್ಯಕರ್ತರನ್ನು ಚಿಲಕಲೂರಿಪೇಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು  ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದು ಟಿಡಿಪಿಯ ಕೆಲವರಿಗೆ ಗಾಯಗಳಾಗಿವೆ. ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಕೆಲವು ಮಾಧ್ಯಮದವರೂ ಗಾಯಗೊಂಡಿದ್ದಾರೆ.

ನಾಯ್ಡು ಅವರ ಬಂಧನವನ್ನು ವಿರೋಧಿಸಿ ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆಯಲ್ಲಿ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಟಿಡಿಪಿ ಬೆಂಬಲಿಗರು ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದಾಗ ಉದ್ವಿಗ್ನತೆ ಉಂಟಾಗಿತ್ತು. ಪ್ರತಿಭಟನೆಯಿಂದಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ನಾಯ್ಡು ಅವರಿದ್ದ ಪೊಲೀಸ್ ವಾಹನವನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ತಡೆಹಿಡಿಯಲಾಗಿತ್ತು.

ನಾಯ್ಡು ಅವರೇ ವಾಹನದಿಂದ ಇಳಿದು ಬೆಂಗಾವಲು ಪಡೆಗೆ ದಾರಿ ಮಾಡಿಕೊಡುವಂತೆ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದರು. ಚಿಲಕಲೂರಿಪೇಟೆಯಲ್ಲಿ ಮಾಜಿ ಸಚಿವ ಪಿ.ಪುಲ್ಲಾರಾವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಹೆದ್ದಾರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ನಾಯ್ಡು ಅವರನ್ನು ಸಿಐಡಿ ಪೊಲೀಸರು ಶನಿವಾರ ಮುಂಜಾನೆ ನಂದ್ಯಾಲ್‌ನಲ್ಲಿ ಬಂಧಿಸಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಕೌಶಲ ಅಭಿವೃದ್ಧಿ ನಿಗಮದ ಹಗರಣದಲ್ಲಿ ಅವರನ್ನು ಬಂಧಿಸಲಾಗಿತ್ತು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

Ashika S

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

1 hour ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

2 hours ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

2 hours ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

2 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

2 hours ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

3 hours ago