ಪವನ್‌ ಕಲ್ಯಾಣ್‌ ಗೆ ವಿರೋಧಿಯಾಗಿ ಸ್ಪರ್ಧಿಸಲಿದ್ದಾರ ರಾಮಗೋಪಾಲ್ ವರ್ಮಾ: ಈ ಬಗ್ಗೆ ಹೇಳಿದ್ದೇನು?

ಅಮರಾವತಿ: ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಚಟುವಟಿಕೆಗಳೂ ಗರಿಗೆದರಿದ್ದು, ನಟ ಹಾಗೂ ಜನಸೇನಾ ಪಕ್ಷದ ನಾಯಕ ಪವನ್‌ ಕಲ್ಯಾಣ್‌ ಅವರು ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ.

ಕುತೂಹಲ ಎಂದರೆ ವಿವಾದಿತ ಚಿತ್ರ ನಿರ್ದೇಶಕ ರಾಮಗೋಪಾಲ್ ವರ್ಮಾ ಕೂಡ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿಕೊಂಡಿದ್ದರು. ಪವನ್‌ ಕಲ್ಯಾಣ್‌ ಗೆ ವಿರೋಧಿಯಾಗಿ ವರ್ಮಾ ಸ್ಪರ್ಧಿಸಲಿದ್ದಾರೆ ಎಂದು ವ್ಯಾಪಕ ಸುದ್ದಿ ಹಬ್ಬಿತ್ತು.

ಆದರೆ ಇಂದು ಮತ್ತೆ ಟ್ವೀಟ್‌ ಮಾಡಿ ಸ್ಪಷ್ಟನೆ ಕೊಟ್ಟಿದ್ದು, ನನ್ನ ಟ್ವೀಟ್ ಅನ್ನು ತಪ್ಪಾಗಿ ಓದಿದ ಎಲ್ಲ ಮೂರ್ಖರಿಗೆ ಸ್ಪಷ್ಟಪಡಿಸುತ್ತಿದ್ದೇನೆ, ನಾನು ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ. ಅದರಲ್ಲಿ ನಾನು ಪಿಠಾಪುರದಲ್ಲಿ ಚಿತ್ರೀಕರಿಸಿದ ಕಿರುಚಿತ್ರದ ಮೂಲಕ ಸ್ಪರ್ಧೆಗೆ ಪ್ರವೇಶ ಮಾಡುತ್ತೇನೆ. ನಾನು ಈ ತಪ್ಪು ಸಂವಹನಕ್ಕಾಗಿ ವಿಷಾದಿಸುವುದಿಲ್ಲ. ಏಕೆಂದರೆ ನಾನು ಎಲ್ಲೂ ಚುನಾವಣೆ ಎಂಬ ಪದವನ್ನು ಉಲ್ಲೇಖಿಸಿಲ್ಲ ಮತ್ತು ಮಾಧ್ಯಮಗಳು ಊಹಾಪೋಹದ ಉನ್ಮಾದಕ್ಕೆ ಸುದ್ದಿ ಹಬ್ಬಿಸಿತು ಎಂದು ಬರೆದುಕೊಂಡಿದ್ದಾರೆ.

ಇದೇ ವರ್ಷ ನಡೆಯುವ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಹಾಗೂ ಪವನ್‌ ಕಲ್ಯಾಣ್‌ ಅವರ ಜನಸೇನಾ ಪಕ್ಷ ಮೈತ್ರಿ ಮಾಡಿಕೊಂಡಿದೆ.

Ashika S

Recent Posts

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

1 min ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

19 mins ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

33 mins ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

44 mins ago

ಪೆನ್‌ಡ್ರೈವ್‌ ಕೇಸ್‌ : ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌, ಮಹಿಳೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಮುಖಂಡ, ವಕೀಲರೂ ಆಗಿರುವ ದೇವರಾಜೇಗೌಡರನ್ನು 14…

56 mins ago

ರೈತನ ಆರು ತಿಂಗಳ ಶ್ರಮ ಅರ್ಧಗಂಟೆಯಲ್ಲೇ ಹೋಮ

ಇಂದು ಸಂಜೆ ಸುರಿದ ಬಾರಿ ಮಳೆಗೆ ರೈತ ಬೆಳೆದಿದ್ದ ಬಾಳೆ ಫಸಲು ಸಂಪೂರ್ಣವಾಗಿ ನಾಶವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿಯಲ್ಲಿ…

1 hour ago