News Karnataka Kannada
Saturday, April 13 2024
Cricket
ಆಂಧ್ರಪ್ರದೇಶ

ದಕ್ಷಿಣ ಕಾಶಿಯಲ್ಲಿ ರಷ್ಯನ್ನರಿಂದ ರಾಹು-ಕೇತು ಪೂಜೆ

ರಾಹು-ಕೇತು ಪೂಜೆಗೆ ಹೆಸರುವಾಸಿಯಾಗಿರುವ ತಿರುಪತಿಯ ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ರಾಹು-ಕೇತು ಪೂಜೆ ವಿಶೇಷ ಪೂಜೆ ನೆರವೇರಿತು. ವಿಶೇಷ ಏನೆಂದರೆ ಈ ಪೂಜೆಯಲ್ಲಿ 30 ರಷ್ಯಾದ ಭಕ್ತರು ಪಾಲ್ಗೊಂಡಿದ್ದರು.
Photo Credit : News Kannada

ಆಂಧ್ರಪ್ರದೇಶ: ರಾಹು-ಕೇತು ಪೂಜೆಗೆ ಹೆಸರುವಾಸಿಯಾಗಿರುವ ತಿರುಪತಿಯ ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ರಾಹು-ಕೇತು ಪೂಜೆ ವಿಶೇಷ ಪೂಜೆ ನೆರವೇರಿತು. ವಿಶೇಷ ಏನೆಂದರೆ ಈ ಪೂಜೆಯಲ್ಲಿ 30 ರಷ್ಯಾದ ಭಕ್ತರು ಪಾಲ್ಗೊಂಡಿದ್ದರು.

ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ನಡೆದ ಸಾಂಸ್ಕೃತಿಕ ವಿನಿಮಯದಲ್ಲಿ ರಷ್ಯನ್ ಭಕ್ತರು ಪವಿತ್ರ ರಾಹು ಕೇತು ಪೂಜೆಯಲ್ಲಿ ತೊಡಗಿದರು.

ರಾಹು, ಕೇತು ಪೂಜೆಗೆ ಆಗಮಿಸಿದ್ದ ರಷ್ಯನ್ ಪ್ರವಾಸಿಗರು ಶಾಸ್ತ್ರೋಕ್ತವಾಗಿ ಭಗವಂತನಿಗೆ ನೈವೇದ್ಯ ಅರ್ಪಿಸಿ ನಮಸ್ಕರಿಸಿದ್ದಾರೆ. ಒಂದು ದಿನದ ಮುಂಚೆಯೇ ದೇವಾಲಯಕ್ಕೆ ಪ್ರವಾಸಿಗರು ಆಗಮಿಸಿದ್ದರು. ಅಲ್ಲಿದ್ದ ವಿದ್ವಾಂಸರಿಂದ ರಾಹು, ಕೇತು ಪೂಜೆಯ ಬಗ್ಗೆ ತಿಳಿದುಕೊಂಡು ಪೂಜೆ ನೆರವೇರಿಸಿದ್ದಾರೆ. ಪೂಜಾ ಕೈಂಕಾಯರ್ದಲ್ಲಿ ಭಾಗಿಯಾದ ವಿಡಿಯೋ ವೈರಲ್ ಆಗುತ್ತಿದೆ. ದೃಶ್ಯದಲ್ಲಿ ಪ್ರವಾಸಿಗರು ಭಾರತೀಯ ವೇಷ ಭೂಷಣಗಳಲ್ಲಿ ಕಾಣುತ್ತಿದ್ದಾರೆ. ನಿಯಮಿತ ಪಠಣದೊಂದಿಗೆ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಇನ್ನು ಮೊದಲ ಶತಮಾನದ ಶೈವ ಸಂತರು ಈ ದೇವಾಲಯದ ಬಗ್ಗೆ ಹಾಡಿ ಹೊಗಳಿದ ಕುರುಹು ಇದೆ. ಭಾರತದಲ್ಲಿ ಸೂರ್ಯ ಮತ್ತು ಚಂದ್ರಗ್ರಹಣ ಸಂಭವಿಸಿದಾಗ ಎಲ್ಲಾ ದೇವಾಲಯಗಳಯ ಮುಚ್ಚಲಾಗುತ್ತದೆ. ಆದರೆ, ಸೂರ್ಯ ಮತ್ತು ಚಂದ್ರ ಗ್ರಹಣಗಳ ಸಮಯದಲ್ಲಿ ತೆರೆದಿರುವ ಭಾರತದ ಏಕೈಕ ದೇವಾಲಯ ಇದಾಗಿದೆ.

ಈ ದೇವಾಲಯವು ರಾಹು-ಕೇತು ಪೂಜೆಗೆ ಹೆಸರುವಾಸಿಯಾಗಿದೆ. ಇಲ್ಲಿ ಪೂಜೆಯನ್ನು ಮಾಡುವುದರಿಂದ ರಾಹು ಮತ್ತು ಕೇತುಗಳ ಜಾತಕದ ಮೇಲೆ ಬೀರುವ ಪರಿಣಾಮಗಳಿಂದ ಜನರನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು