ತಿರುಪತಿ: ಸೂರ್ಯನನ್ನು ಅಧ್ಯಯನ ಮಾಡುವ ಉದ್ದೇಶದಿಂದ ಆದಿತ್ಯ ಎಲ್ 1 ಮಿಷನ್ನ ರಾಕೆಟ್ ಉಡಾವಣೆಗೆ ಮುನ್ನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ವಿಜ್ಞಾನಿಗಳು ಶುಕ್ರವಾರ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದರು.
ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಸೆಪ್ಟೆಂಬರ್ 2 ರಂದು ಬೆಳಿಗ್ಗೆ 11.50 ಕ್ಕೆ ಉಡಾವಣೆಯಾಗಲಿರುವ ಆದಿತ್ಯ ಮಿಷನ್ನ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಇಸ್ರೋ ವಿಜ್ಞಾನಿಗಳು ಪ್ರಮುಖ ಅಂತರಿಕ್ಷ ಉಡ್ಡಯನ ಕಾರ್ಯಾಚರಣೆಗಳಿಗೆ ಮೊದಲು ತಿರುಪತಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯವಾಗಿದೆ. ಜುಲೈನಲ್ಲಿ ಚಂದ್ರಯಾನ-3 ರಾಕೆಟ್ ಉಡಾವಣೆಗೂ ಮುನ್ನ ವಿಜ್ಞಾನಿಗಳು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ್ದರು.