News Karnataka Kannada
Friday, April 19 2024
Cricket
ಆಂಧ್ರಪ್ರದೇಶ

ನಭಕ್ಕೆ ಚಿಮ್ಮಿದ ಇಸ್ರೋದ ಮಹತ್ವಾಕಾಂಕ್ಷೆ ‘ಚಂದ್ರಯಾನ-3’

Isro (3)
Photo Credit : By Author

ಆಂಧ್ರಪ್ರದೇಶ: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ನೌಕೆ ಇದೀಗ (ಜು.14) ಉಡಾವಣೆಯಾಗಿದೆ. ಮಧ್ಯಾಹ್ನ 2.35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಚಂದ್ರಯಾನ-3 ನೌಕೆ ನಭಕ್ಕೆ ಚಿಮ್ಮಿದೆ.  ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಚಂದ್ರಯಾನ-3 ಯೋಜನೆಗೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಚಾಲನೆ ನೀಡಿದರು.

ಚಂದ್ರಯಾನ-3 ನೌಕೆ GSLV-MK3 ರಾಕೆಟ್ ಹೊತ್ತೊಯ್ಯಿದಿದೆ. ಚಂದ್ರಯಾನ-3 ನೌಕೆ ಲ್ಯಾಂಡರ್​, ರೋವರ್ ಒಳಗೊಂಡಿದೆ. ಚಂದ್ರನ ನೆಲದಲ್ಲಿ ಅಧ್ಯಯನ ನಡೆಸಲು ಇಸ್ರೋ ಕಳಿಸುತ್ತಿರುವ 3ನೇ ನೌಕೆ ಇದಾಗಿದೆ. ನೌಕೆ ಆಗಸ್ಟ್​ 23 ಅಥವಾ 24ರಂದು ಚಂದ್ರನ ಅಂಗಳಕ್ಕೆ ತಲುಪಲಿದೆ.

ಇಸ್ರೋ ಮಹತ್ತ್ವಾಕಾಂಕ್ಷೆಯ ಚಂದ್ರಯಾನ-3 ವಿಶೇಷತೆಗಳನ್ನು ನೋಡುವುದಾದರೆ, ಲ್ಯಾಂಡರ್​, ರೋವರ್ ಯಂತ್ರ ಒಳಗೊಂಡಿದೆ. ಚಂದ್ರಯಾನ-3 ನೌಕೆ ನಭಕ್ಕೆ ಹೊತ್ತೊಯ್ಯುವ GSLV-MK3 ರಾಕೆಟ್, GSLV-MK3 ರಾಕೆಟ್​​-43.5 ಮೀಟರ್ ಎತ್ತರ, 640 ಟನ್ ತೂಕ ಹೊಂದಿದೆ. ಚಂದ್ರಯಾನ-3 ಯೋಜನೆಗೆ 630 ಕೋಟಿ ರೂ. ಆಗಿರುವ ವೆಚ್ಚ ತಗುಲಿದೆ.
ಚಂದ್ರಯಾನ-3 ಇದು ಚಂದ್ರಯಾನ-2 ಮಿಷನ್​ ಅನುಸರಣೆಯಾಗಿದೆ. 2019ರಲ್ಲಿ ಚಂದ್ರನ ಮೇಲೆ ಇಳಿಯುವ ಕೊನೆಯ ಹಂತದಲ್ಲಿ ಮಿಷನ್​​ ವಿಫಲವಾಗಿತ್ತು. ಇದೀಗ ಎರಡನೇ ಪ್ರಯತ್ನದಲ್ಲಿರುವ ಇಸ್ರೋ ಮೃದುವಾಗಿ ಉಪಗ್ರಹ ಇಳಿಸಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು