ಅಮರಾವತಿ: ರಾಯಲಸೀಮಾ ಪ್ರದೇಶದಲ್ಲಿ ಗರಿಗೆದರಿದೆ ವಜ್ರ ಕೃಷಿ, ರೈತರ ಭೂಮಿಗೆ ಚಿನ್ನದ ಬೆಲೆ

ಅಮರಾವತಿ: ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದ ಕೆಲವು ಭಾಗಗಳಲ್ಲಿ ವಜ್ರ ಬೇಟೆ ಆರಂಭಗೊಂಡಿದ್ದು, ರೈತರೊಬ್ಬರಿಗೆ 2 ಕೋಟಿ ರೂಪಾಯಿ ಬೆಲೆಬಾಳುವ ವಜ್ರದ ಕಲ್ಲು ಸಿಕ್ಕಿದೆ ಎಂದು ವರದಿಯಾಗಿದೆ. ಈ ಕಾರಣದಿಂದ ರೈತರ ಜಮೀನುಗಳಿಗೆ ಚಿನ್ನದ ಬೆಲೆ ಬಂದಿದ್ದು, ಅನಂತಪುರ ಮತ್ತು ಕರ್ನೂಲು ಜಿಲ್ಲೆಗಳ ಗಡಿಯಲ್ಲಿರುವ ಗುಂತಕಲ್ ಮತ್ತು ಪತ್ತಿಕೊಂಡ ಭಾಗದ ನಡುವಿನ ಕೃಷಿ ಗದ್ದೆಗಳಲ್ಲಿ ಅಮೂಲ್ಯ ಕಲ್ಲುಗಳ ಬೇಟೆ ಆರಂಭವಾಗಿದೆ.

ತುಗ್ಗಲಿ ಮಂಡಲದ (ಬ್ಲಾಕ್) ಬಸಿನೆಪಲ್ಲಿಯ ರೈತರೊಬ್ಬರು ಖಾರಿಫ್ ಹಂಗಾಮಿನ ಕೃಷಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ವಜ್ರವೊಂದು ಪತ್ತೆಯಾಗಿತ್ತು. ಅವರು ವಜ್ರವನ್ನು 2 ಕೋಟಿ ರೂಪಾಯಿಗೆ ವ್ಯಾಪಾರಿಗೆ ಮಾರಾಟ ಮಾಡಿದ್ದಾರೆ ಎಂಬ ಸುದ್ದಿಗಳು ಹರಡಿವೆ. ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳ ಕೃಷಿ ಜಮೀನುಗಳು ಪ್ರತಿ ವರ್ಷ ಮಳೆಗಾಲದಲ್ಲಿ ವಜ್ರ ಬೇಟೆಗೆ ಹೆಸರುವಾಸಿಯಾಗಿದೆ.

ಸ್ಥಳೀಯ ಜನರು ಮತ್ತು ವಜ್ರದ ವ್ಯಾಪಾರಿಗಳು ಋತುವಿನ ಮೊದಲ ಮಳೆಗೆ ಮಣ್ಣಿನ ಮೇಲಿನ ಪದರವನ್ನು ಕೊಚ್ಚಿಕೊಂಡು ಹೋದಾಗ ಈ ವಜ್ರಗಳು ಮೇಲೆ ಬರುತ್ತವೆ ಎಂದು ನಂಬುತ್ತಾರೆ.

ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿಯೂ ಕೂಡ ರಾಯಲಸೀಮೆ ಅಮೂಲ್ಯವಾದ ಕಲ್ಲುಗಳು ಮತ್ತು ವಜ್ರಗಳ ವ್ಯಾಪಾರಕ್ಕೆ ಹೆಸರುವಾಸಿಯಾಗಿತ್ತು. ವಜ್ರಕರೂರು, ತುಗ್ಗಲಿ, ಜೊನ್ನಗಿರಿ, ಮಡ್ಡಿಕೇರಾ, ಪಗಿದಿರೈ, ಪೆರವಳಿ, ಮಹಾನದಿ, ಮಹದೇವಪುರಂ ಮುಂತಾದ ಪ್ರದೇಶಗಳು ವಜ್ರ ಬೇಟೆಗಾರರ ​​ಪಾಲಿಗೆ ಅಚ್ಚುಮೆಚ್ಚಿನ ತಾಣಗಳಾಗಿ ಪರಿಣಮಿಸಿವೆ.

ತೆಲುಗು ರಾಜ್ಯಗಳ ವಿವಿಧ ಭಾಗಗಳಿಂದ ವಜ್ರ ಬೇಟೆಗಾರರು ಈ ಪ್ರದೇಶಕ್ಕೆ ಬರುತ್ತಾರೆ. ಅನಂತಪುರ ಜಿಲ್ಲೆಯ ಗೂಟಿ ಪಟ್ಟಣದ ಹೋಟೆಲ್‌ಗಳು ಮತ್ತು ಲಾಡ್ಜ್‌ಗಳು ಇದೇ ಕಾರಣದಿಂದ ಭರ್ತಿಯಾಗಿದ್ದು, ಮಳೆಗಾಲ ಆರಂಭವಾಗುವ ವೇಳೆಗೆ ಇನ್ನಷ್ಟು ಜನರಿಂದ ತುಂಬಲಿದೆ. ಕೆಲವು ಜನರು ಜೂನ್ ಮತ್ತು ಸೆಪ್ಟೆಂಬರ್ ನಡುವೆ ತೆರೆದ ಪ್ರದೇಶಗಳಲ್ಲಿ ತಾತ್ಕಾಲಿಕ ಟೆಂಟ್‌ಗಳಲ್ಲಿ ವಾಸಿಸಿ ವಜ್ರ ಅರಸುವ ಕಾಯಕದಲ್ಲಿ ತೊಡಗುತ್ತಾರೆ.

2021ರಲ್ಲಿ ಜೊನ್ನಗಿರಿ ಗ್ರಾಮದಲ್ಲಿ ಮೂವರು ವಜ್ರ ಬೇಟೆಗಾರರು 2.4 ಕೋಟಿ ಮೌಲ್ಯದ ಅಮೂಲ್ಯ ಕಲ್ಲುಗಳನ್ನು ಪತ್ತೆ ಮಾಡಿದ್ದರು. ಕಳೆದ ವರ್ಷ ರೈತರೊಬ್ಬರು ಸುಮಾರು 40 ಲಕ್ಷ ರೂ.ಗೆ ಬೆಲೆಬಾಳುವ ಕಲ್ಲನ್ನು ಮಾರಾಟ ಮಾಡಿದ್ದರು. ಮತ್ತೊಬ್ಬ ರೈತ 30 ಕ್ಯಾರೆಟ್ ವಜ್ರವನ್ನು 1.4 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

Ashika S

Recent Posts

ಮತದಾನ ಜಾಗೃತಿಗಾಗಿ: ಪಂಜಿನ ಮೆರವಣಿಗೆ ಜಾಥಾಗೆ ಚಾಲನೆ

ಮೇ 07 ರಂದು ನಡೆಯವ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತದಾನ ಮಾಡಿ ಜಿಲ್ಲೆಗೆ ಮಾದರಿಯಾಗಬೇಕು ಎಂದು…

17 mins ago

ಮಹಾದೇವ್ ಬೆಟ್ಟಿಂಗ್ ಆಪ್ ಅವ್ಯವಹಾರ: ನಟ ಸಾಹಿಲ್ ಖಾನ್ ಬಂಧನ

ಮಹಾದೇವ್ ಬೆಟ್ಟಿಂಗ್ ಆಪ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ನಟ ಸಾಹಿಲ್ ಖಾನ್ ಬಂಧನಕ್ಕೊಳಗಾಗಿದ್ದರೆ. ಈ ನಟನನ್ನು ಬಂಧಿಸಿರುವುದಾಗಿ ಪೊಲೀಸರು…

40 mins ago

ಪ್ರೀತಿ ಮಾಡಿ ಅತ್ತೆಯನ್ನೇ ಮದುವೆಯಾದ ಅಳಿಯ: ಜೈ ಅಂದ ಮಾವ

ವ್ಯಕ್ತಿಯೊಬ್ಬ ತನ್ನ ಪತ್ನಿ ಮರಣದ ನಂತರ ಅತ್ತೆಯ ಜೊತೆ ಸಲುಗೆ ಬೆಳೆಸಿ, ಪ್ರೀತಿ ಮಾಡಿ ಮದುವೆಯಾಗಿರುವ ಘಟನೆ ಬಿಹಾರ ಬಂಕಾದ…

46 mins ago

ದಕ್ಷಿಣ ಅಮೆರಿಕದಲ್ಲಿ ರಸ್ತೆ ಮಧ್ಯೆ ಬಸ್​  ಪಲ್ಟಿಯಾಗಿ 14 ಪ್ರಯಾಣಿಕರ ದುರ್ಮರಣ

ದಕ್ಷಿಣ ಅಮೆರಿಕದ ಮೆಕ್ಸಿಕೋ ರಾಜಧಾನಿಯ ಹೊರವಲಯದಲ್ಲಿ ರಸ್ತೆ ಮಧ್ಯೆ ಬಸ್​  ಪಲ್ಟಿಯಾದ ಘಟನೆ ನಡೆದಿದೆ. 

1 hour ago

ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು !

ರಸ್ತೆ ಬದಿಯ ಚಿಕನ್ ಶವರ್ಮಾ ಸೇವಿಸಿ ಕನಿಷ್ಠ 12 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಮುಂಬೈನಲ್ಲಿ ನಡೆದಿದೆ. ನಗರದ ಗೊರೆಗಾಂವ್…

1 hour ago

ಲೋಕಸಭಾ ಚುನಾವಣೆ: ಇಂಡಿಗನತ್ತದಲ್ಲಿ ಮರು ಮತದಾನ ಆರಂಭ

: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಮರು…

1 hour ago