News Karnataka Kannada
Sunday, April 21 2024
Cricket
ಆಂಧ್ರಪ್ರದೇಶ

ಹೆತ್ತ ಮಗನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ  ತಾಯಿ

Crime.
Photo Credit :

ವಿಜಯವಾಡ: ಹೆತ್ತ ತಾಯಿಯೇ  ತನ್ನ ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ  ಘಟನೆ ವಿಜಯವಾಡದಲ್ಲಿ ನಡೆದಿದೆ.

ಆಕೆಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.ಮೃತ ವ್ಯಕ್ತಿ ಕುಡಿದ ಅಮಲಿನಲ್ಲಿ ತನ್ನ ತಾಯಿ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ.

ಮೃತ ಅಪ್ಪಲ ಬಾಲ ಕೋಟಯ್ಯ (35) ಟ್ರಕ್ ಚಾಲಕನಾಗಿದ್ದು, ಆರು ವರ್ಷಗಳ ಹಿಂದೆ ಕಂಚಿಕಚೆರ್ಲಾದ ಸಿರಿಶಾ ಅವರನ್ನು ಮದುವೆಯಾಗಿದ್ದರು. ಇತ್ತೀಚೆಗೆ ಅವರು ವಿಚ್ಛೇದನ ಪಡೆದಿದ್ದರು ಎಂದು ವರದಿ ಮಾಡಿದೆ. ಪೊಲೀಸರ ಪ್ರಕಾರ, ಭಾನುವಾರ ರಾಮನವಮಿ ಆಚರಿಸಲು ಚಿಟ್ಟೆಮ್ಮ ತನ್ನ ಮೊಮ್ಮಕ್ಕಳನ್ನು ಆಹ್ವಾನಿಸಿದ್ದರು.

ಮಗನ ಅಟ್ಟಹಾಸವನ್ನು ನಿಯಂತ್ರಿಸಲು ಸಾಧ್ಯವಾಗದೆ, ತನ್ನ ಹಾಗೂ ಮೊಮ್ಮಕ್ಕಳ ಪ್ರಾಣ ಉಳಿಸಿಕೊಳ್ಳಲು ಆಕೆ ಮಗನಿಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾಳೆ. ತೀವ್ರವಾದ ಹೊಡೆತದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕೊಲೆಯ ಆರೋಪದಲ್ಲಿ ಚಿಟ್ಟೆಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು