News Karnataka Kannada
Saturday, April 20 2024
Cricket
ಆಂಧ್ರಪ್ರದೇಶ

ಏ.8ರಿಂದ 22ರವರೆಗೆ ‘ವಿದ್ಯುತ್‌​ ರಜೆ’ಗಳನ್ನು ಘೋಷಿಸಿದ ಆಂಧ್ರಪ್ರದೇಶ ಸರ್ಕಾರ

Electric
Photo Credit :

ಆಂಧ್ರಪ್ರದೇಶದಲ್ಲಿ ವಿದ್ಯುತ್​ ಅಭಾವ ಎದುರಾಗಿದ್ದು,ಈ ಹಿನ್ನೆಲೆ ಗುರುವಾರ ಮಧ್ಯರಾತ್ರಿಯಿಂದಲೇ (ಏ.8ರಿಂದ 22ರವರೆಗೆ) ‘ವಿದ್ಯುತ್‌​ ರಜೆ’ಗಳನ್ನು ಸರ್ಕಾರ ಘೋಷಿಸಿದೆ.

ಇದರ ಪ್ರಕಾರ ಕೈಗಾರಿಕೆಗಳು ಪ್ರತಿವಾರದ ಜತೆಗೆ ಹೆಚ್ಚುವರಿ ಒಂದು ರಜೆಯನ್ನು ನೀಡಬೇಕು. ದಿನದ 24 ಗಂಟೆಯ ವಿದ್ಯುತ್​ ಬಳಕೆಯಲ್ಲಿ ಶೇ.50ರಷ್ಟು ವಿದ್ಯುತ್​ ಮಾತ್ರವೇ ಬಳಕೆ ಮಾಡಬೇಕು.

ಆಂಧ್ರ ಪ್ರದೇಶದಲ್ಲಿ ಅಗತ್ಯವಾದ ವಿದ್ಯುತ್​ನಲ್ಲಿ ದಿನಕ್ಕೆ 40ರಿಂದ 50 ಮಿಲಿಯನ್​ ಯೂನಿಟ್​ಗಳ ಕೊರತೆ ಉಂಟಾಗಿದ್ದು, ಲಭ್ಯ ವಿದ್ಯುತ್​ನಲ್ಲಿ ಗೃಹ ಬಳಕೆ ಮತ್ತು ಕೃಷಿ ಹಾಗೂ ಶಾಲಾ-ಕಾಲೇಜುಗಳ ಪರೀಕ್ಷೆ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳಿಗಾಗಿ ಒದಗಿಸಬೇಕಿದೆ. ಹೀಗಾಗಿ ‘ವಿದ್ಯುತ್‌​ ರಜೆ’ಗಳನ್ನು ಘೋಷಿಸಿದೆ.

ಇನ್ನು 15 ದಿನಗಳಲ್ಲಿ ವಿದ್ಯುತ್​ ಸಮಸ್ಯೆ ಪರಿಹಾರ ಆಗುವ ನಿರೀಕ್ಷೆ ಇದೆ ಎಂದು ಆಂಧ್ರ ಪ್ರದೇಶದ ವಿದ್ಯುತ್​ ವಿತರಣಾ ಕಂಪನಿಯ ಮುಖ್ಯಸ್ಥ ಜೆ.ಪದ್ಮ ಜನಾರ್ಧನರೆಡ್ಡಿ ಹೇಳಿದ್ದಾರೆ.

ಕೈಗಾರಿಕೆಗಳಿಗೆ ದೊಡ್ಡ ಹೊಡೆತ

ಕೈಗಾರಿಕೆಗಳು ಕಡ್ಡಾಯವಾಗಿ ವಾರಾಂತ್ಯದ ರಜೆಯೊಂದಿಗೆ ಮತ್ತೊಂದು ದಿನ ರಜೆ ಘೋಷಿಸಬೇಕು. ಪ್ರತಿ ಸಂಜೆ 6 ಗಂಟೆ ನಂತರ ಕೇವಲ ಪಾಳಿಯಲ್ಲಿ ಕೆಲಸ ಮಾತ್ರ ಮಾಡಿಸಬೇಕು. ದಿನದ 24 ಗಂಟೆಯ ವಿದ್ಯುತ್​ ಬಳಕೆಯಲ್ಲಿ ಶೇ.50ರಷ್ಟು ವಿದ್ಯುತ್​ ಮಾತ್ರವೇ ಬಳಕೆ ಮಾಡಬೇಕು. ಸರ್ಕಾರಿ, ಖಾಸಗಿ ಕಚೇರಿಗಳು, ಶಾಂಪಿಂಗ್​ ಮಾಲ್​ಗಳಲ್ಲಿ ಎಸಿ ಬಳಕೆಯನ್ನು ಅರ್ಧದಷ್ಟು ತಗ್ಗಿಸಬೇಕು. ವಿದ್ಯುತ್​ ಅವಲಂಬಿತ ಜಾಹೀರಾತು ಫಲಕಗಳನ್ನು ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ಬಳಕೆ ಮಾಡಬಾರದು ಎಂಬ ಸೂಚನೆ ನೀಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು