News Karnataka Kannada
Saturday, April 13 2024
Cricket
ಆಂಧ್ರಪ್ರದೇಶ

ಆಂಧ್ರ ಸರಕಾರದಿಂದ ಮುಸ್ಲಿಮರಿಗೆ ರಂಜಾನ್ ವಿನಾಯಿತಿ!

Ramzan
Photo Credit :
ಅಮರಾವತಿ: ಎಲ್ಲಾ ಮುಸ್ಲಿಂ ಸರಕಾರಿ ನೌಕರರು, ಶಿಕ್ಷಕರು ಮತ್ತು ಗುತ್ತಿಗೆ ನೌಕರರು ಏ. 3ರಿಂದ ಮೇ 2ರವರೆಗೆ ರಂಜಾನ್ ತಿಂಗಳ ಎಲ್ಲಾ ಕೆಲಸದ ದಿನಗಳಲ್ಲಿ ಸಂಜೆ ಒಂದು ತಾಸು ಮೊದಲು ಕಚೇರಿಗಳು / ಶಾಲೆಗಳನ್ನು ಬಿಡಲು ಅನುಮತಿ ನೀಡಿ ಆಂಧ್ರ ಪ್ರದೇಶ ಸರಕಾರ ಆದೇಶ ಹೊರಡಿಸಿದೆ.
ಏ. 3ರಿಂದ ಮೇ 2ರವರೆಗೆ ಅಗತ್ಯ ಆಚರಣೆಗಳನ್ನು ನಿರ್ವಹಿಸಲು, ಈ ಅವಧಿಯಲ್ಲಿ ಸೇವೆಗಳ ಅಗತ್ಯತೆಗಳ ಕಾರಣದಿಂದಾಗಿ ಅವರ ಉಪಸ್ಥಿತಿಯ ಅಗತ್ಯವಿರುವಾಗ ಹೊರತುಪಡಿಸಿ, ಇಸ್ಲಾಂ ಧರ್ಮವನ್ನು ಪ್ರತಿಪಾದಿಸುವ ಎಲ್ಲಾ ಸರಕಾರಿ ನೌಕರರು, ಶಿಕ್ಷಕರು, ಗುತ್ತಿಗೆ ಮತ್ತು ಹೊರಗುತ್ತಿಗೆಯಲ್ಲಿ ನೇಮಕಗೊಂಡಿರುವ ಸಿಬ್ಬಂದಿ ರಂಜಾನ್ ಪವಿತ್ರ ಮಾಸದಲ್ಲಿ ಎಲ್ಲಾ ಕೆಲಸದ ದಿನಗಳಲ್ಲಿ ಸಂಜೆ ಒಂದು ತಾಸು ಮುಂಚಿತವಾಗಿ ಕಚೇರಿಗಳು / ಶಾಲೆಗಳನ್ನು ಬಿಡಲು ಸರಕಾರವು ಈ ಮೂಲಕ ಅನುಮತಿ ನೀಡುತ್ತದೆ ಎಂದು ಆಂಧ್ರ ಪ್ರದೇಶ ಸರಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಇದಕ್ಕೂ ಮೊದಲು ದಿಲ್ಲಿ ಜಲ ಮಂಡಳಿಯು ರಂಜಾನ್ ಸಮಯದಲ್ಲಿ ಎಲ್ಲಾ ಮುಸ್ಲಿಂ ಉದ್ಯೋಗಿಗಳಿಗೆ ಪ್ರತಿದಿನ ಎರಡು ತಾಸುಗಳ ಕಾಲ ವಿರಾಮ ನೀಡಿತ್ತು. ಸೋಮವಾರ, ಡಿಜೆಪಿ ಮುಸ್ಲಿಂ ಉದ್ಯೋಗಿಗಳಿಗೆ ರಂಜಾನ್ ಸಮಯದಲ್ಲಿ ಅಂದರೆ ಏ. 3ರಿಂದ ಮೇ 2 ರವರೆಗೆ ಅಥವಾ ಈದುಲ್ ಫಿತ್ರ್ ದಿನಾಂಕವನ್ನು ಘೋಷಿಸುವವರೆಗೆ ಎರಡು ತಾಸುಗಳ ಕಾಲ ವಿರಾಮಕ್ಕೆ ಅನುಮತಿಸಿತ್ತು. ಕಚೇರಿ ಕೆಲಸಕ್ಕೆ ತೊಂದರೆಯಾಗದಂತೆ ಉಳಿದ ಕಚೇರಿ ಸಮಯದಲ್ಲಿ ಅವರು ತಮ್ಮ ಕೆಲಸವನ್ನು ಪೂರ್ಣಗೊಳಿಸುವ ಷರತ್ತು ವಿಧಿಸಲಾಗಿತ್ತು.
ಮಂಗಳವಾರ ಇನ್ನೊಂದು ಸುತ್ತೋಲೆ ಹೊರಡಿಸಿ, ರಂಜಾನ್ ದಿನಗಳಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ವಿರಾಮ ಘೋಷಿಸಿದ್ದನ್ನು ಹಿಂಪಡೆದಿತ್ತು.  ಹಿಂದಿನ ಸುತ್ತೋಲೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಹಿಂಪಡೆಯಲು ನಿರ್ಧರಿಸಿದೆ ಎಂದು ಹೇಳಿತ್ತು.
ಇದೀಗ ಆಂಧ್ರ ಸರಕಾರ ಮುಸ್ಲಿಂ ಉದ್ಯೋಗಿಗಳಿಗೆ ರಂಜಾನ್ ತಿಂಗಳ ಉಪವಾಸಕ್ಕೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು