News Karnataka Kannada
Monday, April 22 2024
Cricket
ಅಂಡಮಾನ್-ನಿಕೋಬಾರ್

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭೂಕಂಪನದ ಅನುಭವ

Earthquack.
Photo Credit :

ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭಾನುವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ.ಭಾನುವಾರ ಬೆಳಗ್ಗೆ 7.02ರ ಸುಮಾರಿಗೆ ಕಂಪನ ಕಂಡು ಬಂದಿದೆ. ಸ

ದ್ಯಕ್ಕೆ ಯಾವುದೇ ಸುನಾಮಿ ಅಲರ್ಟ್ ನೀಡಲಾಗಿಲ್ಲ. ಭೂಕಂಪದ ತೀವ್ರತೆ 4.9 ಎಂದು ರಿಕ್ಟರ್ ಮಾಪಕ ಸೂಚಿಸಿದೆ.

ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.9ರಷ್ಟು ದಾಖಲಾಗಿದೆ ಎಂದು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.

ಸದ್ಯಕ್ಕೆ ಯಾವುದೇ ಸಾವು ನೋವು ಸಂಭವಿಸಿದ ವರದಿಗಳು ಬಂದಿಲ್ಲ.ಸಮಯ ಸುಮಾರು 07:02:26 IST, ಅಕ್ಷಾಂಶ: 7.50 & ರೇಖಾಂಶ: 94.31, ಆಳ: 10 ಕಿಮೀ ,ಸ್ಥಳ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕ್ಯಾಂಪ್ಬೆಲ್ ಬೇ ಇಂದ 70ಕಿಮೀ ಈಶಾನ್ಯಕ್ಕೆ ಸಂಭವಿಸಿದೆ.

ಇತ್ತೀಚೆಗೆ ಪೋರ್ಟ್‌ಬ್ಲೇರ್‌ನ ಆಗ್ನೇಯ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಕ್ಕೂ ಮುನ್ನ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉತ್ತರ-ವಾಯುವ್ಯಕ್ಕೆ 276 ಕಿಮೀ ದೂರದಲ್ಲಿರುವ ದಿಗ್ಲಿಪುರ್ ಬಳಿ ಕಂಪನದ ಅನುಭವವಾಗಿತ್ತು.

ಭೂಕಂಪದ ಕೇಂದ್ರಬಿಂದು 15.66 ಅಕ್ಷಾಂಶ ಮತ್ತು 92.30 ರೇಖಾಂಶದಲ್ಲಿ 39 ಕಿ.ಮೀ ಆಳದಲ್ಲಿತ್ತು. ಮಾರ್ಚ್ 13 ರಂದು, ಭಾನುವಾರ ದ್ವೀಪಗಳಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ದಿಗ್ಲಿಪುರದ 25 ಕಿಮೀ ದೂರದಲ್ಲಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು