ಗುಲ್ಷನ್‌ ಕುಮಾರ್‌ ಹತ್ಯೆ ; ಕೊಲೆಗಾರನ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಕೋರ್ಟ್‌

ಮುಂಬೈ : ಎರಡು ದಶಕಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಬೀಳಿಸಿದ್ದ ಟಿ-ಸೀರೀಸ್ ಮ್ಯೂಸಿಕ್ ಕಂಪನಿ ಮುಖ್ಯಸ್ಥ ಗುಲ್ಷನ್ ಕುಮಾರ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಅಬ್ದುಲ್ ರೌಫ್ ಮರ್ಚೆಂಟ್ ಅವರು ಅಪರಾಧಿ ಎಂಬುದನ್ನು ಬಾಂಬೆ ಹೈಕೋರ್ಟ್ ಕೂಡ ತೀರ್ಮಾನಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತನೆನಿಸಿದ್ದ ಹಾಗೂ ಶಾರ್ಪ್ ಶೂಟರ್ ಕೂಡ ಆಗಿರುವ ಅಬ್ದುಲ್ ರೌಫ್​ನಿಗೆ 2002ರಲ್ಲೇ ಟ್ರಯಲ್ ಕೋರ್ಟ್​ನಿಂದ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಈತ ಪರೋಲ್ ಮೇಲೆ ಹೊರಬಂದು ತಪ್ಪಿಸಿಕೊಂಡು ಹೋಗಿದ್ದ. ಅಷ್ಟೇ ಅಲ್ಲ, ಭೂಗತವಾಗಿಯೇ ತನ್ನ ಅಪರಾಧ ಕೃತ್ಯಗಳನ್ನ ನಡೆಸಿಕೊಂಡು ಬರುತ್ತಿದ್ಧಾನೆ. ಇದೇ ವೇಳೆ, 2016ರಲ್ಲಿ ಬಾಂಗ್ಲಾದೇಶದ ಗಡಿಭಾಗದಲ್ಲಿ ಈತ ಮತ್ತೆ ಬಂಧಿತನಾದರೂ ಮತ್ತೆ ತಪ್ಪಿಸಿಕೊಂಡು ಹೋಗಿದ್ದ. ಈತನ ಕ್ರಿಮಿನಲ್ ಹಿನ್ನೆಲೆ ಹಾಗೂ ವರ್ತನೆಯನ್ನು ಬಾಂಬೆ ಹೈಕೋರ್ಟ್ ಪೀಠ ತರಾಟೆಗೆ ತೆಗೆದುಕೊಂಡಿದೆ. ಅಬ್ದುಲ್ ರೌಫ್ ಮರ್ಚೆಂಟ್​ಗೆ ಶಿಕ್ಷೆಯಲ್ಲಿ ಹೆಚ್ಚು ವಿನಾಯಿತಿ ನೀಡಲು ಆಗುವುದಿಲ್ಲ ಎಂದು ನ್ಯಾ ಎಸ್ ಎಸ್ ಜಾಧವ್ ಮತ್ತು ಎನ್ ಆರ್ ಬೋರ್ಕಾ ಅವರಿಬ್ಬರಿರುವ ಹೈಕೋರ್ಟ್ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಆದರೆ, ದರೋಡೆ, ಕಳ್ಳತನ ಕೃತ್ಯ ಎಸಗಿದ ಆರೋಪಕ್ಕೆ ಐಪಿಸಿ ಸೆಕ್ಷನ್​ಗಳಾದ 392 ಮತ್ತು 397ರ ಅಡಿಯಲ್ಲಿ ಈತನಿಗೆ ನೀಡಲಾಗಿದ್ದ ಶಿಕ್ಷೆಯಿಂದ ಮಾತ್ರ ವಿನಾಯಿತಿ ನೀಡಲಾಗಿದೆ.
ಅಬ್ದುಲ್ ಮರ್ಚೆಂಟ್ ಸೆಷೆನ್ಸ್ ಕೋರ್ಟ್ ಅಥವಾ ಡಿಎನ್ ನಗರ್ ಪೊಲೀಸ್ ಠಾಣೆಯಲ್ಲಿ ಸರೆಂಡರ್ ಆಗಬೇಕು. ತನ್ನ ಪಾಸ್​ಪೋರ್ಟ್ ಅನ್ನು ಪೊಲೀಸರಿಗೆ ಒಪ್ಪಿಸಬೇಕು. ಒಂದು ವೇಳೆ ಶರಣಾಗತಿ ಆಗದಿದ್ದರೆ ಸೆಷೆನ್ಸ್ ಕೋರ್ಟ್​ನಿಂದ ಅವರ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲಾಗುತ್ತದೆ ಎಂದು ಬಾಂಬೆ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠ ಎಚ್ಚರಿಸಿದೆ. ಇನ್ನು, ಬಾಂಬೆ ಹೈಕೋರ್ಟ್ ನ್ಯಾಯಪೀಠದ ತೀರ್ಪಿನಲ್ಲಿರುವ ಮತ್ತೊಂದು ಹೈಲೈಟ್ ಎಂದರೆ ಗುಲ್ಷನ್ ಕುಮಾರ್ ಅವರ ವ್ಯಾವಹಾರಿಕ ಪ್ರತಿಸ್ಪರ್ಧಿ ಟಿಪ್ಸ್ ಮ್ಯೂಸಿಕ್ ಕಂಪನಿಯ ಮುಖ್ಯಸ್ಥ ರಮೇಶ್ ತೌರಣಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದು. ಇವರನ್ನ ಕೆಳಗಿನ ಕೋರ್ಟ್ ಖುಲಾಸೆಗೊಳಿಸಿತ್ತು. ಇದನ್ನು ರಾಜ್ಯ ಸರ್ಕಾರ ಹೈಕೋರ್ಟ್​ನಲ್ಲಿ ಪ್ರಶ್ನಿಸಿತ್ತು. ಆದರೆ ಟಿಪ್ಸ್ ಮಾಲೀಕನ ನಿರ್ದೋಷಿ ಎಂಬುದನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪುನರುಚ್ಚರಿಸಿದೆ.
ಟಿ-ಸೀರೀಸ್ ಆಡಿಯೋ ಕಂಪನಿಯ ಮಾಲೀಕರಾಗಿದ್ದ ಗುಲ್ಷನ್ ಕುಮಾರ್ ಅವರನ್ನ 1997, ಆಗಸ್ಟ್ 12ರಂದು ಮುಂಬೈನ ಅಂಧೇರಿ ವೆಸ್ಟ್​ನಲ್ಲಿದ್ದ ದೇವಸ್ಥಾನವೊಂದರ ಬಳಿ ಹತ್ಯೆಗೈಯಲಾಗಿತ್ತು. ಮೂವರು ವ್ಯಕ್ತಿಗಳು ದಾಳಿ ಮಾಡಿ ಗುಲ್ಷನ್ ಕುಮಾರ್ ದೇಹದ ಮೇಲೆ 16 ಬುಲೆಟ್​ಗಳನ್ನ ಹೊಡೆದಿದ್ದರು. ಪರಿಣಾಮ ಗುಲ್ಷನ್ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದರು. ಶಾರ್ಪ್ ಶೂಟರ್ ಆಗಿದ್ದ ಅಬ್ದುಲ್ ರೌಫ್ ಮರ್ಚೆಂಟ್ ಸೇರಿ 26 ಮಂದಿ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದರು. ಇದರಲ್ಲಿ ಟಿಪ್ಸ್ ಮಾಲೀಕ ರಮೇಶ್ ತೌರಣಿ, ಸಂಗೀತ ನಿರ್ದೇಶಕ ನದೀಮ್ ಅಖ್ತರ್ ಸೈಫೀ ಮೊದಲಾದವರ ಹೆಸರಿತ್ತು. ನದೀಮ್ ತಪ್ಪಿಸಿಕೊಂಡು ಬ್ರಿಟನ್ ದೇಶಕ್ಕೆ ಹಾರಿಹೋದ. ತೌರಣಿಯನ್ನು ಪೊಲೀಸರು ಬಂಧಿಸಿದರು. 2002ರಲ್ಲಿ ಟ್ರಯಲ್ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿತು. ಅದರಲ್ಲಿ ಅಬ್ದುಲ್ ರೌಫ್ ಮರ್ಚೆಂಟ್ ಅನ್ನು ಮಾತ್ರ ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿತು. ಉಳಿದ ಆರೋಪಿಗಳನ್ನ ಖುಲಾಸೆಗೊಳಿಸಿತು.

Indresh KC

Recent Posts

ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

ಬ್ಯಾಂಕ್‌ ಖಾತೆಗೆ ಜಮಾ ಮಾಡಲು ಎಂದು ತಂದಿದ್ದ ಹಣವು ಕಳ್ಳತನಕ್ಕೆ ಒಳಗಾದ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ. ಬೈಕ್ ನ ಪೆಟ್ರೋಲ್…

14 mins ago

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ‌ಭಾನುವಾರ ಮುಂಜಾನೆ ಅಪಘಾತಕ್ಕೀಡಾಗಿದೆ.

30 mins ago

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ : ಪರಿಚಯಸ್ಥರಿಂದಲೇ ಕೊಲೆ ಶಂಕೆ

ತಡರಾತ್ರಿ ದುಷ್ಕರ್ಮಿಗಳು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ನಗರದ…

49 mins ago

ಬಿಜೆಪಿ ಈಗ ಬೆಳೆದು ನಿಂತಿದೆ ಅದಕ್ಕೆ ಆರ್ ಎಸ್ ಎಸ್ ಬೆಂಬಲ ಬೇಕಾಗಿಲ್ಲ: ಉದ್ಧವ್ ಠಾಕ್ರೆ

ಬಿಜೆಪಿ ಮತ್ತು ಆರೆಸ್ಸೆಸ್ ಸಂಬಂಧದ ಬಗ್ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಶಿವಸೇನಾ ಯುಬಿಟಿ ಬಣದ…

53 mins ago

ನೇಹಾ, ಅಂಜಲಿ ಕೊಲೆ ಕೇಸ್​​ : ಎಡಿಜಿಪಿ ಆರ್.ಹಿತೇಂದ್ರ ಅಧಿಕಾರಿಗಳಿಗೆ ಕ್ಲಾಸ್​

ನೇಹಾ ಮತ್ತು ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಗಳು ಬಾರಿ ಸಂಚಲನ ಮೂಡಿಸಿದ್ದವು ಈ ಹಿನ್ನೆಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ…

1 hour ago

ಕಲಬುರಗಿ: ಅಂಧ ಮಕ್ಕಳ ಶಾಲೆಗೆ 100% ಫಲಿತಾಂಶ

ನಗರದ ದಕ್ಷಿಣ ಭಾರತ ದಲಿತ ವಿದ್ಯಾ ಸಂಸ್ಥೆಯ ಸಿದ್ದಾರ್ಥ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಪ್ರೌಢಶಾಲೆಗೆ ಪ್ರಸ್ತುತ ಸಾಲಿನ…

1 hour ago