News Karnataka Kannada
Monday, April 29 2024
ದೇಶ

ಸ್ಪ್ಯಾನಿಷ್ ಫ್ಲೂ, 2ನೇ ಮಹಾಯುದ್ಧದಲ್ಲಿ ಜೀವ ಉಳಿಸಿಕೊಂಡಿದ್ದ ಮಹಿಳೆ ಕೋವಿಡ್’ಗೆ ಬಲಿ

New Project
Photo Credit :

ಕೊರೋನಾ ಎಂಬ ರಾಕ್ಷಸ ಪಿಡುಗು ಯಾರನ್ನೂ ಬಿಟ್ಟಿಲ್ಲ. ಹಣ, ಆಸ್ತಿ, ಹೆಸರು, ವಯಸ್ಸು ಯಾವುದನ್ನೂ ಲೆಕ್ಕಿಸದೆ ನಮ್ಮವರನ್ನು ದೂರ ಮಾಡಿರುವ ನೋವು ಇನ್ನು ನಮ್ಮ ಮನಸ್ಸಿನಲ್ಲಿ ಹಸಿಯಾಗಿಯೇ ಇದೆ.

ಹೀಗಿರುವಾಗ 1918ರಲ್ಲಿ ಇಡೀ ವಿಶ್ವವನ್ನು ಕಾಡಿದ ಸ್ಪ್ಯಾನಿಷ್ ಫ್ಲೂ ಬರೋಬ್ಬರಿ 50 ಲಕ್ಷ ಜನರನ್ನು ಬಲಿಪಡೆದಿತ್ತು. ಅಂತಹ ಪಿಡುಗಿನಿಂದಲೇ ಬದುಕುಳಿದಿದ್ದ ಅಮೆರಿಕದ 105 ವರ್ಷದ ಹಿರಿಯ ಜೀವಿ ಜಿಯಾಕೋಪಿನಿ ಅವರು ಈ ಮಾರಕ ಕೊರೋನಾಕ್ಕೆ ಪ್ರಾಣಬಿಟ್ಟಿದ್ದಾರೆ.

ನ್ಯಾಷನಲ್ ಆರ್ಚೀವ್ ದಾಖಲೆಗಳ ಪ್ರಕಾರ 1918ರಲ್ಲಿ ಸ್ಪ್ಯಾನಿಷ್ ಫ್ಲೂ ಗೆ ವಿಶ್ವದ ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಜನರು ಸೋಂಕಿಗೆ ಒಳಗಾಗಿದ್ದರು. ಅಮೆರಿಕದಲ್ಲಿ ಶೇ.25ರಷ್ಟು ಜನಸಂಖ್ಯೆ ವೈರಸ್ ಗೆ ತುತ್ತಾದ್ದರು.

ಆಗ ಜನರ ಜೀವಿತಾವಧಿ ಬರೋಬ್ಬರಿ 12 ವರ್ಷಗಳು ಕುಸಿದಿತ್ತು.ಅಷ್ಟೇ ಅಲ್ಲ ಜಿಯಾಕೋಪಿನಿ ಅವರು ಸ್ಪ್ಯಾನಿಷ್ ಫ್ಲೂ ಬಳಿಕ ನಡೆದ 2ನೇ ಮಹಾಯುದ್ಧವನ್ನು ಜಯಿಸಿಕೊಂಡು ಇಟಲಿ, ಪೋರ್ಚುಗಲ್ ಎಲ್ಲಾ ಪ್ರಯಾಣಿಸಿ 1960ರಲ್ಲಿ ಮತ್ತೆ ಅಮೆರಿಕಕ್ಕೆ ಹಿಂತಿರಿಗಿದ್ದರು.ಆದರೆ ಕೋವಿಡ್ ನಿಂದ ಬಳಲಿತ್ತಿದ್ದ ಜಿಯಾಕೋಪಿನಿ ಅವರು ತೀವ್ರ ಅನಾರೋಗ್ಯಕ್ಕೀಡಾದರು. ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದ ಈಕೆ ಸೆ.16 2021ರಂದು ಕೊನೆಯುಸಿರೆಳೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು