ಕೋಲ್ಕತ್ತಾದಲ್ಲಿ ರಾಷ್ಟ್ರೀಯ ಶೂಟರ್ ಕೊನಿಕಾ ಲಾಯಕ್ ಶವವಾಗಿ ಪತ್ತೆಯಾಗಿದ್ದಾರೆ. ಕೊನಿಕಾ ಲಯಕ್ ಅವರ ವಿವಾಹವನ್ನು ಫೆಬ್ರವರಿ ವೇಳೆಗೆ ನೆರವೇರಿಸಲು ಪೋಷಕರು ಮುಂದಾಗಿದ್ದರು. ಈ ಎಲ್ಲಾ ಸಂತೋಷದ ನಡುವೆ ಆಕೆಯ ಹಠಾತ್ ಸಾವು ಹಲವಾರು ಅನುಮಾನಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವಿಗೆ ಕಾರಣ ತಿಳಿಯಲು ತನಿಖೆ ನಡೆಸಲಾಗುವುದು ಮತ್ತು ಮರಣೋತ್ತರ ಪರೀಕ್ಷೆಯ ನಂತರವೇ ಮಾಹಿತಿ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಅವರು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗಾಗಿ ಕೋಲ್ಕತ್ತಾದ ಜೈದೀಪ್ ಕರ್ಮಾಕರ್ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು. ರೈಫಲ್ ಶೂಟಿಂಗ್ನಲ್ಲಿನ ಅತ್ಯುತ್ತಮ ಸಾಧನೆಗಳಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.
ಹಾಗೆ ಜಾರ್ಖಂಡ್ ರಾಜ್ಯಕ್ಕೆ ಹೆಚ್ಚು ಖ್ಯಾತಿಯನ್ನೂ ಸಹ ತಂದುಕೊಟ್ಟಿದ್ದರು.ಅವರ ತರಬೇತಿಗೆ ನಟ ಸೋನು ಸೂದ್ ಅವರು ಸಹ ಬೆಂಬಲ ನೀಡಿದ್ದರು.