ರಾಜ್ಯಸಭೆಯಲ್ಲಿ ಗೈರು ಹಾಜರಾಗಿದ್ದ ಬಿಜೆಪಿ ಸದಸ್ಯರ ವಿವರ ನೀಡುವಂತೆ ಪ್ರಧಾನಿ ಸೂಚನೆ

ನವದೆಹಲಿ : ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರು ಮಂಡಿಸಿದ್ದ ನಿರ್ಣಯಗಳ ಮೇಲೆ ಮತದಾನ ನಡೆಯುವ ವೇಳೆ ಹಾಜರಿರದ ಸಂಸದರ ವಿವರಗಳನ್ನು ನೀಡುವಂತೆ ಪ್ರಧಾನಿ ಮೋದಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಮಂಗಳವಾರ ಸೂಚಿಸಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಈ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

‘ನ್ಯಾಯಾಧಿಕರಣ ಸುಧಾರಣಾ ಮಸೂದೆ’ಯನ್ನು ಸದನದ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಒತ್ತಾಯಿಸಿ ಕೆಲ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ನಿರ್ಣಯ ಮಂಡಿಸಿದ್ದವು. ಈ ವೇಳೆ ಅನೇಕ ಬಿಜೆಪಿ ಸದಸ್ಯರು ಗೈರು ಹಾಜರಾಗಿದ್ದರು. ಇದು ಮೋದಿ ಗಮನಕ್ಕೆ ಬಂದಿದ್ದು, ಈ ಕಾರಣಕ್ಕೆ ಅವರು ಗೈರುಹಾಜರಿಯ ವಿವರ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ, ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಚಪ್ಪಾಳೆ ತಟ್ಟಿಮೋದಿ ಅಭಿನಂದಿಸಿದರು. ‘ನಿಮ್ಮ ಕ್ಷೇತ್ರಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಪೋಷಣ್‌ ಅಭಿಯಾನ ಮತ್ತು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಕುರಿತು ಪ್ರಚಾರ ನಡೆಸಬೇಕು’ ಎಂದು ಸಂಸದರಿಗೆ ಸಲಹೆ ನೀಡಿದರು.

Raksha Deshpande

Recent Posts

ಡ್ರಗ್ಸ್‌ ಕೊಟ್ಟು ಸಂಸದೆಗೆ ಲೈಂಗಿಕ ಕಿರುಕುಳ ಆರೋಪ : ಆಸ್ಟ್ರೇಲಿಯಾ ಎಂಪಿ

ಆಸ್ಟ್ರೇಲಿಯಾದ ಕ್ವೀನ್ಸ್‌ ಲ್ಯಾಂಡ್‌ ಸಂಸದೆ ಬ್ರಿಟಾನಿ ಲೌಗಾ ಅವರಿಗೆ ಕೆಲವು ಅಪರಿಚಿತರು ಮಾದಕ ದ್ರವ್ಯ ನೀಡಿ, ಲೈಂಗಿಕ ಕಿರುಕಳ ನೀಡಿರುವ…

9 mins ago

‘ಟೈಟಾನಿಕ್‌ʼ‘ಲಾರ್ಡ್ ಆಫ್ ರಿಂಗ್ಸ್ʼ ನಟ ಬರ್ನಾರ್ಡ್ ಹಿಲ್ ನಿಧನ

ಆಸ್ಕರ್‌ ಪುರಸ್ಕೃತ, ‘ಟೈಟಾನಿಕ್‌ʼ‘ಲಾರ್ಡ್ ಆಫ್ ರಿಂಗ್ಸ್ʼ ಪ್ರಸಿದ್ಧ ನಟ ಬರ್ನಾರ್ಡ್ ಹಿಲ್ ನಿಧನ ಹೊಂದಿದ್ದಾರೆ ಅವರಿಗೆ 79 ವಯಸ್ಸಾಗಿತ್ತು.1997ರಲ್ಲಿ ರಿಲೀಸ್…

32 mins ago

ಗೋಶಾಲೆ ಜಾನುವಾರುಗಳಿಗೆ ಮೇವು ವಿತರಿಸಿಲ್ಲ ಎಂದು ರೈತರು ಪ್ರತಿಭಟನೆ

ಏಪ್ರಿಲ್ 25ರಿಂದ ಕೆ ವಿ ಎನ್ ದೊಡ್ಡಿ, ಎಂ ಟಿ ದೊಡ್ಡಿ ಗ್ರಾಮದ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಮೇವು ವಿತರಿಸಿಲ್ಲ ಎಂದು…

49 mins ago

ಭಾರಿ ಮಳೆ : 78 ಮಂದಿ ಸಾವು, 100ಕ್ಕೂ ಹೆಚ್ಚು ಜನ ನಾಪತ್ತೆ

ಬ್ರೆಜಿಲ್‌ನ ದಕ್ಷಿಣ ಭಾಗದಲ್ಲಿರು ರಿಯೋ ಗ್ರಂಡ್‌ ಡೊ ಸುಲ್‌ʼ ರಾಜ್ಯಲ್ಲಿ ಸುರಿದ ಬಾರಿ ಮಳೆಯಿಂದಾಗಿ ಪ್ರವಾಹ ಯಂಟಾಗಿದ್ದು ಈವರೆಗೂ 78…

1 hour ago

ಕಾಂಗ್ರೆಸ್‌ ಸಚಿವನ ಆಪ್ತನ ಮನೆಗೆ ಇಡಿ ದಾಳಿ : ಕಂತು ಕಂತು ಹಣದ ರಾಶಿ ಜಪ್ತಿ

ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಅಲಂ ಅವರ ಆಪ್ತ ಕಾರ್ಯದರ್ಶಿ ಮನೆಗೆ ಐಡಿ ರೈಡ್‌ ಮಾಡಿದ್ದು 30 ಕೋಟಿ ಅಧಿಕ ಹಣ…

1 hour ago

ಕಾಂಗ್ರೆಸ್‌ ಮುಖಂಡ ಡಾ. ನಾಗರೆಡ್ಡಿ ಪಾಟೀಲ್‌ ನಿಧನ

ಕಲಬುರ್ಗಿ ಜಿಲ್ಲೆಯ ಸೇಡಂ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಮುಖಂಡರಾಗಿದ್ದ ಡಾ. ನಾಗರೆಡ್ಡಿ ಪಾಟೀಲ್‌ (79) ಇಂದು ಬೆಳಗಿನ…

2 hours ago