ದೇಶ

ರಷ್ಯಾದ ಸ್ಪುಟ್ನಿಕ್‌ ಲಸಿಕೆ ದೇಶದಲ್ಲೆ ಸೆಪ್ಟೆಂಬರ್‌ ನಲ್ಲಿ ಉತ್ಪಾದನೆ

ಮಾಸ್ಕೋ ; ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಮಂಗಳವಾರ ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಅನ್ನು ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನಾ ಘಟಕಗಳಲ್ಲಿ ಸೆಪ್ಟೆಂಬರ್ ನಿಂದ ಉತ್ಪಾದಿಸಲಾಗುವುದು ಎಂದು ಮಾಹಿತಿ ನೀಡಿದೆ. ದೇಶದ ಯುವ ಜನತೆಗೆ ಈ ವರ್ಷದ ಅಂತ್ಯಕ್ಕೆ ಕೊರೋನಾ ಲಸಿಕೆ ನೀಡಲು ಇಟ್ಟುಕೊಂಡಿದ್ದ ಮಹತ್ವಾಕಾಂಕ್ಷೆಯ ಗಡುವನ್ನು ಭಾರತ ದೇಶವು ತಲುಪಲಿದೆ ಎಂದು ಈ ಮೂಲಕ ಹೇಳಲಾಗುತ್ತಿದೆ. “ತಾಂತ್ರಿಕ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ, ಎಸ್‌ಐಐ ಈಗಾಗಲೇ ಗಮಾಲೆಯಾ ಕೇಂದ್ರದಿಂದ ಕೋಶ ಮತ್ತು ವೆಕ್ಟರ್ ಮಾದರಿಗಳನ್ನು ಈಗಾಗಲೇ ಪಡೆಯಲಾಗಿದೆ (ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದಿಸಿದ ನಂತರ ಆಮದು ಪ್ರಕ್ರಿಯೆ ನಡೆದಿದೆ. ) ತಯಾರಿಕಾ ಪ್ರಕ್ರಿಯೆ ಪ್ರಾರಂಭವಾಗಿದೆ, “ಆರ್​ಡಿಐಎಫ್’’​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಕಟಣೆಗೆ ಪ್ರತಿಕ್ರಿಯಿಸಿದ ಸೀರಮ್ ಇನ್ಸ್ಟಿಟ್ಯೂಟ್ ಮುಖ್ಯಸ್ಥ ಆದರ್​ ಪೂನವಾಲಾ ಅವರು “ಸ್ಪುಟ್ನಿಕ್ ಲಸಿಕೆ ತಯಾರಿಸಲು ಆರ್​ಡಿಐಎಫ್​ ಜೊತೆ ಪಾಲುದಾರಿಕೆ ಹೊಂದಲು ಸಂತೋಷವಾಗಿದೆ” ಎಂದು ಹೇಳಿದರು. “ಸೆಪ್ಟೆಂಬರ್ ತಿಂಗಳಿಂದ ಟ್ರಯಲ್ ಬ್ಯಾಚ್‌ಗಳು ಪ್ರಾರಂಭವಾಗಲಿದ್ದು, ಮುಂಬರುವ ತಿಂಗಳುಗಳಲ್ಲಿ ಲಕ್ಷಾಂತರ ಪ್ರಮಾಣದಲ್ಲಿ ಲಸಿಕೆಯನ್ನು ನಾವು ದೇಶಕ್ಕೆ ನೀಡುತ್ತೇವೆ” ಎಂದು ಅವರು ಹೇಳಿದರು.“ಹೆಚ್ಚಿನ ಪರಿಣಾಮಕಾರಿ ಮತ್ತು ಉತ್ತಮ ಸುರಕ್ಷತೆಯೊಂದಿಗೆ, ಭಾರತ ಮತ್ತು ಪ್ರಪಂಚದಾದ್ಯಂತದ ಇರುವ ಜನರಿಗೆ ಸ್ಪುಟ್ನಿಕ್ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ದೊರೆಯಲಿದೆ. ವೈರಸ್ಸಿನ ಅನಿಶ್ಚಿತತೆಯನ್ನು ಗಮನಿಸಿದರೆ, ಸಾಂಕ್ರಾಮಿಕ ರೋಗದ ವಿರುದ್ಧದ ನಮ್ಮ ಹೋರಾಟವನ್ನು ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಸರ್ಕಾರಗಳು ಮತ್ತಷ್ಟು ಹೆಚ್ಚಿಸುವುದು ಮುಖ್ಯವಾಗಿದೆ. ” ಎಂದು ಪೂನಾವಾಲ ಇದೇ ವೇಳೆ ಹೇಳಿದ್ದಾರೆ.
ರಷ್ಯಾದ ನೇರ ಹೂಡಿಕೆ ನಿಧಿಯ ಸಿಇಒ ಕಿರಿಲ್ ಡಿಮಿಟ್ರಿವ್ ಅವರು ಹೀಗೆ ಹೇಳಿದ್ದು, “ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದೊಂದಿಗೆ ನಾವು ಜೊತೆಗೂಡಲು ಆರ್‌ಡಿಐಎಫ್ ಸಂತೋಷವಾಗಿದೆ. ಈ ಕಾರ್ಯತಂತ್ರದ ಉದ್ದೇಶ ನಮ್ಮ ಉತ್ಪಾದನಾ ಸಾಮರ್ಥ್ಯಗಳನ್ನು ಗಣನೀಯವಾಗಿ ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿದ್ದು, ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಇರುವ ಜನರ ಜೀವಗಳನ್ನು ಉಳಿಸಲು ಇದು ಅತ್ಯುತ್ತಮ ಉದಾಹರಣೆಯಾಗಿದೆ. ತಂತ್ರಜ್ಞಾನ ವರ್ಗಾವಣೆ ನಡೆಯುತ್ತಿರುವುದರಿಂದ ಮುಂಬರುವ ತಿಂಗಳುಗಳಲ್ಲಿ ಲಸಿಕೆಯ ಮೊದಲ ಬ್ಯಾಚ್‌ಗಳನ್ನು ಎಸ್‌ಐಐ ಜೊತೆ ಜಂಟಿಯಾಗಿ ಉತ್ಪಾದಿಸಲಾಗುವುದು ಎಂದು ಹೇಳಿದ್ದಾರೆ.
ಸ್ಪುಟ್ನಿಕ್ ವಿ ಲಸಿಕೆ ಬೇರೆಲ್ಲಾ ಲಸಿಕೆಗಳಿಗೆ ಹೋಲಿಸಿದರೆ ಅತ್ಯಂತ ಪರಿಣಾಮಕಾರಿ ಲಸಿಕೆಯಾಗಿದೆ. ಹಲವಾರು ಪ್ರಮುಖ ಪ್ರಯೋಜನಗಳನ್ನು ಹೊಂದಿದೆ: 2020 ರ ಡಿಸೆಂಬರ್ 5 ರಿಂದ 2021 ರ ಮಾರ್ಚ್ 31 ರವರೆಗೆ ಸ್ಪುಟ್ನಿಕ್ ವಿ ಲಸಿಕೆ ಪಡೆದ ರಷ್ಯಾದ ನಾಗರೀಕರಲ್ಲಿ ಕರೋನವೈರಸ್ ಸೋಂಕಿನ ದರದ ಕಡಿಮೆಯಾಗಿದೆ. ಸ್ಪುಟ್ನಿಕ್ ವಿ ಯ ದಕ್ಷತೆಯು 97.6% ಆಗಿದೆ. ಇದನ್ನು ಅನೇಕ ಅಧ್ಯಯನಗಳು ಸಾಬೀತು ಪಡಿಸಿವೆ ಎಂದು ಹೇಳಲಾಗಿದೆ.ರಷ್ಯಾ ಮೂಲದ ಈ ಕೋವಿಡ್ ಲಸಿಕೆ ಸ್ಪುಟ್ನಿಕ್ ಶೀಘ್ರದಲ್ಲೇ ದೇಶದ ಎಲ್ಲೆಡೆಯೂ ಉಚಿತವಾಗಿ ಲಭ್ಯವಾಗಲಿರುವ ಮೂರನೇ ಕೋವಿಡ್ ಲಸಿಕೆಯಾಗಲಿದೆ ಎಂದು ಕೇಂದ್ರದ ಕೋವಿಡ್ -19 ಕಾರ್ಯ ಸಮೂಹದ ಅಧ್ಯಕ್ಷ ಡಾ.ಎನ್ ಕೆ ಅರೋರಾ ಹೇಳಿದ್ದಾರೆ.
ಸ್ಪುಟ್ನಿಕ್​ ಸಧ್ಯಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ದೊರೆಯುತ್ತಿದೆ. ಇಲ್ಲಿ ಉತ್ಪಾದನೆ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಎಲ್ಲಾ ಕಡೆ ಉಚಿತವಾಗಿ ಜನರಿಗೆ ದೊರೆಯಲಿದೆ ಎಂದು ಹೇಳಲಾಗಿದೆ.ಭಾರತದಲ್ಲಿ ಪರಿಚಯಿಸಲಾದ ಮೊದಲ ವಿದೇಶಿ ನಿರ್ಮಿತ ಕೋವಿಡ್ ಲಸಿಕೆ ಇದಾಗಿದ್ದು, ಮೇ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ಜಿಎಸ್‌ಟಿ ಒಳಗೊಂಡಂತೆ 995.40 ರೂಗಳಿಗೆ ಸಿಗಲಿದೆ.

Indresh KC

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

8 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

9 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

9 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

10 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

10 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

10 hours ago