ಮುಂಬೈ : ಮುಂಬೈ ನ ಧಾರಾವಿ ಪ್ರದೇಶದಲ್ಲಿನ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 14 ಮಂದಿ ಗಾಯಗೊಂಡಿದ್ದಾರೆ.
ಧಾರಾವಿಯ ಶಾಹು ನಗರದಿಂದ ಈ ಘಟನೆ ವರದಿಯಾಗಿದೆ. 14 ಗಾಯಗೊಂಡವರಲ್ಲಿ ಇಬ್ಬರು ಶೇ.70ಕ್ಕಿಂತ ಹೆಚ್ಚು ಸುಟ್ಟು ಹೋಗಿದ್ದಾರೆ ಮತ್ತು ಉಳಿದ 12 ಮಂದಿಗೆ ಸಣ್ಣಪುಟ್ಟ ಸುಟ್ಟಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟಗೊಂಡ ಸ್ಥಳಕ್ಕೆ ಅಗ್ನಿಶಾಮಕ ತಂಡಗಳು ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಯ, ಎರಡು ಅಗ್ನಿಶಾಮಕ ವಾಹನಗಳು ಮತ್ತು ಒಂದು ಜಂಬೋ ನೀರಿನ ಟ್ಯಾಂಕರ್ ನೊಂದಿಗೆ ಬೆಂಕಿ ನಂದಿಸಲಾಯಿತು. ಗಾಯಗೊಂಡವರನ್ನು ಸಿಯಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ಕಾರಣ ಇನ್ನೂ ಪತ್ತೆಯಾಗಿಲ್ಲ.