ದೇಶದಲ್ಲಿ ನಿನ್ನೆಯಷ್ಟೇ ಮೊದಲ ಕೊರೋನಾ ಎಕ್ಸ್ಇ ಎಂಬ ರೂಪಾಂತರಿ ಗೋಚರಿಸಿಕೊಂಡಿದ್ದು, ಜನರಲ್ಲಿ ಮತ್ತೆ ಆತಂಕ ಮನೆಮಾಡಿದೆ. ಎಕ್ಸ್ಇ ಎಂಬ ರೂಪಾಂತರಿ ವೈರಾಣುಕೊರೋನಾ ತಳಿಗಳಲ್ಲೇ ಅತ್ಯಂತ ಹೆಚ್ಚು ಪ್ರಸರಣ ಸಾಮರ್ಥ್ಯ ಇರುವ ವೈರಸ್ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಅದೇ ರೀತಿ ವಿಶ್ವ ಆರೋಗ್ಯ ಸಂಸ್ಥೆಯೂ ಇದೇ ಎಚ್ಚರಿಕೆಯನ್ನು ನೀಡಿದೆ. ಎಕ್ಸ್ಇ ವೈರಾಣು, ಒಮಿಕ್ರಾನ್ಗಿಂತಲೂ ವಿಭಿನ್ನ ಲಕ್ಷಣಗಳನ್ನು ಉಂಟು ಮಾಡುತ್ತದೆ. ಎಕ್ಸ್ಇ ಸೋಂಕಿಗೆ ಒಳಗಾದವರು ವಾಸನೆ ಮತ್ತು ರುಚಿಯನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಎಕ್ಸ್ಇ ವೈರಸ್ ಭಾರತದಲ್ಲಿ ಮುಂಬೈನಲ್ಲಿ ಮೊದಲು ಕಾಣಿಸಿಕೊಂಡಿತು. ಅದಾದ ಮೇಲೆ ಗುಜರಾತ್ನಲ್ಲಿ ಕೂಡ ಒಂದು ಕೇಸ್ ದಾಖಲಾಗಿದೆ.