Categories: ದೇಶ

ಬ್ರಿಟನ್ ಸರ್ಕಾರದ ಮನ್ನಣೆ ಪಡೆದ ದೇಶೀಯ ‘ಕೋವ್ಯಾಕ್ಸಿನ್’ ಲಸಿಕೆ

ಭಾರತದಲ್ಲಿ ಕೋವಿಡ್‌ ಸೋಂಕಿನ ವಿರುದ್ಧ ಹೋರಾಟಕ್ಕೆ ಅಸ್ತ್ರವನ್ನಾಗಿ ಬಳಸಲಾಗುತ್ತಿರುವ ದೇಶೀಯವಾಗಿ ತಯಾರಿಸಿರುವ ‘ಕೋವ್ಯಾಕ್ಸಿನ್’ ಲಸಿಕೆಗೆ ಬ್ರಿಟನ್ ಸರ್ಕಾರದ ಮನ್ನಣೆ ಪಡೆದಿದೆ, ಜೊತೆಗೆ ಕೋವಿಡ್ ನಿರೋಧಕ ಲಸಿಕೆಗಳ ಪಟ್ಟಿಯಲ್ಲಿ ಸೋಮವಾರದಿಂದ ಸ್ಥಾನ ಸಿಕ್ಕಿದೆ.

ಈ ನಡೆಯಿಂದ ಪೂರ್ಣ ಪ್ರಮಾಣದಲ್ಲಿ ಕೋವಿಡ್ ವಿರುದ್ಧ ಲಸಿಕೆ ಪಡೆದ ಭಾರತೀಯರು ಬ್ರಿಟನ್‌ಗೆ ಪ್ರಯಾಣ ಮಾಡಲು ಇದ್ದ ಅಡೆತಡೆಗಳನ್ನು ನಿವಾರಿಸಿದಂತೆ ಆಗಿದೆ. ಭಾರತದಿಂದ ನಿರ್ಗಮನಕ್ಕೂ ಮುನ್ನ ಪಿಸಿಆರ್‌ ಪರೀಕ್ಷೆ ಹಾಗೂ ಪ್ರಯಾಣಿಕರ ಲೊಕೇಷನ್ ಅರ್ಜಿಗಳಲ್ಲಿ ತಿಳಿಸಿದ ಸ್ಥಳ ತಲುಪಿದ ಬಳಿಕ ಅಲ್ಲಿ ಸ್ವಯಂ-ಐಸೋಲೇಷನ್ ಆಗಬೇಕಾದ ಅನಿವಾರ್ಯತೆ ಇನ್ನು ಮುಂದೆ ಕೋವ್ಯಾಕ್ಸಿನ್ ಪಡೆದ ಮಂದಿಗೆ ಇರುವುದಿಲ್ಲ. ಪೂರ್ಣವಾಗಿ ಲಸಿಕೆ ಪಡೆಯದ ಪ್ರಯಾಣಿಕರಿಗೆ ಮೇಲ್ಕಂಡ ಪರೀಕ್ಷೆಗಳಿಗೆ ಒಳಗಾಗುವ ಅಗತ್ಯವಿರಲಿದೆ.

ಕೋವಿಶೀಲ್ಡ್‌ ಲಸಿಕೆ ಸೇರಿದಂತೆ ಅನುಮೋದಿಸಲ್ಪಟ್ಟ ಇತರೆ ಲಸಿಕೆಗಳನ್ನು ಸಂಪೂರ್ಣ ಪ್ರಮಾಣದಲ್ಲಿ ಪಡೆದ ಪ್ರಯಾಣಿಕರಂತೆ ಕೋವ್ಯಾಕ್ಸಿನ್ ಲಸಿಕೆ ಪಡೆದ ಮಂದಿ ಸಹ ಬ್ರಿಟನ್‌ಗೆ ತೆರಳುವ ವೇಳೆ ಅಲ್ಲಿಗೆ ತಲುಪಿದ ಬಳಿಕ ಪಿಸಿಆರ್‌ ಅಥವಾ ಲ್ಯಾಟರಲ್ ಫ್ಲೋ ಪರೀಕ್ಷೆಗೆ ಹಾಜರಾಗಬೇಕಿದೆ.

“ನವೆಂಬರ್‌ 22ರ ಸೋಮವಾರ ಬೆಳಿಗ್ಗೆ 4 ಗಂಟೆಯಿಂದ ಸರ್ಕಾರವು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಲಸಿಕೆಗಳ ಪಟ್ಟಿಯಲ್ಲಿರುವ (ಇಯುಎಲ್‌) ಲಸಿಕೆಗಳನ್ನು ಮಾನ್ಯೀಕರಿಸಲಿದೆ,” ಎಂದು ಬ್ರಿಟನ್‌ನ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಬಳಸಲ್ಪಡುವ ಕೋವಿಡ್ ನಿರೋಧಕ ಲಸಿಕೆಗಳ ಪೈಕಿ ಅತಿ ಹೆಚ್ಚಿನ ಬಳಕೆಯಾಗುತ್ತಿರುವ ಎರಡನೇ ಲಸಿಕೆಯಾದ, ಭಾರತ್‌ ಬಯೋಟೆಕ್ ಉತ್ಫಾದಿತ, ಕೋವ್ಯಾಕ್ಸಿನ್‌ಗೆ ಈ ತಿಂಗಳ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಪಟ್ಟಿಯಲ್ಲಿ ಮಾನ್ಯತೆ ನೀಡಲಾಗಿದೆ.

ವಿಶ್ವ ಸಂಸ್ಥೆಯ ಇಯುಎಲ್ ಪಟ್ಟಿಯಲ್ಲಿ ಲಸಿಕೆಯನ್ನು ಸೇರಿಸಬೇಕಾದಲ್ಲಿ ಸಂಬಂಧಪಟ್ಟ ಲಸಿಕೆಯನ್ನು ಗುಣಮಟ್ಟ, ಸುರಕ್ಷತೆ ಹಾಗೂ ಪರಿಣಾಮಶೀಲತೆಯಂಥ ಮಾನದಂಡಗಳ ಆಧಾರದ ಮೇಲೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಸಮಿತಿ ಪರೀಕ್ಷೆ ಮಾಡುತ್ತಾರೆ. ಅಮೆರಿಕ, ಸ್ಪೇನ್, ಸ್ವೀಡನ್, ಸ್ವಿಜ಼ರ್ಲೆಂಡ್ ಹಾಗೂ ಐಸ್ಲೆಂಡ್‌ಗಳಲ್ಲಿ ಅದಾಗಲೇ ಈ ವರ್ಗೀಕರಣದಡಿ ಅನೇಕ ಲಸಿಕೆಗಳಿಗೆ ಮನ್ನಣೆ ನೀಡಲಾಗಿದೆ.

ಇದೇ ವೇಳೆ, 18 ವರ್ಷದ ಒಳಪಟ್ಟ ಮಂದಿಗೂ ಸಹ ಪ್ರಯಾಣದ ನಿಯಮಗಳನ್ನು ಸರಳೀಕರಿಸುತ್ತಿರುವುದಾಗಿ ಬ್ರಿಟನ್ ಸರ್ಕಾರ ತಿಳಿಸಿದ್ದು, ಕೆಂಪು-ಪಟ್ಟಿಯಲ್ಲಿಲ್ಲದ ದೇಶಗಳಿಂದ ಬರುತ್ತಿರುವ ಮಕ್ಕಳನ್ನು ಸಂಪೂರ್ಣ ಪ್ರಮಾಣದ ಲಸಿಕೆ ಪಡೆದವರ ಪಟ್ಟಿಗೆ ಸೇರಿಸಲಾಗುವುದು ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. ಇದರರ್ಥ ಈ ವಯೋಮಿತಿಯ ಮಂದಿಗೆ ಆಗಮನದ ಬಳಿಕ ಸ್ವಯಂ-ಐಸೋಲೇಷನ್ ಅಗತ್ಯವಿರುವುದಿಲ್ಲ ಹಾಗೂ ಆಗಮನದ ನಂತರ ಲ್ಯಾಟರಲ್ ಫ್ಲೋ ಪರೀಕ್ಷೆ ಮತ್ತು ಪಿಸಿಆರ್‌ ಖಾತ್ರಿಯ ಉಚಿತ ಪರೀಕ್ಷೆಯಲ್ಲಿ ಭಾಗಿಯಾಗಬೇಕಾಗುತ್ತದೆ ಅಷ್ಟೇ.

Gayathri SG

Recent Posts

ರಾಶಿ ಭವಿಷ್ಯ : ಯಾರಿಗೆ ಲಾಭ? ಯಾರಿಗೆ ನಷ್ಟ?

ರಾಶಿ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮೇ 15…

12 mins ago

ಕೊಟ್ಟ ಮಾತಿನಂತೆ ಚಿತ್ರ ಬಿಡಿಸಿದ ಯುವತಿಗೆ ಪತ್ರ ಬರೆದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಫೋಟೋ ಹಿಡಿದು ನಿಂತಿದ್ದ ಯುವತಿಯನ್ನು ಕಂಡು ತಮ್ಮ ಅಂಗರಕ್ಷಕ ಅಧಿಕಾರಿಗಳಿಂದ ಯುವತಿಯ ಫೋಟೊ…

8 hours ago

‘ಕಲ್ಕಿ-2898 AD’ ಚಿತ್ರಕ್ಕೆ ಕನ್ನಡದಲ್ಲಿ ಧ್ವನಿ ನೀಡಿದ ದೀಪಿಕಾ ಪಡುಕೋಣೆ

ನಟ ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ 'ಕಲ್ಕಿ-2898 AD' ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ನಟಿ ದೀಪಿಕಾ ಪಡುಕೋಣೆ ತಮ್ಮ ಪಾತ್ರದ ಡಬ್ಬಿಂಗ್‌…

8 hours ago

ಧನುಷ್- ಐಶ್ವರ್ಯ ಇಬ್ಬರೂ ಬೇರೆಯವರೊಟ್ಟಿಗೆ ಡೇಟಿಂಗ್; ಖ್ಯಾತ ಗಾಯಕಿ ಮಾಹಿತಿ

ಕಾಲಿವುಡ್‌ ನಟ ಧನುಷ್‌ ಮತ್ತು ಸೂಪರ್‌ ಸ್ಟಾರ್‌ ರಜನಿಕಾಂತ್‌ ಪುತ್ರಿ ಐಶ್ವರ್ಯಾ ರಜನಿಕಾಂತ್‌ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ.…

8 hours ago

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಎಚ್​.ಡಿ ರೇವಣ್ಣ ಏನಂದ್ರು ?

ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಪರಪ್ಪರ ಅಗ್ರಹಾರ ಜೈಲಿನಿಂದ ಬಿಡುಗಡೆ ಹೊಂದಿದ ಶಾಸಕ…

9 hours ago

ಅಂಕಿತಾ ಓದಿದ ಶಾಲೆಗೆ 1 ಕೋಟಿ ರೂ. ಘೋಷಿಸಿದ ಸಿಎಂ ಸಿದ್ದರಾಮಯ್ಯ

ಈ ವರ್ಷದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ರಾಜ್ಯಕ್ಕೆ ಫಸ್ಟ್…

9 hours ago