News Karnataka Kannada
Thursday, May 02 2024
ದೇಶ

ಬ್ಯಾಂಕಿಗೆ ಸಾಗಿಸುತಿದ್ದ ಹಣ ದೋಚಿ ಪರಾರಿಯಾದ ಚಾಲಕ

Dacoity
Photo Credit :

ಕರಾಚಿ ; ಪಾಕಿಸ್ತಾನದ ಕರಾಚಿಯಲ್ಲಿನ ಸ್ಟೇಟ್ ಬ್ಯಾಂಕ್‌ಗೆ ಸಾಗಿಸುತ್ತಿದ್ದ ಸುಮಾರು 200 ಮಿಲಿಯನ್ ರೂಪಾಯಿ ಹಣವಿರುವ ವ್ಯಾನ್‌ನೊಂದಿಗೆ ಚಾಲಕ ಹುಸೇನ್ ಶಾ ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿದ್ದಾನೆ.
ಈ ಕುರಿತು ಪೊಲೀಸರು ಎಫ್‌ಐಆರ್ ಸಲ್ಲಿಸಿದ್ದು ವ್ಯಾನಿನ ಭದ್ರತಾ ಸಿಬ್ಬಂದಿ ಜನನಿಬಿಡ ಚುಂದ್ರಿಗಾರ್ ರಸ್ತೆಯ ಸ್ಟೇಟ್ ಆಫ್ ಪಾಕಿಸ್ತಾನದ ಕಟ್ಟದ ಒಳಗೆ ಹೋದ ಒಡನೆಯೇ ಭದ್ರತಾ ಕಂಪೆನಿಯ ಚಾಲಕ ಹುಸೇನ್ ಶಾ ಹಣದ ವ್ಯಾನ್‌ನೊಂದಿಗೆ ಪರಾರಿಯಾಗಿದ್ದಾನೆ ಎಂದು ನಗದು ಸಾರಿಗೆ ಕಂಪೆನಿಯ ಪ್ರಾದೇಶಿಕ ಕಾರ್ಯಾಚರಣೆ ವ್ಯವಸ್ಥಾಪಕರು ದೂರು ನೀಡಿದ್ದಾರೆ. ಚುಂದ್ರಿಗಾರ್ ರಸ್ತೆಯು ಪಾಕಿಸ್ತಾನದ ಆರ್ಥಿಕ ಕೇಂದ್ರ ಬಿಂದುವಾಗಿದ್ದು ಕೇಂದ್ರ ಹಾಗೂ ಇತರ ಬ್ಯಾಂಕ್‌ಗಳು ಇಲ್ಲಿ ನೆಲೆಸಿವೆ. ಇದೊಂದು ಅಸಾಮಾನ್ಯ ಪ್ರಕರಣವಾಗಿದೆ. ಹಗಲು ಹೊತ್ತಿನಲ್ಲಿ ಕಠಿಣ ಭದ್ರತೆಯ ನಡುವೆಯೇ ವ್ಯಾನ್‌ನೊಂದಿಗೆ ಚಾಲಕ ಪರಾರಿಯಾಗಿದ್ದಾನೆ ಎಂಬುದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಪ್ರಕರಣವನ್ನು ಬೇರೆ ಬೇರೆ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು ನನ್ನ ಇಷ್ಟು ವರ್ಷದ ಅನುಭವದಲ್ಲಿ ಈ ರೀತಿಯ ಘಟನೆ ಇದೇ ಮೊದಲ ಬಾರಿಗೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಚಾಲಕನನ್ನು ಇನ್ನೂ ಬಂಧಿಸದೇ ಇರುವ ಕಾರಣ ಪ್ರಕರಣದಲ್ಲಿ ಯಾವುದೇ ಪ್ರಗತಿ ಸಾಧಿಸಲಾಗಿಲ್ಲ ಎಂದು ವಿಶೇಷ ತನಿಖಾ ಅಧಿಕಾರಿ ಚೌಧರಿ ತಾರಿಕ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು