Categories: ದೇಶ

ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರದಿಂದ ಮೂರು ದಿನಗಳ ಕಾಲ ವಿದೇಶ ಪ್ರವಾಸ

ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರದಿಂದ ಮೂರು ದಿನಗಳ ಕಾಲ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಸೇನಾ ಕ್ರಮದ ಪರಿಣಾಮ ಮತ್ತು ಅದರ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಯುರೋಪ್ ಭೇಟಿ ಕುತೂಹಲ ಮೂಡಿಸಿದೆ. ಯುರೋಪಿಯನ್ ಯೂನಿಯನ್ ಈಗಾಗಲೇ ಮೋದಿ ಭೇಟಿಯನ್ನು ಕುತೂಹಲದಿಂದ ಎದುರು ನೋಡುತ್ತಿದೆ.

ಪ್ರಸ್ತುತ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ಭಾರತದ ತಟಸ್ಥ ಧೋರಣೆಯಿಂದ ಐರೋಪ್ಯ ರಾಷ್ಟ್ರಗಳು ಅತೃಪ್ತರಾಗಿರುವುದು ಸಹಜ. ಈ ಹಿನ್ನೆಲೆಯಲ್ಲಿ ಮೋದಿಯವರ ಯುರೋಪಿಯನ್ ರಾಷ್ಟ್ರಗಳ ಭೇಟಿ ಕುತೂಹಲ ಮೂಡಿಸಿದೆ. ಮೋದಿಯವರ ಯುರೋಪಿಯನ್ ದೇಶಗಳ ಭೇಟಿಯನ್ನು ಭಾರತೀಯ ಮತ್ತು ವಿದೇಶಿ ಸಮುದಾಯಗಳು ನಿರ್ಣಾಯಕವೆಂದು ಪರಿಗಣಿಸಿವೆ. ಉಕ್ರೇನ್‌ನ ಕಟ್ಟಾ ಬೆಂಬಲಿಗರಾಗಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು. ಉಭಯ ದೇಶಗಳು ದ್ವಿಪಕ್ಷೀಯ ಸಂಬಂಧಕ್ಕೆ ಆದ್ಯತೆ ನೀಡಿವೆ. ಈ ಹಿನ್ನೆಲೆಯಲ್ಲಿ ಮೋದಿಯವರ ಯುರೋಪ್ ದೇಶಗಳ ಭೇಟಿಯೂ ಈ ದಿಸೆಯಲ್ಲಿ ಮುಂದುವರಿಯಲಿದೆಯಂತೆ.

ವಿದೇಶ ಪ್ರವಾಸದ ಅಂಗವಾಗಿ ಮೋದಿ ಮೊದಲು ಜರ್ಮನಿಗೆ ಭೇಟಿ ನೀಡಲಿದ್ದಾರೆ. ನಂತರ ಡೆನ್ಮಾರ್ಕ್ ಅಲ್ಲಿಂದ ಮೇ 4 ರಂದು ಭಾರತಕ್ಕೆ ವಾಪಸಾಗಲಿದ್ದಾರೆ. ಭೇಟಿಯ ಭಾಗವಾಗಿ ಮೋದಿ ಏಳು ದೇಶಗಳ ಎಂಟು ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. 25 ಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವ ಮೋದಿ ಅವರು 50 ಪ್ರಮುಖ ಉದ್ಯಮಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ವಿದೇಶದಲ್ಲಿರುವ ಭಾರತೀಯರೊಂದಿಗೂ ಪ್ರಧಾನಿ ಮಾತನಾಡಲಿದ್ದಾರೆ.

Sneha Gowda

Recent Posts

ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು 3 ಎಂಜಿನಿಯರ್‌ಗಳು ಮೃತ್ಯು

ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಮೂವರು ಎಂಜಿನಿಯರ್‌ಗಳು ಸಾವಿಗೀಡಾದ ಘಟನೆ ಬಳ್ಳಾರಿ ಜಿಲ್ಲೆಯ ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನಡೆದಿದೆ.

19 mins ago

ವಿದ್ಯುತ್ ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಮೃತ್ಯು

ವಿದ್ಯುತ್ ಹೈಟೆನ್ಷನ್ ವೈರ್ ತಾಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ.

32 mins ago

ಅದೃಷ್ಟ ನಮ್ಮ ಕೈ ಹಿಡಿಯಬೇಕಿದೆ: ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​

ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ 58ನೇ ಐಪಿಎಲ್​ ಪಂದ್ಯದಲ್ಲಿ ಅಲ್ರೌಂಡ್​ ಪ್ರದರ್ಶನದ ಫಲವಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು…

47 mins ago

“ಜೈಶ್ರೀರಾಮ್” ಹಾಡಿನಿಂದ ಕಾಲೇಜಿನಲ್ಲಿ ಧರ್ಮದಂಗಲ್: ಸಂಸದ ಪ್ರತಾಪ್​ ಸಿಂಹ ಖಂಡನೆ

ಧರ್ಮ ದಂಗಲ್​ ಕಿಡಿ ಮೈಸೂರಿನಲ್ಲಿ ಹೊತ್ತಿಕೊಂಡಿದ್ದು, ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ…

1 hour ago

ಭಾರತದಲ್ಲಿ ಹಿಂದುಗಳ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ: ಆರ್ಥಿಕ ಸಲಹಾ ಮಂಡಳಿ

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ…

1 hour ago

ಪಟಾಕಿ ತಯಾರಿಕಾ ಕಾರ್ಖಾನೆ ಸ್ಫೋಟ: 8 ಮಂದಿ ಮೃತ್ಯು

ಕಾರ್ಖಾನೆಯೊಂದರಲ್ಲಿ ಪಟಾಕಿ ಸಿಡಿದು 8 ಜನರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿಯಲ್ಲಿ ನಡೆದಿದೆ.

2 hours ago