ಪಾಟ್ನಾ : ಅತ್ಯಾಚಾರ ಯತ್ನ ಪ್ರಕರಣದ ಆರೋಪಿಗೆ ಅಪರೂಪವಾದ ಶಿಕ್ಷೆಯೊಂದನ್ನು ನೀಡಿ ಜಾಮೀನು ಮಂಜೂರು ಮಾಡಲಾಗಿದೆ. ಪಾಟ್ನಾದ 20 ವರ್ಷದ ಲಾಲನ್ ಕುಮಾರ್ಗೆ ಗ್ರಾಮದಲ್ಲಿರುವ ಎಲ್ಲ ಮಹಿಳೆಯರ ಬಟ್ಟೆ ಒಗೆದು, ಇಸ್ತ್ರಿ ಮಾಡಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.
ಆರು ತಿಂಗಳು ಮಹಿಳೆಯರ ಬಟ್ಟೆ ಒಗೆಯಬೇಕು. ಅದಕ್ಕೆ ಬೇಕಾದ ಡಿಟರ್ಜೆಂಟ್, ಸೋಪು ಎಲ್ಲದಕ್ಕೂ ಈತನೇ ಹಣವ್ಯಯಿಸಬೇಕಿದೆ. ಬಿಹಾರದ ಮಜ್ಹೋರ್ ಗ್ರಾಮದ ಕುಮಾರ್ ವೃತ್ತಿಯಲ್ಲಿ ಅಗಸ. ಅತ್ಯಾಚಾರ ಯತ್ನ ಸೇರಿದಂತೆ ವಿವಿಧ ಆರೋಪಗಳಲ್ಲಿ ಈತನನ್ನು ಬಂಧಿಸಲಾಗುತ್ತು. ಕೋರ್ಟ್ನ ತೀರ್ಮಾನದಿಂದ ಗ್ರಾಮದ ಮಹಿಳೆಯರು ಖುಷಿಯಾಗಿದ್ದು, ಬಟ್ಟೆಗಳನ್ನು ಆತನಿಂದಲೇ ಒಗೆಸಿಕೊಳ್ಳುತ್ತಿದ್ದಾರೆ.