ದೇಶ

ನಡ್ಡಾ ಅವರ ಒಂದೇ ದೂರವಾಣಿ ಕರೆಗೆ ರಾಜೀನಾಮೆ ನೀಡಿದ ಹನ್ನೊಂದು ಸಚಿವರು

ದೆಹಲಿ: ಕೇವಲ ಒಂದೇ ಒಂದು ಫೋನ್​ ಕರೆಗೆ 4 ಸಚಿವರು ಸೇರಿದಂತೆ 11 ಜನ ಕೇಂದ್ರ ಸಚಿವರು ಬುಧವಾರ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟರು. ಈ ಎಲ್ಲಾ ಬದಲಾವಣೆಗಳು, ಬೆಳವಣಿಗೆಗಳು ನಡೆದಿದ್ದು ಬುಧವಾರ (ಜುಲೈ 7) ಸಂಜೆ ಹೊತ್ತಿಗೆ ಎಂದರೆ ಆಶ್ಚರ್ಯ ಪಡೆಬೇಕಾಗಿಲ್ಲ. ರವಿಶಂಕರ್​ ಪ್ರಸಾದ್​, ಪ್ರಕಾಶ್​ ಜಾವಡೇಕರ್​, ಹರ್ಷವರ್ಧನ್​, ರಮೇಶ್​ ಪೋಖ್ರಿಯಾಲ್​ ನಿಸಾಂಕ್​ ಇವರೇ ಆ ನಾಲ್ಕು ಜನ ಹಿರಿಯ ಸಚಿವರು. ಸರ್ಕಾರದ ಉನ್ನತ ಮೂಲಗಳ ಹೇಳಿದಂತೆ ಒಂದೇ ಒಂದು ಫೋನ್​ ಕರೆ ಇವರ ಸಚಿವ ಸ್ಥಾನವನ್ನ ಕಿತ್ತುಕೊಂಡಿತು ಎಂದಿದೆ.
ಎರಡನೇ ಅವಧಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಕ್ಯಾಬಿನೆಟ್ ಪುನರ್ರಚನೆ ಮಾಡಲು ಸಿದ್ಧತೆ ನಡೆಸುತ್ತಿದ್ದಂತೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ತಮ್ಮ ಫೋನ್‌ ಕೈಗೆತ್ತಿಕೊಂಡು 11 ಕರೆಗಳನ್ನು ಮಾಡಿದರು. ನಡ್ಡಾ 11 ಸಚಿವರಿಗೆ ಕರೆ ಮಾಡಿ ನಿಮ್ಮ, ನಿಮ್ಮ ಪತ್ರಗಳನ್ನು ತಯಾರು ಮಾಡಿಕೊಳ್ಳಿ ಎಂದಷ್ಟೇ ಹೇಳಿದರು ಎಂದು ಸಿಎನ್​ಎನ್​- ನ್ಯೂಸ್​ 18 ವರದಿ ಹೇಳಿದೆ. ಪ್ರಧಾನಿ ಮೋದಿ ಅವರ ನೂತನ ಸವಿವ ಸಂಪುಟ ಹೊಸಾ ಮುಖ, ಮುನ್ನುಗ್ಗುವ, ಯುವಕರಿಗೆ ಹೆಚ್ಚಿನ ಆಧ್ಯತೆ ನೀಡಬೇಕು ಎನ್ನುವ ಅಜೆಂಡಾ ಇಟ್ಟುಕೊಂಡು ರಚಿಸಲಾಯಿತು. ಬುಧವಾರ ಸಂಜೆಯೇ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಅವರು ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್​, ಹರ್ಷವರ್ಧನ್​, ರಮೇಶ್​ ಪೋಖ್ರಿಯಾಲ್​, ಸದಾನಂದ ಗೌಡ, ಸಂತೋಷ್​ ಗಂಗ್ವಾರ್​, ಸಂಜಯ್​ ದೋತ್ರೆ, ದೇಬಸ್ರಿ ಚೌದರಿ, ರತನ್​ ಲಾಲ್​ ಕಠಾರಿಯಾ, ಪ್ರತಾಪ್​ ಚಂದ್ರ ಸಾರಂಗಿ, ಬಾಬುಲ್​ ಸುಪ್ರಿಯೋ ಅವರ ರಾಜಿನಾಮೆ ಪತ್ರಗಳನ್ನು ಅಂಗೀಕರಿಸಿದರು.
6 ಕ್ಯಾಬಿನೆಟ್​ ದರ್ಜೆಯ ಸಚಿವರು, 1 ರಾಜ್ಯ (ಸ್ವತಂತ್ರ) 5 ರಾಜ್ಯ ಖಾತೆ ಸಚಿವರು ರಾಜಿನಾಮೆ ನೀಡಿದಂತಾಗಿದೆ. ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ ತಕ್ಷಣ ಅನೇಕರು ತಮ್ಮ ಸಾಮಾಜಿಕ ಜಾಲತಾಣಗಳ ಸ್ವವಿರದಲ್ಲಿ ಬದಲಾವಣೆ ಮಾಡಿದ್ದಾರೆ. ರವಿಶಂಕರ್​ ಪ್ರಸಾದ್​ ತಮ್ಮ ಟ್ವೀಟರ್​ ಬಯೋ ದಲ್ಲಿ ಪಾಟ್ನಾ ಸಾಹಿಬ್​ ಲೋಕಸಭಾ ಕ್ಷೇತ್ರದ ಸದಸ್ಯ, ಬಿಹಾರ ಮತ್ತು ಬಿಜೆಪಿ ಕಾರ್ಯಕರ್ತ ಎಂದು ಬದಲಾಯಿಸಿದ್ದರೆ. ಪ್ರಕಾಶ್​ ಜಾವಡೇಕರ್​ ರಾಜ್ಯ ಸಭಾ ಸದಸ್ಯ ಎಂದು ಬದಲಾಯಿಸಿದ್ದಾರೆ. ಹೊಸಾ ಸಚಿವರಲ್ಲಿ 8 ಮಂದಿ ವಕೀಲರಿದ್ದು, ನಾಲ್ಕು ಮಂದಿ ವೈದ್ಯರಿದ್ದಾರೆ, ಇಬ್ಬರು ಮಾಜಿ ಐಎಎಸ್​ ಅಧಿಕಾರಿಗಳು, ಮತ್ತು ನಾಲ್ಕು ಮಂದಿ ಎಂಬಿಎ ಪದವೀಧರರು, ಇದರ ಜೊತೆಗೆ ಎಂಜಿನಿಯರಿಂಗ್​ ಹಾಗೂ ಇತರೇ ಕೌಶಲಗಳನ್ನು ಹೊಂದಿರುವ ಉತ್ಸಾಹಿಗಳನ್ನೇ ತಮ್ಮ ಸುತ್ತಾ ಸೇರಿಸಿಕೊಂಡಿದ್ದಾರೆ. ಏಕೆಂದರೆ ಕೊರೋನಾ ಕಾಲದಲ್ಲಿ ಬಿಜೆಪಿಗೆ ಸಾಕಷ್ಟು ಹೊಡೆತಗಳು ಬಿದ್ದಿದ್ದು, ಜನರಲ್ಲಿ ಬಿಜೆಪಿ ಬೇಡ ಎನ್ನುವ ಅಭಿಪ್ರಾಯ ದಟ್ಟವಾಗುತ್ತಿದೆ. ಆದ ಕಾರಣ 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು 15 ಕ್ಯಾಬಿನೆಟ್​ ದರ್ಜೆ, 28 ರಾಜ್ಯ ಸಚಿವ ಹುದ್ದೆಗಳನ್ನು ಹೊಸಾ ಮುಖಗಳಿಗೆ ನೀಡಿರುವುದು ಎನ್ನಲಾಗಿದೆ.

Indresh KC

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

6 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

7 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

8 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

8 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

8 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

8 hours ago