News Karnataka Kannada
Monday, April 29 2024
ದೇಶ

ದೇಶದ ಚಿಲ್ಲರೆ ಹಣದುಬ್ಬರ ಅಲ್ಪ ಇಳಿಕೆ

Rbi Atm Rbi
Photo Credit :

ನವದೆಹಲಿ ; ದೇಶದ ಚಿಲ್ಲರೆ ಹಣದುಬ್ಬರ ದರವು ಜುಲೈ ತಿಂಗಳಲ್ಲಿ ಶೇ 5.59 ಆಗಿದ್ದು, ಕಳೆದ ತಿಂಗಳು ಜೂನ್​ನಲ್ಲಿ ಇದ್ದ ಶೇ 6.26ಕ್ಕಿಂತ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ಇದರಿಂದಾಗಿ ಕೇಂದ್ರ ಬ್ಯಾಂಕ್​ನ ಮೇಲೆ ಇದ್ದ ಒತ್ತಡ ಕಡಿಮೆ ಆದಂತಾಗಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ನಿಗದಿ ಮಾಡಿಕೊಂಡಿದ್ದ ಗುರಿಗಿಂತ, ಅಂದರೆ ಶೇ 6ಕ್ಕಿಂತ ಮೇಲಿತ್ತು. ಸಾಂಖ್ಯಿಕ ಕಚೇರಿ ದತ್ತಾಂಶದ ಪ್ರಕಾರವಾಗಿ, ಪ್ರೊಟೀನ್ ಪದಾರ್ಥಗಳಾದ ಮೊಟ್ಟೆ, ತೈಲಗಳು ಮತ್ತು ಇತರ ವಸ್ತುಗಳು ಬೆಲೆ ಏರಿಕೆಯಾದರೂ ಆಹಾರ ಹಣದುಬ್ಬರ ದರವು ಜುಲೈನಲ್ಲಿ ಶೇ 3.96ಕ್ಕೆ ಇಳಿಕೆ ಆಗಿದೆ. ಇಂಧನ ಹಣದುಬ್ಬರ ಶೇ 12.38ರಷ್ಟಿದ್ದು, ಸೇವಾ ಹಣದುಬ್ಬರ ಜುಲೈ ಶೇ 6.71ರಷ್ಟಿತ್ತು. ಕೇಂದ್ರ ಬ್ಯಾಂಕ್ ಕಳೆದ ಶುಕ್ರವಾರದಂದು ಘೋಷಣೆ ಮಾಡಿದಂತೆ, ಸತತವಾಗಿ ಏಳನೇ ಬಾರಿ ಬಡ್ಡಿ ದರವನ್ನು ಯಥಾ ಸ್ಥಿತಿಯಲ್ಲಿ ಉಳಿಸಿಕೊಂಡಿದೆ.

ಕೊವಿಡ್ ಬಿಕ್ಕಟ್ಟಿನಿಂದಾಗಿ ಎದುರಾಗಿರುವ ಆರ್ಥಿಕ ಸವಾಲನ್ನು ಮೆಟ್ಟಿ ನಿಲ್ಲುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಣಕಾಸು ನೀತಿ ಸಮಿತಿ ಸದಸ್ಯರಲ್ಲೇ ಈ ದರದ ಬಗ್ಗೆ ಭಿನ್ನ ಅಭಿಪ್ರಾಯಗಳು ಇದ್ದ ಹೊರತಾಗಿಯೂ ಹಣದುಬ್ಬರದ ಪರಿಣಾಮದ ಮಧ್ಯೆಯೂ ಬಡ್ಡಿ ದರ ಯಥಾ ಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೆಪೋ ದರವನ್ನು ಶೇ 4ರಲ್ಲಿ ಹಾಗೇ ಮುಂದುವರಿಸಿದೆ. ಇನ್ನು ಈ ನೀತಿಯನ್ನು 5-1ರ ಮತದಲ್ಲಿ ಒಪ್ಪಿಕೊಳ್ಳಲಾಗಿದೆ. ಸದಸ್ಯರಾದ ಜಯಂತ್ ವರ್ಮಾ ತಮ್ಮ ಅಭಿಪ್ರಾಯ ಭೇದವನ್ನು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು