ನವದೆಹಲಿ: ದೇಶದಲ್ಲಿ ಇದುವರೆಗೆ 90 ಕೋಟಿಗೂ ಹೆಚ್ಚು ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಶನಿವಾರ ತಿಳಿಸಿದ್ದಾರೆ.
“ಶಾಸ್ತ್ರಿ ಜೀ ‘ಜೈ ಜವಾನ್ – ಜೈ ಕಿಸಾನ್’ ಘೋಷಣೆಯನ್ನು ನೀಡಿದರು. ಪೂಜ್ಯ ಅಟಲ್ ಜೀ ಅವರು ‘ಜೈ ವಿಜ್ಞಾನ’ ಮತ್ತು ಪ್ರಧಾನಿ ನರೇಂದ್ರ ಮೋದಿ ಜೀ ಅವರು ‘ಜೈ ಅನುಸಂಧಾನ್’ ಘೋಷಣೆಯನ್ನು ನೀಡಿದರು. ಈ ಕರೋನಾ ಲಸಿಕೆ ಅನುಸಂಧಾನದ ಫಲಿತಾಂಶ. ಜೈ ಅನುಸಂಧನ್” ಎಂದು ಮಾಂಡವಿಯಾ ಅವರು ಟ್ವೀಟ್ ಮಾಡಿದ್ದಾರೆ.