ದೇಶ

ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ತುಸು ಹೆಚ್ಚಳ

ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ತುಸು ಹೆಚ್ಚಳವಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 44,230 ಮಂದಿಗೆ ಸೋಂಕು ತಗುಲಿದೆ. 555 ಮಂದಿ ಮೃತಪಟ್ಟಿದ್ದಾರೆ.

ಈವರೆಗೆ 3,15,72,344 ಮಂದಿ ಸೋಂಕಿತರಾಗಿದ್ದು, ಮೃತರ ಸಂಖ್ಯೆ 4,23,217ಕ್ಕೆ ತಲುಪಿದೆ. ಒಟ್ಟು 3,07,43,972 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ 4,05,155 ಸಕ್ರಿಯ ಪ್ರಕರಣಗಳಿವೆ. ಇದು ಒಟ್ಟು ಪ್ರಕರಣಗಳ ಶೇ 1.28ರಷ್ಟಾಗಿದೆ. 42,360 ಸೋಂಕಿತರು ಗುಣಮುಖರಾಗುವ ಮೂಲಕ ಚೇತರಿಕೆ ಪ್ರಮಾಣ ಶೇ 97.38ರಷ್ಟಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಪಾಸಿಟಿವಿಟಿ ಪ್ರಮಾಣ ಏರಿಕೆ: ದೈನಂದಿನ ಮತ್ತು ವಾರದ ಪಾಸಿಟಿವಿಟಿ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ 2.44ಕ್ಕೆ ಏರಿಕೆಯಾಗಿದ್ದು, ವಾರದ ಪ್ರಮಾಣ ಶೇ 2.43ಕ್ಕೆ ತಲುಪಿದೆ ಎಂದು ಹೇಳಿದೆ.

Sampriya YK

Recent Posts

ತಲೆ ಮೇಲೆ ಇಟ್ಟಿಗೆ ಎತ್ತಿ ಹಾಕಿ ಗೆಳೆಯನಿಂದಲೇ ಕೊಲೆ

ಮದ್ಯ ಸೇವನೆಗೆಂದು ಕರೆದೊಯ್ದು ಕೊಲೆ ಮಾಡಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

4 mins ago

ಏನು ಕ್ರಮ ತೆಗೆದುಕೊಳ್ಳಬೇಕೋ ಅದು ಸರ್ಕಾರದ ಜವಾಬ್ದಾರಿ: ಹೆಚ್.ಡಿ ದೇವೇಗೌಡ

ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆ. ಆದ್ರೆ ನೆಲದ ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದು ಸರ್ಕಾರದ ಜವಾಬ್ದಾರಿ.…

13 mins ago

ಎವರೆಸ್ಟ್ ಚಿಕನ್ ಮಸಾಲಾ ನಿಷೇದಕ್ಕೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ

ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಹೆಚ್ಚಾಗಿರುವುದರಿಂದ ಇದನ್ನು ಬಳಸದಂತೆ ಅಧಿಕಾರಿಗಳಿಂದ ಉತ್ತರ ಕನ್ನಡ ಜಿಲ್ಲೆ ಆಹಾರ ಸುರಕ್ಷತಾ…

17 mins ago

ಎಚ್.ಡಿ.ಕೋಟೆ: ಕಬಿನಿ ಜಲಾಶಯಕ್ಕೆ ಹಾರಿ ನೌಕರ ಆತ್ಮಹತ್ಯೆ

ಕಬಿನಿ ಜಲಾಶಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

30 mins ago

ಕ್ಯಾಂಟರ್ ಅಡ್ಡಗಟ್ಟಿ ಹತ್ತಿ ವ್ಯಾಪಾರಿಗಳಿಂದ ₹32 ಲಕ್ಷ ದರೋಡೆ

ಕ್ಯಾಂಟರ್ ಅಡ್ಡಗಟ್ಟಿ ಹತ್ತಿ ವ್ಯಾಪಾರಿಗಳಿಂದ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ, ಅವರ ಬಳಿ ಇದ್ದ ₹32 ಲಕ್ಷವನ್ನು ದೋಚಿಕೊಂಡು…

32 mins ago

ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಬಟ್ಟೆ ತೊಳೆಯಲು ಬಳಕೆ!

ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಪತ್ತೆಯಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ಕೆಳದಿ ಅರಸರ ಕಾಲದ…

35 mins ago