Categories: ದೇಶ

ಜಿಎಸ್‌ಟಿ ಸಂಗ್ರಹ ; 10 ತಿಂಗಳಿನ ಕನಿಷ್ಟ ದಾಖಲು

ನವದೆಹಲಿ: ಕಳೆದ 10 ತಿಂಗಳಲ್ಲಿ ಭಾರೀ ಕಡಿಮೆ ಆದಾಯ ಸಂಗ್ರಹಗೊಂಡಿದ್ದು, ಜೂನ್‌ ತಿಂಗಳಿನಲ್ಲಿ 92,849 ಕೋಟಿ ರೂ. ಜಿಎಸ್‌ಟಿ ಆದಾಯ ಸಂಗ್ರಹವಾಗಿದೆ.
ಜೂನ್ 5 ರಿಂದ ಜುಲೈ 5 ರವರೆಗಿನ ದೇಶೀಯ ವಹಿವಾಟಿನಿಂದಾದ ಜಿಎಸ್ ಟಿ ಸಂಗ್ರಹ ಇದಾಗಿದೆ. ಸಿಜಿಎಸ್ ಟಿ 16,424 ಕೋಟಿ ರೂ., ಎಸ್ ಜಿ ಎಸ್ ಟಿ 20,397 ಕೋಟಿ ರೂ., ಐಜಿಎ ಎಸ್ ಟಿ 49,079 ಕೋಟಿ ರೂ. ಮತ್ತು ಸೆಸ್ 6,949 ಕೋಟಿ ರೂ. ಸಂಗ್ರಹವಾಗಿದೆ.
ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಒಟ್ಟು 5 ಕೋಟಿವರೆಗೆ ವಹಿವಾಟು ಹೊಂದಿರುವ ತೆರಿಗೆ ಪಾವತಿದಾರರಿಗೆ 2021 ಜೂನ್ ತಿಂಗಳಿಗೆ ರಿಟರ್ನ್ ಫೈಲಿಂಗ್ 15 ದಿನಗಳ ಕಾಲ ವಿಳಂಬವಾದ ರಿಟರ್ನ್ ಫೈಲಿಂಗ್ ಮೇಲಿನ ಮನ್ನಾ / ಬಡ್ಡಿ ಕಡಿತದ ರೂಪದಲ್ಲಿ ತೆರಿಗೆದಾರರಿಗೆ ವಿವಿಧ ಪರಿಹಾರ ಕ್ರಮಗಳನ್ನು ನೀಡಲಾಗಿತ್ತು. ಜೂನ್ 2021 ರ ಆದಾಯವು ಕಳೆದ ವರ್ಷ ಇದೇ ತಿಂಗಳ ಜಿಎಸ್ ಟಿ ಆದಾಯಕ್ಕಿಂತ ಪ್ರತಿಶತ 2 ರಷ್ಟು ಹೆಚ್ಚಾಗಿದೆ.
ಸತತ ಎಂಟು ತಿಂಗಳವರೆಗೆ 1 ಲಕ್ಷ ಕೋಟಿ ಗುರುತನ್ನು ದಾಟಿ, ಜೂನ್ 2021 ರಲ್ಲಿ ಸಂಗ್ರಹವು 1 ಲಕ್ಷ ಕೋಟಿ ರೂ. ಗಿಂತ ಕಡಿಮೆಯಾಗಿದೆ. ಮೇ 2021 ರಲ್ಲಿ, ಕೋವಿಡ್ ಕಾರಣದಿಂದಾಗಿ ಹೆಚ್ಚಿನ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣ ಅಥವಾ ಭಾಗಶಃ ಲಾಕ್ ಡೌನ್ ಆಗಿದ್ದವು.
ಜೂನ್ 2021 ರಲ್ಲಿ ಉತ್ಪತ್ತಿಯಾಗುವ ಇ-ವೇ ಬಿಲ್ ಗಳು 5.5 ಕೋಟಿ ಆಗಿದ್ದು, ಇದು ವ್ಯಾಪಾರ ಮತ್ತು ವ್ಯವಹಾರದ ಚೇತರಿಕೆಯನ್ನು ಸೂಚಿಸುತ್ತದೆ. ಏಪ್ರಿಲ್ 2021 ರ ಮೊದಲ ಎರಡು ವಾರಗಳಲ್ಲಿ ದೈನಂದಿನ ಸರಾಸರಿ ಇ-ವೇ ಬಿಲ್ 20 ಲಕ್ಷವಾಗಿದ್ದು, ಇದು 2021 ರ ಏಪ್ರಿಲ್ ಕೊನೆಯ ವಾರದಲ್ಲಿ 16 ಲಕ್ಷಕ್ಕೆ ಇಳಿದಿದೆ ಮತ್ತು ಮೇ 9 ರಿಂದ 22 ರವರೆಗೆ ಎರಡು ವಾರಗಳಲ್ಲಿ 12 ಲಕ್ಷಕ್ಕೆ ಇಳಿದಿದೆ. ಅದರ ನಂತರ, ಇ-ವೇ ಬಿಲ್ ಗಳ ಸರಾಸರಿ ಉತ್ಪಾದನೆಯು ಹೆಚ್ಚುತ್ತಿದೆ ಮತ್ತು ಜೂನ್ 20 ರಿಂದ ವಾರದಿಂದ ಮತ್ತೆ 20 ಲಕ್ಷ ಮಟ್ಟಕ್ಕೆ ತಲುಪಿದೆ. ಆದ್ದರಿಂದ, ಜೂನ್ ತಿಂಗಳಲ್ಲಿ ಜಿಎಸ್ ಟಿ ಆದಾಯವು ಕುಸಿದಿದ್ದರೆ, ಜುಲೈ 2021 ರಿಂದ ಆದಾಯವು ಮತ್ತೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

Indresh KC

Recent Posts

ಚಾಲಕನ ನಿಯಂತ್ರಣ ತಪ್ಪಿ ಟ್ರಕ್‌ಗೆ ಕಾರು ಡಿಕ್ಕಿ : 6 ಜನ ಮೃತ್ಯು

ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಜನ ಮೃತಪಟ್ಟಿರುವ ಘಟನೆ ಬ್ರಜ್‌ಘಾಟ್ ಟೋಲ್ ಪ್ಲಾಜಾ ಬಳಿ ನಡೆದಿದೆ ಎಂದು…

42 seconds ago

ಲೊಕಸಾಭಾ ಚುನಾವಣೆ : ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

ಇಂದು ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಕಾಲಭೈರವನ ದರ್ಶನ ಪಡೆದು ಬಳಿಕ…

14 mins ago

ಸಾಣೂರು ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿ -169 : ಸಮಸ್ಯೆಗಳು ಹತ್ತಾರು

ರಾಷ್ಟ್ರೀಯ ಹೆದ್ದಾರಿ-169 ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸಾಣೂರು ಗ್ರಾಮದಿಂದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆಯ ಬಿಕರ್ನ…

20 mins ago

ರಘುಪತಿ ಭಟ್ ಮನೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಭೇಟಿ

ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿದ ಕಾರಣ ಅಸಮಾಧಾನಗೊಂಡ ಮಾಜಿ ಶಾಸಕ ಕೆ. ರಘುಪತಿ ಭಟ್ ಪಕ್ಷೇತರ ಅಭ್ಯರ್ಥಿಯಾಗಿ…

32 mins ago

ಬೆಂಗಳೂರಿನ ಖಾಸಗಿ ಶಾಲೆಗೆ ಮಧ್ಯರಾತ್ರಿ ಬಾಂಬ್‌ ಬೆದರಿಕೆ

ದೇಶದಾದ್ಯಂತ ಬಾಂಬ್‌ ಬೆದರಿಕೆ ಹಾಕುತ್ತಿರುವ ಹಿನ್ನಲೆಯಲ್ಲಿ ಇದೀಗ ನಗರದ ಖಾಸಗಿ ಶಾಲೆಯೋಂದಕ್ಕೆ ದುಷ್ಕರ್ಮಿಗಳು ಬಾಂಬ್‌ ಬೆದರಿಕೆ ಹಾಕಿದ್ದಾರೆ. ಅಮೃತಹಳ್ಳಿ ಠಾಣಾ…

47 mins ago

ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ವೈದ್ಯಾಧಿಕಾರಿಯಿಂದ ಹಲ್ಲೆ; ಕುಸಿದು ಸಾವನ್ನಪ್ಪಿದ ಕಿಟ್ಟ

ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರಿಗೆ ಪಶು ವೈದ್ಯಾಧಿಕಾರಿಯೊಬ್ಬರು ಹಲ್ಲೆ ನಡೆಸಿದ ಕಾರಣ ವ್ಯಕ್ತಿ ಕುಸಿದು ಬಿದ್ದು ಸಾವನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ…

59 mins ago