ಗಡಿ ದಾಟಿ ಬಾಂಗ್ಲಾ ಯುವತಿಯ ವರಿಸಿ ವಾಪಸಾದ ; ದಂಪತಿ ಬಂಧನ

ಕೋಲ್ಕತ್ತಾ: ಕಾನೂನು ಬಾಹಿರವಾಗಿ ಅಂತರಾಷ್ಟ್ರೀಯ ಗಡಿ ದಾಟಿದ ಹಿನ್ನೆಲೆಯಲ್ಲಿ ಬಿಎಸ್ ಎಫ್ ಸಿಬ್ಬಂದಿ ಶನಿವಾರ ಭಾರತೀಯ ಮೂಲದ ವ್ಯಕ್ತಿ ಹಾಗೂ ಬಾಂಗ್ಲಾ ಮೂಲದ ಮಹಿಳೆಯನ್ನು ಪಶ್ಚಿಮ ಬಂಗಾಳದ ನಡಿಯಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಬಂಧಿಸಿ ವಿಚಾರಣೆ ನಡೆಸಿದ ವೇಳೆ, ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಲು ಆರಂಭಿಸಿದ್ದೇವೆ. ಅಲ್ಲದೆ ಮದುವೆಯಾಗಲು ನಿರ್ಧರಿಸಿರುವುದಾಗಿ ತಿಳಿಸಿದರು.
ಯುವಕನನ್ನು ಜೈಕಾಂತ್ ಚಂದ್ರ ರೈ(24) ಎಂದು ಗುರುತಿಸಲಾಗಿದ್ದು, ಈತ ನಡಿಯಾ ಜಿಲ್ಲೆಯ ಬಲ್ಲಾವ್ ಪುರ ಗ್ರಾಮದವನು. 18 ವರ್ಷದ ಪರಿಣಿತಿ (ಹೆಸರು ಬದಲಿಸಲಾಗಿದೆ) ಬಾಂಗ್ಲಾದೇಶದ ನೆರೈಲ್ ಮೂಲದವಳು. ಜೂನ್ 26ರಂದು ಸಂಜೆ ಬಿಎಸ್‍ಎಫ್ ಇಂಟಲಿಜೆನ್ಸಿಗೆ ಮಾಹಿತಿಯೊಂದು ರವಾನೆಯಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಮಧುಪುರ ಗಡಿ ಹೊರಠಾಣೆ ಕರ್ತವ್ಯದಲ್ಲಿದ್ದ 82 ಬೆಟಾಲಿಯನ್ ಪಡೆಗಳನ್ನು ಎಚ್ಚರಿಸಲಾಯಿತು. ಸಂಜೆ 4:15 ರ ಸುಮಾರಿಗೆ ಭದ್ರತಾ ಸಿಬ್ಬಂದಿ ದಂಪತಿಯನ್ನು ಗಡಿ ರಸ್ತೆಯಲ್ಲಿ ಗುರುತಿಸಿದರು.
ಭದ್ರತಾ ಸಿಬ್ಬಂದಿ ದಂಪತಿಯನ್ನು ತನಿಖೆ ನಡೆಸಿದರು. ಈ ವೇಳೆ ವ್ಯಕ್ತಿಯನ್ನು ಭಾರತೀಯ ಎಂದು ಗುರುತಿಸಲಾಗಿದ್ದರೂ, ಮಹಿಳೆ ಮಾತ್ರ ತನ್ನ ಗುರುತನ್ನು ಬಹಿರಂಗಪಡಿಸಲಿಲ್ಲ. ಇದರಿಂದ ಅನುಮಾನಗೊಂಡ ಅವರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ವಿಚಾರಣೆ ನಡೆಸಿದಾಗ, ತಾನು ಮತ್ತು ಪರಿಣಿತಿ ಫೇಸ್‍ಬುಕ್‍ನಲ್ಲಿ ಭೇಟಿಯಾಗಿದ್ದೇವೆ ಎಂದು ರೈ ಹೇಳಿದರು. ಅಲ್ಲದೆ ಮಾರ್ಚ್ 8 ರಂದು ತಾರಕ್‍ನಗರದಿಂದ ಅಪ್ಪು ಎಂಬ ಬ್ರೋಕರ್ ಸಹಾಯದಿಂದ ಬಾಂಗ್ಲಾದೇಶಕ್ಕೆ ಹೋಗಿದ್ದೇನೆ. ನಂತರ ಮಾರ್ಚ್ 10 ರಂದು ಅವರು ಪರಿಣಿತಿಯನ್ನು ವಿವಾಹವಾಗಿದ್ದು, ಜೂನ್ 25 ರವರೆಗೆ ಬಾಂಗ್ಲಾದೇಶದಲ್ಲಿದ್ದಿದ್ದಾಗಿ ತಿಳಿಸಿದ್ದಾನೆ.
ಇತ್ತ ಪರಿಣಿತಿ ತನ್ನ ಹೇಳಿಕೆಯಲ್ಲಿ, ತಾನು ಬಾಂಗ್ಲಾದೇಶ ಮೂಲದವಳು ಮತ್ತು ತನ್ನ ಪತಿಯೊಂದಿಗೆ ಭಾರತಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಳೆ. ಗಡಿ ದಾಟ ರಾಜು ಮಂಡಲ್ ಎಂಬ ಬಾಂಗ್ಲಾದೇಶದ ಟೌಟ್‍ಗೆ 10,000ರೂ ಹಣ ಪಾವತಿಸಿರುವುದಾಗಿ ತಿಳಿಸಿದ್ದಾಳೆ. ಸದ್ಯ ಇಬ್ಬರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಭಿಂಪುರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ 82 ಬೆಟಾಲಿಯನ್‍ನ ಕಮಾಂಡಿಂಗ್ ಅಧಿಕಾರಿ ಸಂಜಯ್ ಪ್ರಸಾದ್ ಸಿಂಗ್ ಪ್ರತಿಕ್ರಿಯಿಸಿ, ಬಾಂಗ್ಲಾದೇಶದ ಹುಡುಗಿಯನ್ನು ಮದುವೆಯಾಗಲು ಭಾರತೀಯ ವ್ಯಕ್ತಿ ಅಂತರರಾಷ್ಟ್ರೀಯ ಗಡಿ ದಾಟಿದ್ದಾನೆ. ಅವರಿಬ್ಬರ ಸಂಬಂಧವು ನಿಜವೆಂದು ತೋರುತ್ತದೆ ಎಂದಿದ್ದಾರೆ.

Indresh KC

Recent Posts

ಅಂಬೇಡ್ಕರ್ ಜಯಂತೋತ್ಸವದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 133ನೇ ಜಯಂತೋತ್ಸವ ಅಂಗವಾಗಿ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ವಿಮೋಚನಾ ಯುವಕರ ಸಂಘದ…

15 mins ago

ಗಾಳಿ ಮಳೆಗೆ ಮರ ಬಿದ್ದು ಮನೆಗೆ ಹಾನಿ; ಶಾಸಕರ ಭೇಟಿ, ತಕ್ಷಣ ವ್ಯವಸ್ಥೆ ಮಾಡುವಂತೆ ಸೂಚನೆ

ಭಾನುವಾರ ಸಂಜೆ ಪುತಯ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿಮಳೆ ಬಂದಿದ್ದು ಬಪ್ಪಳಿಗೆಯ ಸಿಂಗಾಣಿ ಎಂಬಲ್ಲಿ ಕಮಲ ಎಂಬವರ ಮನೆಯ ಮಾಡಿನ…

19 mins ago

‘ಸೀತಾರಾಮ’ ಖ್ಯಾತಿಯ ವೈಷ್ಣವಿಗೆ ದಂಡ ವಿಧಿಸಿದ ರಿಯಲ್ ಪೊಲೀಸರು

ಯಾವಾಗಲೂ ಯಾರೇ ಆದರೂ ಟ್ರಾಫಿಕ್​ ರೂಲ್ಸ್​​ ಪಾಲನೆ ಮಾಡಲೇ ಬೇಕು. ಅದು ರಿಯಲ್ ಆಗಿರಲಿ ಅಥವಾ ರೀಲ್ ಆಗಿರಲಿ. ಹೌದು…

33 mins ago

ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸಲು ಭಾರತಕ್ಕೆ ಅಮೆರಿಕ ಯಾಕೆ ಒಪ್ಪಿಗೆ ನೀಡಿದ್ದು?

ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಬಳಿಕ   ಅಮೆರಿಕ ಸೇರಿದಂತೆ ಹಲವು ಯೂರೋಪಿಯನ್ ದೇಶಗಳು ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು…

41 mins ago

ಬೆಂಗಳೂರಿನಲ್ಲಿ ಭಾರಿ ಮಳೆ; ಆರ್​ಸಿಬಿ- ಡೆಲ್ಲಿ ಪಂದ್ಯ ರದ್ದು

ಐಪಿಎಲ್ 2024ರ 62 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಇಂದು ಸಂಜೆ…

56 mins ago

ದೇಶದ ಸಂಪೂರ್ಣ ಸಂಪತ್ತನ್ನು ಶ್ರೀಮಂತರಿಗೆ ಕೊಟ್ಟಿದ್ದಾರೆ ಮೋದಿ: ಪ್ರಿಯಾಂಕಾ ವಾಗ್ದಾಳಿ

ಇಲ್ಲಿನ ಕಾಂಗ್ರೆಸ್​ ಲೋಕಸಭಾ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ 'ಕೈ' ನಾಯಕ ರಾಹುಲ್ ಗಾಂಧಿ ಪರ ಪ್ರಚಾರ ಮಾಡಲು ಆಗಮಿಸಿದ ಅವರ…

1 hour ago