ನವದೆಹಲಿ: ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುತ್ತಿದ್ದಂತೆ ಎನ್ ಡಿಎ ಆಡಳಿತಾರೂಢ 9 ರಾಜ್ಯಗಳಲ್ಲಿ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಇಳಿಸಲಾಗಿದೆ.ಕರ್ನಾಟಕ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ 7 ರೂ. ವ್ಯಾಟ್ ಕಡಿತಗೊಳಿಸಲಾಗಿದೆ.ಅಸ್ಸಾಂನಲ್ಲಿ ಕೂಡ ತಲಾ 7 ರೂ. ಕಡಿತ ಮಾಡಿದೆ. ಬಿಹಾರದಲ್ಲಿ ಪೆಟ್ರೋಲ್ ಮೇಲೆ ಲೀಟರ್ ಗೆ 1.30 ರೂ. ಹಾಗೂ ಡೀಎಲ್ ಮೇಲೆ ಲೀಟರ್ ಗೆ 1.90 ರೂ. ವ್ಯಾಟ್ ಇಳಿಸಿದೆ. ಅಲ್ಲದೇ 5 ಮತ್ತು 10 ರೂ. ಸುಂಕ ಕಡಿತ ಮಾಡಿದೆ.
ಉತ್ತರ ಪ್ರದೇಶದಲ್ಲಿ ಕೂಡ ತೈಲ ಬೆಲೆಯಲ್ಲಿ ಕಡಿತ ಮಾಡಲಾಗಿದೆ. ಗೋವಾ ಸರಕಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್ ಗೆ 7 ರೂ. ಕಡಿತ ಮಾಡಿದೆ. ತ್ರಿಪುರದಲ್ಲಿ ಕೂಡ 7 ರೂ. ಕಡಿತ ಮಾಡಲಾಗಿದೆ. ಉತ್ತರಾಖಂಡ್ ನಲ್ಲಿ 2 ರೂ. ಲೀಟರ್ ಗೆ ಇಳಿಸಲಾಗಿದೆ. ಮಣಿಪುರ ಮತ್ತು ಹಿಮಾಚಲ ಪ್ರದೇಶದಲ್ಲಿ ಕೂಡ ತಲಾ 7 ರೂ. ಕಡಿತ ಮಾಡಲಾಗಿದೆ.