ಒಂದು ಕಿಮಿ ರಸ್ತೆ ನಾಪತ್ತೆ ; ಪೋಲೀಸ್‌ ದೂರು ದಾಖಲು

ಭೂಪಾಲ್‌ : ಬೈಕ್​​ ಕಳ್ಳತನ, ಸರಗಳ್ಳತನ, ಹಣ ಕಳವು ಅಷ್ಟೇ ಏಕೆ, ಇತ್ತೀಚೆಗೆ ಸಗಣಿ ಕಳ್ಳತನ ಮಾಡಿದ್ದ ಘಟನೆಯನ್ನು ಕೇಳಿದ್ದೇವೆ. ಆದರೀಗ ಅದರಂತೆ ವಿಚಿತ್ರವಾದ ಘಟನೆಯೊಂದು ನಡೆದಿದೆ. ಅದುವೆ ರಸ್ತೆ ಕಳ್ಳೆತನ!. ಒಂದು ಕಿ.ಲೋ ಮೀಟರ್​ ಉದ್ದದ ರಸ್ತೆ ಕಳ್ಳತನವಾಗಿದೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಗಿದ್ದರೆ, ಈ ಘಟನೆ ಎಲ್ಲಿ ನಡೆದಿದ್ದು? ರಸ್ತೆ ಕಳ್ಳತನ ಮಾಡುವ ಆ ಮಬಾನುಭಾವರು ಯಾರು? ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾತ್ರೋ ರಾತ್ರಿ ಒಂದು ಕಿಲೋ ಮಿಟರ್​ ಉದ್ದದ ರಸ್ತೆ ಕಳವಾಗಿದೆ. ಹಾಗಂತ ಗ್ರಾಮದ ಡೆಪ್ಯುಟಿ ಸರ್​​ಪಂಚ್​ ಮತ್ತು ಸ್ಥಳೀಯರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಸ್ತೆ ಇರುವುದೇ ಓಡಾಡಲು. ಆದರೆ ರಾತ್ರಿ ಇದ್ದ ರಸ್ತೆ ಬೆಳಗಾಗುವಷ್ಟರಲ್ಲಿ ಕಾಣೆಯಾಗಲು ಹೇಗೆ ಸಾಧ್ಯ?. ಯಾರು ಕಳವು ಮಾಡಿದ್ದಾರೆ? ಈ ಬಗ್ಗೆ ಅನುಮಾನವಿದ್ದ ವ್ಯಕ್ತಿಯ ಬಗ್ಗೆ ದೂರಿನಲ್ಲಿ ದಾಖಲಿಸಲಾಗಿದೆ. ಜನಪದ್​​ ಪಂಚಾಯತ್​ ಕಚೇರಿಗೂ ಈ ವಿಚಾರ ತಿಳಿದಿದ್ದು, ಅಲ್ಲಿನ ಕಾರ್ಯ ನಿರ್ವಾಹಕ ಅಧಿಕಾರಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ರಸ್ತೆ ಕಾಣೆಯಾಗಿರುವುದು ನಿಜವೆಂದು ಹೇಳಿದ್ದಾರೆ.
2017ರಲ್ಲಿ ಕಚ್ಚಾರಸ್ತೆಯನ್ನು ಪಕ್ಕಾ ರಸ್ತೆಯನ್ನಾಗಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಅದಕ್ಕಾಗಿ 10 ಲಕ್ಷ ಮಂಜೂರು ಮಡಲಾಗಿತ್ತು. ಜತೆಗೆ ರಸ್ತೆಯನ್ನು ಪಕ್ಕಾ ರಸ್ತೆಯನ್ನಾಗಿ ಮಾಡಲಾಗಿದೆ ಎಂದು ದಾಖಲೆ ನೀಡಲಾಗಿತ್ತು. ಇನ್ನು ದಾಖಲೆಯಲ್ಲಿ ಸಂಪೂರ್ಣ ಹಣವನ್ನು ವಿನಿಯೋಗಿಸಿ ಮಾಡಿದ ರಸ್ತೆ ಎಂದು ಉಲ್ಲೇಖಿಸಲಾಗಿತ್ತು. ಆದರೆ ರಸ್ತೆ ಎಷ್ಟು ಕಳಪೆಯಾಗಿತ್ತೆಂದರೆ ರಾತ್ರಿ ಸುರಿದ ಮಳೆಗೆ ರಸ್ತೆ ಹದಗೆಟ್ಟು, ಕೆಸರು ತುಂಬಿತ್ತು. ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅಲ್ಲಿನ ಗ್ರಾಮಸ್ಥರು ರಸ್ತೆಯ ದಾಖಲಾತಿ ನೋಡಿ ಬೆರಗಾಗಿದ್ದಾರೆ. 10 ಲಕ್ಷ ವಿನಿಯೋಗಿಸಲಾಗಿದೆ ಎಂದು ಬರೆದದನ್ನು ನೋಡಿ ಜನರು ಹೌಹಾರಿದ್ದಾರೆ.
ಇದೀಗ ಸಿಧಿ ಜಿಲ್ಲೆಯ ಗ್ರಾಮದ ರಸ್ತೆ ಕಾಣೆಯಾಗಿದೆ ಎಂದು ಗ್ರಾಮಸ್ಥರು ದೂರು ದಾಖಲಿಸಿದ್ದು, ಪ್ರಕರಣ ಗಂಭೀರವಾದ ತಿರುವು ಕಂಡಿದೆ. ರಸ್ತೆಯ ಈ ಸ್ಥಿತಿ ಕಾರಣ ಯಾರು? ಮತ್ತು ಹೇಗಾಯಿತು? ಎಂದು ಪತ್ತೆಹಚ್ಚಲು ಸ್ಥಳೀಯ ಆಡಳಿತ ಮುಂದಾಗಿದೆ. ಸದ್ಯದಲ್ಲೇ ಸರಿಯಾದ ತಪ್ಪಿತಸ್ಥರನ್ನು ಹುಡುಕುವುದಾಗಿ ಭರವಸೆ ನೀಡಿದೆ.

Indresh KC

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

2 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

3 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

3 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

3 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

4 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

4 hours ago