ಐಪಿಎಲ್ : ಆರ್ಸಿಬಿ ತಂಡದ ಸ್ಟಾರ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಐಪಿಎಲ್-2021 ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಕೈ ಬೆರಳಿಗೆ ಗಾಯವಾಗಿರುವ ಕಾರಣ ಸುಂದರ್ ಈ ಬಾರಿ ಐಪಿಎಲ್ ಪಂದ್ಯ ಆಡಲು ಆಗುವುದಿಲ್ಲ.
ಅರ್ಧಕ್ಕೇ ನಿಂತಿದ್ದ ಐಪಿಎಲ್ ಟೂರ್ನಿ ಮತ್ತೆ ಆರಂಭವಾಗಲಿದ್ದು, ಬಹುತೇಕ ತಂಡಗಳು ಕ್ವಾರೆಂಟೀನ್ನಲ್ಲಿವೆ. ಇನ್ನು ಹಲವು ತಂಡಗಳು ಈಗಾಗಲೇ ಅಭ್ಯಾಸ ಶುರು ಮಾಡಿದೆ.
ಕ್ಯಾಪ್ಟನ್ ವಿರಾಟ್ ತಂಡಕ್ಕೆ ಈ ಬಾರಿ ಸ್ಟಾರ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಆಟದಿಂದ ಹಿಂದುಳಿದಿರುವುದು ಬೇಸರದ ಸಂಗತಿಯಾಗಿದೆ. ಸುಂದರ್ ಜಾಗಕ್ಕೆ ಬೌಲರ್ ಆಕಾಶ್ ದೀಪ್ ಸಿಂಗ್ ಆಯ್ಕೆಯಾಗಿದ್ದಾರೆ.