News Karnataka Kannada
Tuesday, April 30 2024
ದೇಶ

ಐಟಿಬಿಪಿ ಸಿಬ್ಬಂದಿಗಳಿಗೆ ಶೌರ್ಯ ಪದಕ ಘೋಷಣೆ

Red Fort
Photo Credit :
ನವದೆಹಲಿ : ಭಾರತ-ಚೀನಾ ಎಲ್ಎಸಿಯಲ್ಲಿ ಕಾವಲು ಕಾಯುವ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಗಳಿಗೆ ಶೌರ್ಯ ಪದಕಗಳನ್ನು ಘೋಷಿಸಲಾಗಿದೆ.
ಕಳೆದ ವರ್ಷ ಈಶಾನ್ಯ ಲಡಾಖ್ ನಲ್ಲಿ ಚೀನಾ-ಭಾರತದ ಸೇನೆ  ನಡುವೆ ನಡೆದ ಸಂಘರ್ಷದ ಸಂದರ್ಭದಲ್ಲಿ ಹೋರಾಡಿದ್ದರಿಂದ ಐಟಿಬಿಪಿ ಪಡೆಗಳಿಗೆ ಶೌರ್ಯ ಪದಕಗಳನ್ನು ನೀಡಲಾಗುತ್ತಿದೆ.
 ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರ ನೀಡಲಾಗುವ 1,380 ಸೇವಾ ಪದಕಗಳ ಪೈಕಿ ಶೌರ್ಯ ಪದಕಗಳನ್ನು ರಾಜ್ಯ, ಕೇಂದ್ರ ಪೊಲೀಸ್ ಪಡೆಗಳಿಗೆ ನೀಡಲಾಗುತ್ತದೆ.
 ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಗಳನ್ನು, 628 ಪೊಲೀಸ್ ಶೌರ್ಯ ಪದಕ (ಪಿಎಂಜಿ) ವಿಶಿಷ್ಟ ಸೇವೆಗಳಿಗಾಗಿ 88 ರಾಷ್ಟ್ರಪತಿಗಳ ಪೊಲೀಸ್ ಪದಕ, ಶ್ಲಾಘನೀಯ ಸೇವೆಗಳಿಗೆ 662 ಪೊಲೀಸ್ ಪದಕಗಳನ್ನು ಘೋಷಣೆ ಮಾಡಲಾಗಿದೆ.
ಅತಿ ಹೆಚ್ಚು ಶೌರ್ಯ ಪದಕಗಳನ್ನು 257 (1 ಪಿಪಿಎಂಜಿ ಹಾಗೂ 256 ಪಿಎಂಜಿ)ಯನ್ನು ಜಮ್ಮು-ಕಾಶ್ಮೀರ ಪೊಲೀಸರು ಪಡೆದಿದ್ದರೆ, ಸಿಆರ್ ಪಿಎಫ್  151 (1 ಪಿಪಿಎಂಜಿ ಹಾಗೂ 150 ಪಿಎಂಜಿ) ಪದಕಗಳನ್ನು ಪಡೆದಿವೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
23 ಶೌರ್ಯ ಪದಕಗಳ ಪೈಕಿ 20 ನ್ನು ಐಟಿಬಿಪಿ ಪಡೆದಿದ್ದು, ಈ 20 ಮಂದಿಯ ಪೈಕಿ 8 ಸಿಬ್ಬಂದಿಗೆ ಮಾತೃಭೂಮಿಯನ್ನು ರಕ್ಷಿಸಲು ನಿಖರವಾದ ಯೋಜನೆ ಮತ್ತು ಯುದ್ಧತಂತ್ರದ ಒಳನೋಟಕ್ಕಾಗಿ ಗುರುತಿಸಿ ಪೊಲೀಸ್ ಶೌರ್ಯ ಪದಕ (ಪಿಎಂಜಿ) ಪದಕವನ್ನು ಘೋಷಣೆ ಮಾಡಲಾಗಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು