Categories: ದೇಶ

ಅಮೆಜಾನ್‌ನಿಂದ ರಾಷ್ಟ್ರಧ್ವಜಕ್ಕೆ ಮತ್ತೆ ಅವಮಾನ!

ಇ ಕಾಮರ್ಸ್‌ ನ ಬಹುದೊಡ್ಡ ಮಾರುಕಟ್ಟೆಯಾಗಿರುವ ಅಮೆಜಾನ್‌ ಮತ್ತೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ತನ್ನ ಆನ್‌ ಲೈನ್‌ ಶಾಪಿಂಗ್‌ ವೆಬ್‌ ನಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡುತ್ತಿದೆ ಎಂದು ವ್ಯಾಪಕ ಆಕ್ರೋಶ ಕೇಳಿಬರುತ್ತಿದೆ.

ಅಮೆಜಾನ್‌ ಭಾರತ ಧ್ವಜಕ್ಕೆ ಅವಮಾನಿಸುವಂತಹ ರೀತಿಯ ಬಟ್ಟೆ, ಮಾಸ್ಕ್‌ ಗಳನ್ನು ನೋಡಿ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಅಮೆಜಾನ್‌ ಅನ್ನು ಬಹಿಷ್ಕರಿಸುವಂತೆ ಹೇಳಿ ಟ್ವಿಟರ್‌ ನಲ್ಲಿ #Amazon_Insults_National_Flag ಹ್ಯಾಷ್‌ ಟ್ಯಾಗ್‌ ಅಡಿಯಲ್ಲಿ ನೆಟ್ಟಿಗರು ಪೋಸ್ಟ್‌ ಹಾಕುತ್ತಿದ್ದಾರೆ.

ತ್ರಿವರ್ಣ ಧ್ವಜದ ಮುದ್ರೆಗಳುಳ್ಳ ಟೀಶರ್ಟ್‌, ಮಗ್‌, ಮಾಸ್ಕ್‌, ಚಾಕೊಲೇಟ್‌ ಕವರ್‌ ಗಳು ಅಮೆಜಾನ್‌ ನಲ್ಲಿ ಮಾರಾಟಕ್ಕಿದೆ. ಇದು ಭಾರತ ಧ್ವಜಕ್ಕೆ ಮಾಡಿದ ಅವಮಾನ ಎಂದು ಜನರು ಹರಿಹಾಯ್ದಿದ್ದಾರೆ.

ಅಮೆಜಾನ್‌ ಈ ರೀತಿ ಭಾರತೀಯರ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ 2017 ಹಾಗೂ 2019ರಲ್ಲಿ ಹಿಂದು ದೇವತೆಗಳ ಚಿತ್ರ ಮುದ್ರಿಸಿರುವ ಚಪ್ಪಲಿ, ಡೋರ್‌ ಮಾಟ್‌, ಟಾಯ್ಲೆಟ್‌ ಸೀಟ್‌ ಕವರ್‌ ಗಳನ್ನು ಮಾರಾಟಕ್ಕೆ ಇಟ್ಟಿತು.  ಆಗಲೂ ಜನರು ಅಮೆಜಾನ್‌ ವಿರುದ್ಧ ಬಹಿಷ್ಕಾರದ ಅಭಿಯಾನ ನಡೆಸಿದ್ದರು.‌

Sneha Gowda

Recent Posts

ಸ್ವಾತಿ ಮೇಲಿನ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಬಿಭವ್ ಅರ್ಜಿ

ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ…

29 mins ago

ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್‌ ವಿಶ್ವ ಸಾವಂತ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರನ…

1 hour ago

ʼರಾಹುಲ್ ಮತ್ತು ನಾನು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿಗೆ ಲಾಭವಾಗುತ್ತಿತ್ತುʼ

ದೇಶದ್ಯಾಂತ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ…

1 hour ago

ಪೊಲೀಸ್‌ ಕಸ್ಟಡಿಯಲ್ಲಿಯೇ ದಂಪತಿ ಆತ್ಮಹತ್ಯೆ: ರೊಚ್ಚಿಗೆದ್ದು ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

2 hours ago

ಆತ್ಮಹತ್ಯೆಗೆ ಮುನ್ನ ನಟ ಚಂದು ಲಾಸ್ಟ್​ ಮೆಸೇಜ್​ ಇದು

ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್​…

2 hours ago

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆ ಸಾಧ್ಯತೆ

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

2 hours ago