Ad

ದಂತ ಕಸಿಗಾಗಿ 4,000ಕ್ಕೂ ಹೆಚ್ಚು ಶವ ಕದ್ದ ಚೀನಾದ ಕಂಪನಿ!

ದಂತ ಕಸಿಗಾಗಿ ಸ್ಮಶಾನಗಳು ಮತ್ತು ವೈದ್ಯಕೀಯ ಪ್ರಯೋಗಾಲಯಗಳಿಂದ 4,000ಕ್ಕೂ ಹೆಚ್ಚು ಶವಗಳನ್ನು ಕದ್ದಿದೆ ಎಂಬ ಆರೋಪ ಚೀನಾದ ಕಂಪನಿಯೊಂದರಲ್ಲಿ ಕೇಳಿಬಂದಿದೆ.

ಬೀಜಿಂಗ್: ದಂತ ಕಸಿಗಾಗಿ ಸ್ಮಶಾನಗಳು ಮತ್ತು ವೈದ್ಯಕೀಯ ಪ್ರಯೋಗಾಲಯಗಳಿಂದ 4,000ಕ್ಕೂ ಹೆಚ್ಚು ಶವಗಳನ್ನು ಕದ್ದಿದೆ ಎಂಬ ಆರೋಪ ಚೀನಾದ ಕಂಪನಿಯೊಂದರಲ್ಲಿ ಕೇಳಿಬಂದಿದೆ.

ಶವಗಳನ್ನು ಕದ್ದ ಆರೋಪ ಮಾಡಿರುವ ಕ್ರಿಮಿನಲ್ ವಕೀಲರು ಈ ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ.

ಶವಗಳನ್ನು ಕದ್ದು ಕಂಪನಿಯು 380 ಮಿಲಿಯನ್ ಯುವಾನ್ (53 ಮಿಲಿಯನ್ ಡಾಲರ್) ಗಳಿಸಿದೆ. ಅದರಲ್ಲೂ ದಂತ ಕಸಿಗಾಗಿ ಮೂಳೆಗಳನ್ನು ಮಾರಾಟ ಮಾಡಿ ಹೆಚ್ಚು ಹಣ ಗಳಿಸುತ್ತಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ರೋಗಿಗಳಲ್ಲಿ ಕಸಿಗಳಿಗೆ ಸಾಕಷ್ಟು ಮೂಳೆ ಸಾಂದ್ರತೆ ಇಲ್ಲದಿದ್ದಾಗ ಅಲೋಜೆನಿಕ್ ಕಸಿಗಳನ್ನು ಬಳಸಲಾಗುತ್ತದೆ.

ಮೂಳೆಯನ್ನು ಸಾಮಾನ್ಯವಾಗಿ ಸೊಂಟದ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುವ ರೋಗಿಗಳಿಂದ ಬಳಸಲಾಗುತ್ತದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 18 ಟನ್ ಮೂಳೆ ಮತ್ತು 34,000 ಕ್ಕೂ ಹೆಚ್ಚು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಕಂಪನಿಯ ಜನರಲ್ ಮ್ಯಾನೇಜರ್ ಆಗಿದ್ದ ಸು ಎಂಬ ಶಂಕಿತನು ಯುನ್ನಾನ್, ಚಾಂಗ್ಕಿಂಗ್, ಗುಯಿಝೌ ಮತ್ತು ಸಿಚುವಾನ್‍ನ ಸ್ಮಶಾನಗಳಿಂದ 4,000 ಕ್ಕೂ ಹೆಚ್ಚು ಶವಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಯುನ್ನಾನ್ ಪ್ರಾಂತ್ಯದ ಶುಯಿಫು, ಚಾಂಗ್ಕಿಂಗ್ ನ ಬನಾನ್ ಜಿಲ್ಲೆ, ಗುಯಿಝೌನ ಶಿಕಿಯಾನ್ ಕೌಂಟಿ ಮತ್ತು ಸಿಚುವಾನ ಡೇಯಿಂಗ್ ಕೌಂಟಿಯ ಚಿತಾಗಾರದ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಹೆಚ್ಚಿನ ಸಂಸ್ಕರಣೆಗಾಗಿ ಸು ಅವರ ಕಂಪನಿಗೆ ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ ಎಂಬ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರಕರಣ ಸಂಬಂಧ ತನಿಖೆಯ ಸಮಯದಲ್ಲಿ ಇನ್ನೂ 75 ಮಂದಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ.

Ad
Ad
Nk Channel Final 21 09 2023