Bengaluru 24°C
Ad

ಶಿಯಾ ಮತ್ತು ಸುನ್ನಿ ಮುಸ್ಲಿಮರ ಮಧ್ಯೆ ಘರ್ಷಣೆ : 46 ಮಂದಿ ಮೃತ್ಯು

ಶಿಯಾ ಮತ್ತು ಸುನ್ನಿ ಮುಸ್ಲಿಮರ ಮಧ್ಯೆ ಘರ್ಷಣೆ ನಡೆಯುತ್ತಿದ್ದು ಇಲ್ಲಿಯವರೆಗೆ 46 ಮಂದಿ ಸಾವನ್ನಪ್ಪಿ 150ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕುರ್ರಂ ಜಿಲ್ಲೆಯಲ್ಲಿ ನಡೆದಿದೆ ಎಂದು ಪಾಕ್‌ನ ʼಡಾನ್‌ʼ ವರದಿ ಮಾಡಿದೆ.

ಇಸ್ಲಾಮಾಬಾದ್: ಶಿಯಾ ಮತ್ತು ಸುನ್ನಿ ಮುಸ್ಲಿಮರ ಮಧ್ಯೆ ಘರ್ಷಣೆ ನಡೆಯುತ್ತಿದ್ದು ಇಲ್ಲಿಯವರೆಗೆ 46 ಮಂದಿ ಸಾವನ್ನಪ್ಪಿ 150ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕುರ್ರಂ ಜಿಲ್ಲೆಯಲ್ಲಿ ನಡೆದಿದೆ ಎಂದು ಪಾಕ್‌ನ ʼಡಾನ್‌ʼ ವರದಿ ಮಾಡಿದೆ.

ಕೃಷಿ ಬಿತ್ತನೆಗೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಆರಂಭವಾದ ಸಣ್ಣ ವಿವಾದ ಈಗ ಘರ್ಷಣೆಗೆ ತಿರುಗಿ ಭಾರೀ ಹಿಂಸಾಚಾರ ನಡೆಯುತ್ತಿದೆ. ಸೆ.21 ರಂದು ಆರಂಭಗೊಂಡ ಹಿಂಸಾಚಾರವನ್ನು ನಿಲ್ಲಿಸಲು ಜಿಲ್ಲಾಡಳಿತ, ಪೊಲೀಸ್, ಮಿಲಿಟರಿ ಮತ್ತು ಸ್ಥಳೀಯ ಬುಡಕಟ್ಟು ಹಿರಿಯರು ಸತತ ಮಾತುಕತೆ ನಡೆಸುತ್ತಿದ್ದರೂ ಘರ್ಷಣೆ ಮುಂದುವರಿದಿದೆ.

ಎರಡೂ ಬಣಗಳು ಜಾಗದ ಹಕ್ಕುಗಳಿಗೆ ಮಾತ್ರವಲ್ಲದೇ ಪಂಥೀಯ ಭಾವನೆಯ ಅಡಿ ಪರಸ್ಪರ ಸಂಘರ್ಷಕ್ಕೆ ಇಳಿದಿವೆ. ಎರಡು ಬಣಗಳ ಸದಸ್ಯರು ಮಿಲಿಟರಿಯವರು ಬಳಸುವ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರಿಂದ ಸಾವು ನೋವು ಹೆಚ್ಚಾಗುತ್ತಿದೆ. ಈ ಭೂ ವಿವಾದದ ಕಿಚ್ಚು ಈಗ ಕುರ್ರಂ ಜಿಲ್ಲೆಯ 10 ಪ್ರದೇಶಗಳಿಗೆ ಹಬ್ಬಿದೆ. ಈ ಸಂಘರ್ಷದಿಂದ ಪರಚಿನಾರ್-ಪೇಶಾವರ್ ಮುಖ್ಯ ರಸ್ತೆ ಮತ್ತು ಪಾಕಿಸ್ತಾನ-ಅಫ್ಘಾನ್ ಖರ್ಲಾಚಿ ಗಡಿಯನ್ನು ಮುಚ್ಚಲಾಗಿದೆ. ಈ ಪ್ರದೇಶದ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಬಂದ್‌ ಮಾಡಲಾಗಿದೆ.

Ad
Ad
Nk Channel Final 21 09 2023