Bengaluru 23°C
Ad

ಇಲ್ಲಿ ಸಣ್ಣ ಹುಡುಗರ ಮೂತ್ರದಿಂದ ಸಿದ್ಧವಾಗುತ್ತೆ ರುಚಿಕರವಾದ ತಿಂಡಿ

China

ಚೀನಾ: ಚೀನಾದಲ್ಲಿ ಸಣ್ಣ ಹುಡುಗರ ಮೂತ್ರಕ್ಕಿದೆ ಭಾರೀ ಬೇಡಿಕೆ. ಯಾಕೆ ಗೊತ್ತಾ ? ಶಾಕಿಂಗ್‌ ಕಾರಣ ಏನೆಂದು ನೀವೂ ತಿಳಿದುಕೊಳ್ಳಿ. ಚೀನಾದಲ್ಲಿ ಮೇಜು, ಮಂಚ ಮತ್ತು ಕುರ್ಚಿಗಳನ್ನು ಹೊರತುಪಡಿಸಿ 4 ಕಾಲುಗಳಿರುವ ಎಲ್ಲವನ್ನೂ ತಿನ್ನಲಾಗುತ್ತದೆ” ಎಂದು ಚೀನಾದ ಬಗ್ಗೆ ಒಂದು ಮಾತು ಇದೆ. ಆದರೆ ಇಂದು ನಾವು ತಿಳಿಸುತ್ತಿರುವ ಈ ಭಕ್ಷ್ಯವು ನಿಮಗೆ ಆಶ್ಚರ್ಯ ಉಂಟುಮಾಡಬಹುದು. ಚೀನಾದಲ್ಲಿ ಇದನ್ನು ವರ್ಜಿನ್ ಎಗ್ಸ್ ಎಂದು ಕರೆಯಲಾಗುತ್ತದೆ. ಇದನ್ನು ಚಿಕ್ಕ ಹುಡುಗರ ಮೂತ್ರವನ್ನು ಬಳಸಿ ತಯಾರಿಸಲಾಗುತ್ತದೆ.

ವಸಂತಕಾಲ ಪ್ರಾರಂಭವಾಗುತ್ತಿದ್ದಂತೆ ಅಲ್ಲಿನ ಜನರು ಈ ಖಾದ್ಯವನ್ನು ತಿನ್ನಲು ಉತ್ಸುಕತೆಯಿಂದ ಎದುರು ನೋಡುತ್ತಾರೆ. ಈ ಖಾದ್ಯದ ವಿಶಿಷ್ಟ ಅಂಶವೆಂದರೆ ಇದನ್ನು ಚಿಕ್ಕ ಹುಡುಗರ ಮೂತ್ರವನ್ನು ಬಳಸಿ ತಯಾರಿಸಲಾಗುತ್ತದೆ. ಇದು ವಿಚಿತ್ರವೆನಿಸಬಹುದು, ಆದರೆ ಇದು ನಿಜ. ಈ ಭಕ್ಷ್ಯದಲ್ಲಿ ಬಳಸುವ ಮೊಟ್ಟೆಗಳನ್ನು ಹುಡುಗರ ಮೂತ್ರದಲ್ಲಿ ನೆನೆಸಲಾಗುತ್ತದೆ. ಅದಕ್ಕಾಗಿಯೇ ಈ ಭಕ್ಷ್ಯವನ್ನು “ವರ್ಜಿನ್ ಎಗ್ಸ್” ಎಂದು ಕರೆಯಲಾಗುತ್ತದೆ.

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ವರ್ಜಿನ್ ಎಗ್ಸ್​ಗಳನ್ನು ತಯಾರಿಸಲು, ಮೊಟ್ಟೆಗಳನ್ನು ಮೊದಲು ಚಿಕ್ಕ ಹುಡುಗರ ಮೂತ್ರದಲ್ಲಿ ಕುದಿಸಲಾಗುತ್ತದೆ. ಕುದಿಸಿದ ನಂತರ, ಮೊಟ್ಟೆಗಳನ್ನು ಸಿಪ್ಪೆ ಸುಲಿದು, ಮತ್ತೆ ಬಿಸಿಯಾದ ಮೂತ್ರದಲ್ಲಿ ಕುದಿಸಿ ಮೊಟ್ಟೆಗಳಿಗೆ ಮೂತ್ರದ ಪರಿಮಳವನ್ನು ಸೇರಿಸಲಾಗುತ್ತದೆ.

ಈ ಖಾದ್ಯವನ್ನು ತಯಾರಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದಕ್ಕೆ ಹೆಚ್ಚಿನ ಪ್ರಮಾಣದ ಮೂತ್ರ ಬೇಕಾಗುತ್ತದೆ. ಆದ್ದರಿಂದ ಮಕ್ಕಳಿಂದ ಮೂತ್ರವನ್ನು ಸಂಗ್ರಹಿಸಲು ಶಾಲೆಗಳಲ್ಲಿ ಬಕೆಟ್​ಗಳನ್ನು ಇರಿಸಲಾಗುತ್ತದೆ. ನಂತರ ಈ ಮೂತ್ರವನ್ನು ದೊಡ್ಡ ಪಾತ್ರೆಗಳಿಗೆ ವರ್ಗಾಯಿಸಲಾಗುತ್ತದೆ. ಅದರಲ್ಲಿ ಮೊಟ್ಟೆಗಳನ್ನು ದಿನವಿಡೀ ನಿಧಾನವಾಗಿ ಬೇಯಿಸಲಾಗುತ್ತದೆ.

ಮೊಟ್ಟೆಗಳನ್ನು ಮೂತ್ರದಲ್ಲಿ ಚೆನ್ನಾಗಿ ಕುದಿಸಿದ ನಂತರ, ಅವುಗಳನ್ನು ತುಂಡು ಮಾಡಿ ತಿನ್ನಲಾಗುತ್ತದೆ.ಇನ್ನು ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಂಬುತ್ತಾರೆ.

Ad
Ad
Nk Channel Final 21 09 2023