Bengaluru 29°C
Ad

ಕಂದಕಕ್ಕೆ ಉರುಳಿ ಬಿದ್ದ ಬಸ್: 28 ಮಂದಿ ಮೃತ್ಯು, 22 ಜನರಿಗೆ ಗಂಭೀರ ಗಾಯ

ಪ್ರಯಾಣಿಕರನ್ನು ತುಂಬಿದ್ದ ಬಸ್​ವೊಂದು ಕಂದಕಕ್ಕೆ ಉರುಳಿ ಬಿದ್ದ ಘಟನೆ ಬಲೂಚಿಸ್ತಾನ್​ ಪ್ರಾಂತ್ಯದಲ್ಲಿ ನಡೆದಿದೆ. 

ಬಲೂಚಿಸ್ತಾನ್​: ಪ್ರಯಾಣಿಕರನ್ನು ತುಂಬಿದ್ದ ಬಸ್​ವೊಂದು ಕಂದಕಕ್ಕೆ ಉರುಳಿ ಬಿದ್ದ ಘಟನೆ ಬಲೂಚಿಸ್ತಾನ್​ ಪ್ರಾಂತ್ಯದಲ್ಲಿ ನಡೆದಿದೆ.

ಘಟನೆಯ ಪರಿಣಾಮ ಮಹಿಳೆ ಮತ್ತು ಮಕ್ಕಳು ಸೇರಿ 28 ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಟರ್ಬತ್​ನಿಂದ ಕ್ವೆಟ್ಟಾಗೆ ತೆರಳುತ್ತಿದ್ದ ಬಸ್​ ಬಲೂಚಿಸ್ತಾನ್​​ನಿಂದ 700 ಕಿಮೀ ದೂರದಲ್ಲಿರುವ ವಾಶುಕ್​​ ಪಟ್ಟಣದಲ್ಲಿ ಬರುವ ಕಂದಕಕ್ಕೆ ಉರುಳಿ ಬಿದ್ದಿದೆ. ಬಸ್​ ವೇಗವಾಗಿ ಸಂಚರಿಸುತ್ತಿದ್ದ ಕಾರಣ ಅಪಘಾತ ಸಂಭವಿಸಿದೆ.

ಬಸ್​​ ಟೈರ್​​ ಒಡೆದು ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. 22 ಜನರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಬಾಸಿಮಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Ad
Ad
Nk Channel Final 21 09 2023
Ad