Ad

22 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಪರ್ವತಾರೋಹಿಯ ಶವ ಪತ್ತೆ!

ಸುಮಾರು 22ವರ್ಷಗಳ ಹಿಂದೆ ಪೆರುವಿನಲ್ಲಿ ಪರ್ವತಾರೋಹಣ ಸಂದರ್ಭದಲ್ಲಿ ಸಂಭವಿಸಿದ ಭಾರೀ ಹಿಮಪಾತದಿಂದಾಗಿ ಕಣ್ಮರೆಯಾಗಿದ್ದ ಪರ್ವತಾರೋಹಿಯ ಶವ ಹವಾಮಾನ ವೈಪರೀತ್ಯದಿಂದ ಮಂಜುಗಡ್ಡೆ ಕರಗಿದ ಪರಿಣಾಮ ಮಮ್ಮಿ(ಶವ) ಪತ್ತೆಯಾಗಿರುವ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೆರು(ಲಿಮಾ): ಸುಮಾರು 22ವರ್ಷಗಳ ಹಿಂದೆ ಪೆರುವಿನಲ್ಲಿ ಪರ್ವತಾರೋಹಣ ಸಂದರ್ಭದಲ್ಲಿ ಸಂಭವಿಸಿದ ಭಾರೀ ಹಿಮಪಾತದಿಂದಾಗಿ ಕಣ್ಮರೆಯಾಗಿದ್ದ ಪರ್ವತಾರೋಹಿಯ ಶವ ಹವಾಮಾನ ವೈಪರೀತ್ಯದಿಂದ ಮಂಜುಗಡ್ಡೆ ಕರಗಿದ ಪರಿಣಾಮ ಮಮ್ಮಿ(ಶವ) ಪತ್ತೆಯಾಗಿರುವ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Ad
300x250 2

2002ರ ಜೂನ್‌ ನಲ್ಲಿ ಪರ್ವತಾರೋಹಿ ವೀಲಿಯಮ್‌ ಸ್ಟ್ಯಾಂಫ್ಲ್‌ (59ವರ್ಷ) ಹಿಮಪಾತದಿಂದಾಗಿ ಜೀವಂತವಾಗಿ ಸಮಾಧಿಯಾಗಿದ್ದರು.ಈ ಘಟನೆ 22,000 ಸಾವಿರ ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ ನಡೆದಿತ್ತು. ರಕ್ಷಣಾ ತಂಡ ಶೋಧ ಕಾರ್ಯ ನಡೆಸಿದ್ದರು ಕೂಡಾ ಶವ ಪತ್ತೆಯಾಗಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.

ಮಂಜುಗಡ್ಡೆಯಿಂದಾಗಿ ಸ್ಟ್ಯಾಂಫ್ಲ್‌ ದೇಹ, ಬಟ್ಟೆ ಕೊಳೆಯದೇ ಮಮ್ಮಿ ರೀತಿ ಸಂರಕ್ಷಿಸಲ್ಪಟ್ಟಿರುವುದಾಗಿ ಪೆರು ಪೊಲೀಸರು ತಿಳಿಸಿದ್ದಾರೆ. ಪ್ಯಾಂಟ್‌ ಕಿಸೆಯಲ್ಲಿದ್ದ ಪಾಸ್‌ ಪೋರ್ಟ್‌ ಮೂಲಕ ಗುರುತು ಪತ್ತೆಹಚ್ಚಲು ಸಾಧ್ಯವಾಗಿರುವುದಾಗಿ ವರದಿ ವಿವರಿಸಿದೆ.

Ad
Ad
Nk Channel Final 21 09 2023
Ad