ಢಾಕಾ: ಕಳೆದ ಕೆಲ ದಿನಗಳಿಂದ ಬಾಂಗ್ಲಾದೇಶ ಹೊತ್ತಿ ಉರಿಯಲು ಕಾರಣವಾದ ಉದ್ಯೋಗ ಕೋಟಾ ಮರುಜಾರಿ ಆದೇಶವನ್ನು ಉನ್ನತ ನ್ಯಾಯಾಲಯ ಹಿಂಪಡೆದಿದೆ. ಉದ್ಯೋಗ ಕೋಟಾ ಮರುಜಾರಿ ಆದೇಶವನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಸಂಘರ್ಷಕ್ಕೆ ಎಡೆ ಮಾಡಿತ್ತು. ಪೊಲೀಸರು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನಡುವೆ ರಾಷ್ಟ್ರವ್ಯಾಪಿ ನಡೆದ ಘರ್ಷಣೆಯಲ್ಲಿ 151ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
Ad
ಗಲಭೆಯನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗದಿದ್ದಾಗ ಸೈನಿಕರು ಬಾಂಗ್ಲಾದೇಶದಾದ್ಯಂತ ನಗರಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಗುರುವಾರದಿಂದ ರಾಷ್ಟ್ರವ್ಯಾಪಿ ಇಂಟರ್ನೆಟ್ ಬಂದ್ ಮಾಡಲಾಗಿದೆ. ಇತ್ತ ಭಾರತೀಯರು ಬಾಂಗ್ಲಾ ತೊರೆದು ಸ್ವದೇಶ ಮರಳುತ್ತಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಬಾಂಗ್ಲಾದೇಶ ಉನ್ನತ ಕೋರ್ಟ್ ತನ್ನ ಆದೇಶವನ್ನು ಹಿಂಪಡೆದಿದೆ.
Ad
Ad