Categories: ವಿದೇಶ

ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರಕ್ಕೆ

ಮೇರಿಲ್ಯಾಂಡ್: ಸರಕು ತುಂಬಿದ್ದ ಹಡಗು ಡಿಕ್ಕಿ ಹೊಡೆದ ರಭಸಕ್ಕೆ ಮೂರೂ ಕಿಲೋಮೀಟರ್ ಉದ್ದದ ಸೇತುವೆ ಕುಸಿದು ಬಿದ್ದು ಹಲವು ಮಂದಿ ನದಿಗೆ ಬಿದ್ದು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ರಕ್ಷಣಾ ತಂಡ ಎರಡು ಮೃತದೇಹಗಳನ್ನು ಪತ್ತೆ ಹಚ್ಚಿವೆ.

ಸೇತುವೆಯ ಮೇಲೆ ರಸ್ತೆಯ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಸೇತುವೆ ಕುಸಿದು ಬಿದ್ದಿದೆ ಪರಿಣಾಮ ಇಬ್ಬರು ಕಾರ್ಮಿಕರು ಹಾಗೂ ಅವರ ವಾಹನ ಸಮೇತ ನದಿಗೆ ಬಿದ್ದಿದ್ದರು ಎನ್ನಲಾಗಿದೆ ಇದೀಗ ರಕ್ಷಣಾ ತಂಡ ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಿದೆ.

ಮೃತ ವ್ಯಕ್ತಿಗಳನ್ನು ಮೆಕ್ಸಿಕೊ ಮೂಲದ ಅಲೆಜಾಂಡ್ರೊ ಹೆರ್ನಾಂಡೆಜ್ ಫ್ಯೂಯೆಂಟೆಸ್ (35) ಮತ್ತು ಮೂಲತಃ ಗ್ವಾಟೆಮಾಲಾ ಮೂಲದ ಡೋರ್ಲಿಯನ್ ರೋನಿಯಲ್ ಕ್ಯಾಸ್ಟಿಲೊ ಕ್ಯಾಬ್ರೆರಾ (26) ಎಂದು ಗುರುತಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಮೇರಿಲ್ಯಾಂಡ್ ಸ್ಟೇಟ್ ಪೋಲೀಸ್ ಕರ್ನಲ್ ರೋಲ್ಯಾಂಡ್ ಬಟ್ಲರ್ ಸೇತುವೆ ಕುಸಿದ ಮಧ್ಯಭಾಗದಲ್ಲಿ ಸುಮಾರು 25 ಅಡಿ ಆಳದಲ್ಲಿ ಕೆಂಪು ಪಿಕಪ್ ವಾಹನ ಬಿದ್ದಿರುವುದು ಕಂಡು ಬಂದಿತ್ತು ಈ ವೇಳೆ ಪರಿಶೀಲನೆ ನಡೆಸಿದ ವೇಳೆ ಅದರಲ್ಲಿ ಇಬ್ಬರು ವ್ಯಕ್ತಿಗಳ ಶವಗಳು ಪತ್ತೆಯಾಗಿತ್ತು ಎಂದು ಹೇಳಲಾಗಿದೆ. ಇನ್ನೂ ಕೆಲವು ಮಂದಿ ನಾಪತ್ತೆಯಾಗಿದ್ದು ಅವರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

Ashitha S

Recent Posts

ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು

ಮೊಬೈಲ್‌ ನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದಿದ್ದ ಕಣಗಿಲೆ ಹೂವನ್ನು ಕಿತ್ತು ತಿಂದ ಪರಿಣಾಮ ಯುವತಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿರುವ ಅಹಿತಕರ ಘಟನೆ…

48 seconds ago

ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಲಷ್ಟನೆ ಏನು ?

ಸೋಷಿಯಲ್‌ ಮೀಡಿಯಾದಲ್ಲಿ ಹಸಿ ಬಿಸಿ ಫೋಟೋಗಳನ್ನು ಶೇರ್‌ ಮಾಡುತ್ತ, ಹಲ್‌ಚಲ್‌ ಸೃಷ್ಟಿಸುತ್ತಿದ್ದ ಕಿರುತೆರೆ ನಟಿ ಜ್ಯೋತಿ ರೈ, ಇದೀಗ ಖಾಸಗಿ…

14 mins ago

ಹುಬ್ಬಳ್ಳಿಯ ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಒಂದು ಹ್ಯಾಟ್ಸ್ ಅಪ್

ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯ ಸರ್ಕಲ್ ನಿಂದ ದೇಸಾಯಿ ಬ್ರಿಡ್ಜ್ ವರೆಗೂ ಅಪರಿಚಿತ ವಾಹನವೊಂದರ ಇಂಜಿನ್ ಆಯಿಲ್‌ ಲೀಕ್ ಆಗಿ ರಸ್ತೆಯ…

33 mins ago

ಮಲ್ಪೆಯಲ್ಲಿ ಸಮುದ್ರದ ಅಲೆಗಳ ಆರ್ಭಟ ಹೆಚ್ಚಳ : ವಾಟರ್ ಸ್ಪೋರ್ಟ್ಸ್ ಸ್ಥಗಿತ

ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮುಂದಿನ ಆದೇಶದವರೆಗೆ ಮಲ್ಪೆಯಲ್ಲಿ ಎಲ್ಲ ರೀತಿಯ ವಾಟರ್ ಸ್ಪೋರ್ಟ್ಸ್ ಸ್ಥಗಿತಗೊಳಿಸಲಾಗಿದೆ.

41 mins ago

ಫೇಲ್​ ಆದ ವಿದ್ಯಾರ್ಥಿಗಳೇ ಟೆನ್ಶನ್​ ಬೇಡ; ಮರು ಪರೀಕ್ಷೆಯ ದಿನಾಂಕ ಪ್ರಕಟ

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ,…

47 mins ago

ಪರೀಕ್ಷೆ ಫಲಿತಾಂಶಕ್ಕೆ ಹೆದರಿ ನಾಪತ್ತೆಯಾದ ವಿದ್ಯಾರ್ಥಿ : ಪೋಷಕರ ಹುಡುಕಾಟ

ಇಂದು ರಾಜ್ಯದೆಲ್ಲಡೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾದ ಹಿನ್ನಲೆ ವಿದ್ಯಾರ್ಥಿನೋರ್ವ ಪರೀಕ್ಷೆ ಫಲಿತಾಂಶಕ್ಕೆ ಭಯಪಟ್ಟು ನಾಪತ್ತೆಯಾಗಿದ್ದಾನೆ. ಘಟನೆ ಬೆಂ.ಗ್ರಾಮಾಂತರ ಜಿಲ್ಲೆ…

1 hour ago