Bengaluru 27°C

ಭ್ರಷ್ಟಾಚಾರ ವಿರೋಧಿ ಅಭಿಯಾನ: ದೇಶಾದ್ಯಂತ 200 ಜೈಲು ನಿರ್ಮಿಸಿದ ಚೀನಾ

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಬೆಂಬಲಿಸಲು ದೇಶಾದ್ಯಂತ 200 ಜೈಲುಗಳನ್ನು ನಿರ್ಮಿಸಿದೆ ಎಂದು ವರದಿಗಳು ತಿಳಿಸಿವೆ.

ಬೀಜಿಂಗ್‌: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಬೆಂಬಲಿಸಲು ದೇಶಾದ್ಯಂತ 200 ಜೈಲುಗಳನ್ನು ನಿರ್ಮಿಸಿದೆ ಎಂದು ವರದಿಗಳು ತಿಳಿಸಿವೆ.


ಚೀನಾದಲ್ಲಿ ನಿರ್ಮಿಸಲಾದ ಈ ಜೈಲನ್ನು ಲಿಯುಜಿ ಕೇಂದ್ರಗಳು ಎಂದು ಕರೆಯಲಾಗುತ್ತದೆ. ಇಲ್ಲಿ 6 ತಿಂಗಳವರೆಗೆ ಶಂಕಿತರನ್ನು ಬಂಧನದಲ್ಲಿಡಲಾಗುತ್ತದೆ. ಈ ವೇಳೆ ಕಾನೂನು ಸಲಹೆಗಾರರು ಅಥವಾ ಕುಟುಂಬದವರಿಗೆ ಶಂಕಿತರನ್ನು ಭೇಟಿ ಆಗುವ ಅವಕಾಶವಿರುವುದಿಲ್ಲ.


2023 ರಿಂದ 2027ರೊಳಗೆ ಲಿಯುಜಿ ಕೇಂದ್ರಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಅಷ್ಟೇ ಅಲ್ಲದೇ ಲಿಯುಜಿ ಕೇಂದ್ರಗಳಿಗೆ ಕೆಲವು ಕಠಿಣ ನಿಯಮಗಳನ್ನು ಮಾಡಿದ್ದಾರೆ. ಜೊತೆಗೆ ಬಂಧಿತರು ತಮಗೆ ಹಾನಿ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಕೇಂದ್ರಗಳನ್ನು ವಿನ್ಯಾಸಗೊಳಿಸಲಾಗಿದೆ.


ಶಿಕ್ಷೆ ಎಷ್ಟು ಭಯಂಕರವಾಗುತ್ತದೆ ಎಂದರೆ ಒಂದು ಪ್ರಕರಣದಲ್ಲಿ, ಮಾಜಿ ಅಧಿಕಾರಿ ಚೆನ್ ಜಿಯಾನ್ಜುನ್ ಅವರು ನಿದ್ರಾಹೀನತೆಗೆ ಒಳಗಾಗಿದ್ದರು. ಆರು ತಿಂಗಳ ಬಂಧನದಲ್ಲಿ ಪ್ರತಿದಿನ 18 ಗಂಟೆಗಳ ಕಾಲ ನೇರವಾಗಿ ಕುಳಿತುಕೊಳ್ಳುವಂತೆ ತಿಳಿಸಲಾಗಿತ್ತು ಎಂದು ವರದಿಯಾಗಿದೆ.


Nk Channel Final 21 09 2023