ವಾಷಿಂಗ್ಟನ್: ವಿಶ್ವದ ಅತಿದೊಡ್ಡ ಆರ್ಥಿಕತೆ ಹಾಗೂ ಜಾಗತಿಕ ಸೂಪರ್ ಪವರ್ ಆಗಿರುವ ಯುನೈಟೆಡ್ ಸ್ಟೇಟ್ ಅಮೆರಿಕ ದಿವಾಳಿತನದ ಅಂಚಿನಲ್ಲಿದೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಎಚ್ಚರಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್, 36 ಟ್ರಿಲಿಯನ್ ಡಾಲರ್ ರಾಷ್ಟ್ರೀಯ ಸಾಲವನ್ನು ಹೊಂದಿದ್ದು, ತನ್ನ ಹಣಕಾಸಿನ ಭವಿಷ್ಯದ ಬಗ್ಗೆ ಎಚ್ಚರಿಕೆಯನ್ನು ಹೆಚ್ಚಿಸುತ್ತಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಸ್ಥಾಪಿಸಿದ ಹೊಸ ಸಂಸ್ಥೆಯಾದ ಸರ್ಕಾರದ ದಕ್ಷತೆಯ ಇಲಾಖೆ (DOGE) ಬಿಡುಗಡೆ ಮಾಡಿದ ಡೇಟಾವು ಶೇರ್ ಮಾಡಿಕೊಂಡು, ಅಮೆರಿಕ ಪ್ರಸ್ತುತ ದಿವಾಳಿತನದ ಸೂಪರ್ ಫಾಸ್ಟ್‌ನತ್ತ ಸಾಗುತ್ತಿದೆ ಎಂದು ತಿಳಿಸಿದ್ದಾರೆ.
US ಸರ್ಕಾರವು 2023ರ ಆರ್ಥಿಕ ವರ್ಷದಲ್ಲಿ 4.47 ಟ್ರಿಲಿಯನ್ ಡಾಲರ್ ಆದಾಯವನ್ನು ಗಳಿಸಿತ್ತು. ಆದರೆ 6.16 ಟ್ರಿಲಿಯನ್ ಡಾಲರ್ ಖರ್ಚು ಮಾಡಿತ್ತು. ಇದರಿಂದಾಗಿ 2.31 ಟ್ರಿಲಿಯನ್ ಡಾಲರ್ ಕೊರತೆ ಉಂಟಾಗಿದೆ. ಕೇವಲ ನಾಲ್ಕು ತಿಂಗಳಲ್ಲಿ ಸಾಲವು 1 ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ ಎಂದು DOGE ಬಹಿರಂಗಪಡಿಸಿದೆ.
ಆತಂಕಕಾರಿಯಾಗಿ, US 2001ರಿಂದ ಬಜೆಟ್ ಹೆಚ್ಚುವರಿಯನ್ನು ದಾಖಲಿಸಿಲ್ಲ. ಇದರಿಂದಾಗಿ ಪ್ರತಿ ನಾಗರಿಕನು 100,000 ಡಾಲರ್‌ಗಿಂತ ಹೆಚ್ಚಿನ ಸಾಲದ ಹೊರೆಯನ್ನು ಹೊಂದಿದ್ದಾನೆ ಹೇಳಿದೆ.
https://x.com/elonmusk/status/1860212805439488130?