Bengaluru 27°C
Ad

ಕಾರು-ಟ್ರ್ಯಾಕ್ಟರ್ ನಡುವೆ​ ಭೀಕರ ಅಪಘಾತ : ಸವಾರ ಸಜೀವ ದಹನ

ಕಾರು-ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು 30 ವರ್ಷ ವಯಸ್ಸಿನ ವ್ಯಕ್ತಿ ಸಜೀವ ದಹನಗೊಂಡ ಘಟನೆ ಅರುಣಾಚಲ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಲೋವರ್​ ದಿಬಾಂಗ್​ ವ್ಯಾಲಿ ಜಿಲ್ಲೆಯ ಮೆಕಾ ಪ್ರದೇಶದಲ್ಲಿ ಭಾನುವಾರದಂದು ಈ ದುರ್ಘಟನೆ ಸಂಭವಿಸಿದೆ.

ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಕಾರಿನಲ್ಲಿದ್ದ ಸುಟ್ಟ ದೇಹವನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ದಾಂಬುಕ್​ ನಿವಾಸಿ ಜೀವನ್​ ಲಾಕ್ರಾ ಎಂದು ಗುರುತಿಸಲಾಗಿದೆ.

ಅಗ್ನಿಶಾಮಕ ದಳ ತಕ್ಷಣವೇ ಸ್ಥಳಕ್ಕೆ ಬಂದಿದ್ದಾರೆ. ಕೂಡಲೇ ಕಾರಿನ ಗಾಜು ಒಡೆದು ಗಾಯಾಳುವನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಅದರೆ ಅಷ್ಟರಲ್ಲಿ ಜೀವನ್​ ದೇಹವು ಬಹುಪಾಲು ಸುಟ್ಟುಹೋಗಿತ್ತು. ಪ್ರಜ್ಞಾಹೀನನಾಗಿ ಬಿದ್ದಿದ್ದನು. ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರು ವೈದ್ಯರು ಆತ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ

Ad
Ad
Nk Channel Final 21 09 2023
Ad