ಡೆನ್ಮಾರ್ಕ್: ಪ್ರಯಾಣಿಕರ ಊಟದಲ್ಲಿ ಜೀವಂತ ಇಲಿ ಕಂಡು ಬಂದ ಬೆನ್ನಲ್ಲೇ ಸ್ಪೇನ್‌ಗೆ ಹೊರಟಿದ್ದ ವಿಮಾನವನ್ನು ಡೆನ್ಮಾರ್ಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
ಸ್ಪೇನ್-ಬೌಂಡ್ ಫ್ಲೈಟ್‌ನಲ್ಲಿ ನೀಡಿದ್ದ ಊಟದ ಬಾಕ್ಸ್‌ನಲ್ಲಿ ಜೀವಂತ ಇರುವ ಇಲಿ ಓಡಾಡುತ್ತಿರುವುದು ಕಂಡುಬಂದಿದೆ. ಕೂಡಲೇ ಅವರು ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಘಟನೆಯಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿದೆ.
ಘಟನೆಗೆ ಸಂಬಂಧಿಸಿ ಏರ್ಲೈನ್ಸ್ ವಕ್ತಾರರು ಮಾತನಾಡಿ, ಊಟದ ಬಾಕ್ಸ್‌ನಲ್ಲಿ ಇಲಿ ತಪ್ಪಿಸಿಕೊಳ್ಳುವುದನ್ನು ವ್ಯಕ್ತಿಯೊಬ್ಬರು ನೋಡಿದ್ದರು. ಆದರೆ ಈಗ ಪರಿಸ್ಥಿತಿ ಶಾಂತವಾಗಿದೆ. ಇದು ಅತ್ಯಂತ ವಿರಳವಾಗಿ ಸಂಭವಿಸುವ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
Ad