ದುಬೈ: ದುಬೈನ ಮೊಟ್ಟಮೊದಲ ಕರ್ನಾಟಕ ಸಂಘ 39 ವರ್ಷಗಳ ಹೆಜ್ಜೆಗುರುತಿನೊಂದಿಗೆ ಮುನ್ನೆಡೆಯುತ್ತಿರುವ ನಮ್ಮ ಕರ್ನಾಟಕ ಸಂಘ ದುಬೈ, ಅನಿವಾಸಿ ಕನ್ನಡಿಗರ ಒಳಿತಿಗಾಗಿ ಶ್ರಮಿಸುತ್ತಾ, ಅನೇಕತೆ ಯಲ್ಲಿ ಏಕತೆ ಸಾರುತ್ತಾ ಬಂದಿದೆ.
ಇದೇ ನಿಟ್ಟಿನಲ್ಲಿ ಸಾಗುತ್ತಾ , ಪ್ರತೀತಿಯಂತೆ ಪ್ರತೀ ವರ್ಷವೂ ಆಚರಿಸಿ ಸಂಭ್ರಮಿಸುವ ಕನ್ನಡಾಂಬೆಯ ಉತ್ಸವ “ಕರ್ನಾಟಕ ರಾಜ್ಯೋತ್ಸವ” ವನ್ನು ದುಬೈನಲ್ಲಿ ನವೆಂಬರ್ 10 , 2024 ರಂದು 69ನೇ ಕರ್ನಾಟಕ ರಾಜ್ಯೋತ್ಸವದ ಜೊತೆಗೆ ಕಡಲಾಚೆಯಲ್ಲೊಂದು ಕನ್ನಡದ ವೈಭವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಲಿದೆ.
ಕಲೆ , ಸಂಸ್ಕೃತಿ , ಭಾಷೆಯನ್ನು ಆರಾಧಿಸಿ, ಗಡಿನಾಡ, ಹೊರನಾಡ, ಅನಿವಾಸಿ ಕನ್ನಡಿಗರ ಒಗಟ್ಟನ್ನು ಸಂಭ್ರಮಿಸೋಣ. ಕಡಲಾಚೆಯಲ್ಲೊಂದು ಕನ್ನಡದ ವೈಭವ ಕಾರ್ಯಕ್ರಮಕ್ಕೆ ನಿಮ್ಮೆಲ್ಲರೊಂದಿಗೆ ರಾಜಕೀಯ ಗಣ್ಯರು ಸಿನಿ ತಾರೆಯರು , ಹಾಸ್ಯ ಕಲಾವಿದರು ಸಾಹಿತಿಗಳು, ಪ್ರಖ್ಯಾತ ಗಾಯಕರು ಆಗಮಿಸಲಿದ್ದಾರೆ.
ನಿಮ್ಮ ಮನೋರಂಜನೆಗಾಗಿ ಅನೇಕ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಬಹು ವಿಶೇಷವಾದ “ಕನ್ನಡದ ಆದರ್ಶ ದಂಪತಿ” ಕಾರ್ಯಕ್ರಮಕ್ಕೆ ನೀವೆಲ್ಲಾ ಸಾಕ್ಷಿಯಾಗಲು ಬನ್ನಿ. ನಮ್ಮ ರಾಜ್ಯದ ಹಬ್ಬವನ್ನು ನಾವೆಲ್ಲರು ಪಾಲ್ಗೊಂಡು ಆಚರಿಸಿ ಆನಂದಿಸಬೇಕಾಗಿ ನಮ್ಮ ಹರಕೆ.