Bengaluru 22°C
Ad

ಯುವತಿಯರೇ ನಾಚುವಂತೆ ಮಿಸ್ ಯೂನಿವರ್ಸ್ ಕೊರಿಯಾ ಸ್ಪರ್ಧೆಯಲ್ಲಿ 80ರ ಮಹಿಳೆ

ಕೊರಿಯಾ: 80 ವರ್ಷದ ದಕ್ಷಿಣ ಕೊರಿಯಾದ ಮಾಡೆಲ್ ಮಿಸ್ ಯೂನಿವರ್ಸ್‌ನಲ್ಲಿ ಭಾಗವಹಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ ಮತ್ತು ಕನಸುಗಳನ್ನು ನನಸಾಗಿಸಬಹುದು ವಯಸ್ಸಿನ ಮಿತಿಯಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.80 ವರ್ಷದ ಈ ಮಾಡೆಲ್ ಹೆಸರು ಚೋಯ್ ಸೂನ್-ಹ್ವಾ ಉನ್. ತಾನು ಜಗತ್ತನ್ನು ಅಚ್ಚರಿಗೊಳಿಸಲು ಬಯಸುತ್ತೇನೆ ಎಂದು ಚೋಯ್ ಹೇಳಿದ್ದಾರೆ.

80ನೇ ವಯಸ್ಸಿನಲ್ಲೂ ಮಹಿಳೆಯ ಅಂದ ಹಾಗೂ ಫಿಟ್ನೆಸ್​ ಕಂಡು ನೆಟ್ಟಿಗರು ಶಾಕ್​​ ಆಗಿದ್ದಾರೆ. ಬಳುಕುವ ಬಳ್ಳಿಯಂತಿರುವ ಈಕೆ ಹದಿಹರೆಯದ ಯುವತಿಯರನ್ನೇ ನಾಚುವಂತೆ ಮಾಡಿದ್ದಾರೆ. ಮಿಸ್ ಯೂನಿವರ್ಸ್ ಕೊರಿಯಾ ಸ್ಪರ್ಧೆಯಲ್ಲಿ 31 ಇತರ ಅಂತಿಮ ಸ್ಪರ್ಧಿಗಳೊಂದಿಗೆ ಚೋಯ್ ಸ್ಪರ್ಧಿಸುತ್ತಿದ್ದಾರೆ.

 

Ad
Ad
Nk Channel Final 21 09 2023